ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಜೂರಿ ಶೇ15 ಹೆಚ್ಚಳ: ನೇಕಾರರ ಅಸಮಾಧಾನ

Last Updated 5 ಡಿಸೆಂಬರ್ 2013, 19:33 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮವು (ಕೆಎಚ್‌ಡಿಸಿ) ನೇಕಾರರಿಗೆ ನೀಡುವ ಪರಿವರ್ತನ ದರವನ್ನು (ಮಜೂರಿ) ಶೇ 15ರಷ್ಟು ಹೆಚ್ಚಳ ಮಾಡಿ ಇತ್ತೀಚೆಗೆ ಆದೇಶ ಹೊರಡಿಸಿದೆ. ಆದರೆ, ಮಜೂರಿ ಯನ್ನು ಶೇ 50ರಷ್ಟು ಹೆಚ್ಚಿಸಬೇಕು ಎಂದು ಒತ್ತಾಯಿ ಸಿದ್ದ ನೇಕಾರರು ಸರ್ಕಾರದ ಈ ಆದೇಶದಿಂದ ಅಸಮಾ ಧಾನ ಗೊಂಡಿದ್ದಾರೆ.

‘ನೇಕಾರ ಸಮುದಾಯದ ಬಹು ದಿನದ ಬೇಡಿಕೆ ಯನ್ನು ಈಡೇರಿಸಲು ಸರ್ಕಾರ ಮುಂದಾಗಿದ್ದು, ಮಜೂರಿ ಹೆಚ್ಚಳ  2013ರ ನವೆಂಬರ್‌ 1ರಿಂದಲೇ ಪೂರ್ವಾನ್ವಯವಾಗಿ ಜಾರಿಯಾಗಲಿದೆ. ಇದರಿಂದ ವರ್ಷಕ್ಕೆ ₨1.93 ಕೋಟಿ ಹೆಚ್ಚುವರಿ ಹೊರೆ ಬೀಳು ತ್ತದೆ’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಸೀಮಾ ಗರ್ಗ್‌ ಪ್ರಜಾವಾಣಿಗೆ ತಿಳಿಸಿದರು.

‘ಸರ್ಕಾರದ ಈ ಕ್ರಮದಿಂದ ಒಂದು ಮೀಟರ್‌ ಬಟ್ಟೆ ನೆಯ್ದಿದ್ದಕ್ಕೆ ನೇಕಾರರಿಗೆ ಸರಾಸರಿ ₨3 ಹೆಚ್ಚುವರಿಯಾಗಿ ಸಿಗಲಿದೆ. ಮಜೂರಿ ದರವು ನೂಲಿನ ಗುಣಮಟ್ಟ ವನ್ನು ಆಧರಿಸಿರುತ್ತದೆ’ ಎಂದು ಹೇಳಿದರು.

ಕಚ್ಚಾವಸ್ತುಗಳ ಬೆಲೆ ಜತೆಗೆ ಈಗ ಸರ್ಕಾರ ಮಜೂರಿ ದರವನ್ನೂ ಹೆಚ್ಚಿಸಿರುವುದರಿಂದ ನಿಗಮಕ್ಕೆ ನಷ್ಟವಾಗ ಲಿದೆ. ಈ ಹೆಚ್ಚುವರಿ ನಷ್ಟವನ್ನು ಸರಿದೂ ಗಿಸಲು, ನಿಗಮವು ವಿದ್ಯಾವಿಕಾಸ ಯೋಜನೆಯಡಿ  ಪೂರೈಸುತ್ತಿರುವ ಮಕ್ಕಳ ಸಮವಸ್ತ್ರಕ್ಕೆ ಶೇ 30ರಷ್ಟು ಹೆಚ್ಚಿನ ಹಣ ನೀಡುವಂತೆ ಶಿಕ್ಷಣ ಇಲಾಖೆಗೆ ಮನವಿ ಮಾಡಲಾಗಿದೆ’ ಎಂದು ಸೀಮಾ ವಿವರಿಸಿದರು.

ಕೈಮಗ್ಗ ನೇಕಾರರಲ್ಲಿ ನೈಪುಣ್ಯತೆ ಹಾಗೂ ಉತ್ಪಾ ದನೆ ಹೆಚ್ಚಿಸಲು ನೀಡುವ ಪ್ರೋತ್ಸಾಹ ಧನವನ್ನು ಕೂಡ ಶೇ 20ಕ್ಕೆ ಏರಿಸುವ ಪ್ರಸ್ತಾವಕ್ಕೆ ಸರ್ಕಾರ ಅನುಮೋ ದನೆ ನೀಡಿದೆ. ಒಂದು ವಾರದೊಳಗೆ ಆದೇಶ ಹೊರ ಬೀಳುವ ನಿರೀಕ್ಷೆ ಇದೆ. ಈಗ ಶೇ 10ರಷ್ಟು ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದರು.

ನೇಕಾರರ ಸಂಘಟನೆ ಅಸಮಾಧಾನ
‘ನಾವು ಮಜೂರಿಯನ್ನು ಶೇ 50 ರಷ್ಟು ಹೆಚ್ಚಿಸಲು ಬೇಡಿಕೆ ಸಲ್ಲಿಸಿದ್ದೆವು. ಆದರೆ, ಕೇವಲ 15ರಷ್ಟು ಹೆಚ್ಚಿ ಸುವ ಮೂಲಕ ಸರ್ಕಾರ ಕಣ್ಣೊರೆಸುವ ತಂತ್ರ ಮಾಡು ತ್ತಿದೆ. ಇದು ನ್ಯಾಯವೇ’ ಎಂದು ರಾಜ್ಯ ಕೈಮಗ್ಗ ನೇಕಾ ರರ ಸಂಘದ ಉಪಾಧ್ಯಕ್ಷ ಎನ್.ಜೆ.ಮಾಳವದೆ ಪ್ರಶ್ನಿಸು ತ್ತಾರೆ.

‘ಧಾರವಾಡ, ಬಾಗಲಕೋಟೆ, ಗದಗ, ವಿಜಾಪುರ, ಬೆಳಗಾವಿ ಸೇರಿದಂತೆ ರಾಜ್ಯದಲ್ಲಿ 10,000ಕ್ಕೂ ಹೆಚ್ಚು ನೇಕಾರ ಕುಟುಂಬಗಳು ಬಟ್ಟೆ ನೇಯುವ ವೃತ್ತಿ ಅವ ಲಂಬಿಸಿವೆ. ಒಬ್ಬ ನೇಕಾರ ದಿನಕ್ಕೆ ಐದರಿಂದ ಆರು ಮೀಟರ್‌ ಬಟ್ಟೆ ನೇಯುತ್ತಾನೆ. ಮೀಟರ್‌ಗೆ ಸರಾಸರಿ ₨20 ಈಗಾಗಲೇ ಸಿಗುತ್ತಿದೆ. ಈಗ ಏರಿಸಿ ರುವುದರಿಂದ ಮಜೂರಿ ₨23 ಆಗುತ್ತದಷ್ಟೇ. ತರಕಾರಿ ತೆಗೆದುಕೊ ಳ್ಳುವುದಕ್ಕೂ ಈ ಹಣ ಸಾಲುವುದಿಲ್ಲ’ ಎಂದು ಅಸ ಮಾಧಾನ ವ್ಯಕ್ತಪಡಿಸಿದರು.

‘ಮಜೂರಿ ಪ್ರಮಾಣ ಹೆಚ್ಚಿಸಿದಾಗ, ಪ್ರತಿವರ್ಷ ಜೂನ್‌ನಿಂದ ಪೂರ್ವಾನ್ವ ಯವಾಗುವಂತೆ ನೀಡಲಾ ಗುತ್ತಿತ್ತು. ಈ ಬಾರಿ ನವೆಂಬರ್‌ 1ರಿಂದಲೇ ಪೂರ್ವಾ ನ್ವಯವಾಗುವಂತೆ ನೀಡಲಾಗುತ್ತಿದೆ. ಅದಕ್ಕೆ ಬದಲಾಗಿ ಹೆಚ್ಚುವರಿ ಮಜೂರಿಯನ್ನು ಜೂನ್‌ನಿಂದಲೇ ನೀಡ ಬೇಕು ಹಾಗೂ ಮಜೂರಿ ಪ್ರಮಾಣವನ್ನು ಶೇ 50ಕ್ಕೆ ಹೆಚ್ಚಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT