ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಮಠಕ್ಕೆ ಅನುದಾನ ನೀಡಿದರೆ ಪಾಪ ಶಮನ ಆಗುವುದಿಲ್ಲ'

Last Updated 26 ಏಪ್ರಿಲ್ 2013, 6:34 IST
ಅಕ್ಷರ ಗಾತ್ರ

ಧಾರವಾಡ: `ಬಿಜೆಪಿ ಪಕ್ಷದ ರಾಜಕಾರಣಿಗಳು ಕೋಟಿಗಟ್ಟಲೆ ಹಣ ಲೂಟಿ ಮಾಡಿ ಇಂದು ಮತದಾರರ ಮುಂದೆ ಮತಯಾಚನೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಬಜೆಟ್‌ನಲ್ಲಿ 45 ಕೋಟಿ ರೂಪಾಯಿಯನ್ನು ದೇವರಿಗೆ ಸಮರ್ಪಣೆ ಮಾಡಿದರು. ಆದರೆ, ಅವರು ಮಾಡಿದ ಪಾಪ ಇದರಿಂದ ಶಮನ ಆಗುವುದಿಲ್ಲ' ಎಂದು ಮಾಜಿ ಸಚಿವ ಎ.ಎಂ.ಹಿಂಡಸಗೇರಿ ವ್ಯಂಗ್ಯವಾಡಿದರು.

ನವಲೂರು ಗ್ರಾಮದ ವಾಲ್ಮೀಕಿ ಓಣಿಯಲ್ಲಿ ಗುರುವಾರ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, `ಬಿಜೆಪಿ ಪಕ್ಷದ ಎಲ್ಲ ಸಚಿವರ ಜೈಲು ವಾಸ ಅನುಭವಿಸಿ ಬಂದಿದ್ದಾರೆ. ಬಿಜೆಪಿ ಪಕ್ಷದಲ್ಲಿಯೇ ಇದ್ದು ಮಂತ್ರಿಯಾದವರು ಈಗ ಬೇರೆ ಬೇರೆ ಪಕ್ಷವನ್ನು ಕಟ್ಟಿಕೊಂಡು ಅಖಾಡಕ್ಕೆ ಇಳಿದಿದ್ದಾರೆ.

ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಗುರುತು ಫ್ಯಾನ್ ಇದೆ. ಈ ಫ್ಯಾನ್ ರಾಜ್ಯದಲ್ಲಿ ಎಂದೂ ತಿರುಗಲಾರದು. ಇನ್ನು ಕೆಜೆಪಿ ಪಕ್ಷದ ಗುರುತು ಹೋಳು ಟೆಂಗಿನಕಾಯಿ ಇದರಲ್ಲಿ ಯಡಿಯೂರಪ್ಪನಿಗೆ ಒಂದು ಹೋಳು ಇನ್ನೊಂದು ಶೋಭಾ ಕರಂದ್ಲಾಜೆಗೆ' ಎಂದು ವ್ಯಂಗವಾಡಿದ ಅವರು, `ಇಂಥ ಪಕ್ಷಗಳಿಗೆ ಮತದಾರರು ಮತ ಹಾಕಿದರೆ ಅಭಿವೃದ್ಧಿಯಾಗುವುದಿಲ್ಲ.

ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ. ಆಗ ನೀರಿನ ಸಮಸ್ಯೆ, ಆಶ್ರಯ ಯೋಜನೆ ಸಮಸ್ಯೆ, ವಿದ್ಯುತ್ ಸಮಸ್ಯೆ ಸೇರಿದಂತೆ ಎಲ್ಲ ಸಮಸ್ಯೆಗಳನ್ನು ಕಾಂಗ್ರೆಸ್ ಪಕ್ಷ ನಿವಾರಣೆ ಮಾಡಲಿದೆ' ಎಂದರು,

ಅಭ್ಯರ್ಥಿ ವಿನಯ ಕುಲಕರ್ಣಿ, ತುರಮರಿಮಠ, ಹು-ಧಾ ಮಹಾನಗರ ಪಾಲಿಕೆಯ ಸದಸ್ಯ ದೀಪಕ ಚಿಂಚೊರೆ, ಯಾಶೀನ್ ಹಾವೇರಿಪೇಟ, ರಘು ಲಕ್ಕಣ್ಣವರ, ಈರಣ್ಣ ಮಲ್ಲಿಗವಾಡ, ಫಕ್ಕೀರಪ್ಪ ಪೂಜಾರ, ಯಲ್ಲಪ್ಪ ಕನಕೂರ, ಸುಬ್ಬರಾವ್ ಘೋರ್ಪಡೆ, ಹನುಮಂತಪ್ಪ ಕರಾಡೆ, ಕರೆಪ್ಪ ಕೊಟೆಕಲ್ಲೂರ, ಬಸಪ್ಪ ಮಾಲನವರ ಮತ್ತಿತರರು ಇದ್ದರು. ಪಾಲಿಕೆ ಮಾಜಿ ಸದಸ್ಯ ಪ್ರಕಾಶ ಘಾಟಗೆ ಅಧ್ಯಕ್ಷತೆ ವಹಿಸಿದ್ದರು. ಜಗದೀಶ ರೊಟ್ಟಿಮಠ ನಿರೂಪಿಸಿದರು. ಸಿ.ಎಸ್.ಸಾಲಿಗೌಡರ ವಂದಿಸಿದರು.

ದರ್ಶನ್ ಮತಯಾಚನೆ ಇಂದು
ಧಾರವಾಡ:
ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಅವರ ಪರವಾಗಿ ಚಿತ್ರನಟ ದರ್ಶನ್ ಇದೇ 26ರಂದು ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪ್ರಚಾರ ನಡೆಸಲಿದ್ದಾರೆ.

ಮಧ್ಯಾಹ್ನ 3ಕ್ಕೆ ನರೇಂದ್ರ ಗ್ರಾಮದಿಂದ ಪ್ರಚಾರ ಆರಂಭಿಸುವ ಅವರು, 4ಕ್ಕೆ ಗರಗ, 5ಕ್ಕೆ ಉಪ್ಪಿನ ಬೆಟಗೇರಿ, 6ಕ್ಕೆ ಅಮ್ಮಿನಭಾವಿ ಮತ್ತು 7ಕ್ಕೆ ಹೆಬ್ಬಳ್ಳಿ ಗ್ರಾಮಗಳಲ್ಲಿ ವಿನಯ ಕುಲಕರ್ಣಿ ಪರವಾಗಿ ಮತಯಾಚನೆ ಮಾಡಿ ರಾತ್ರಿ 8ರಿಂದ 10ರವರೆಗೆ ನಗರದ 3ರಿಂದ 10ನೇ ವಾರ್ಡ್‌ಗಳಲ್ಲಿ ಪಾದಯಾತ್ರೆ ಮೂಲಕ ಪ್ರಚಾರ ನಡೆಸುವರು ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಪ್ರಶಾಂತ ಕೇಕರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT