ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿಯ ಅಗಸ್ಟಿನ್‌ ಚಾಂಪಿಯನ್‌

ರಾಜ್ಯ ಮುಕ್ತ ಚೆಸ್‌ ಪಂದ್ಯಾವಳಿ
Last Updated 5 ಡಿಸೆಂಬರ್ 2013, 6:29 IST
ಅಕ್ಷರ ಗಾತ್ರ

ಭದ್ರಾವತಿ: ಇಲ್ಲಿನ ಲಯನ್ಸ್‌ ಕ್ಲಬ್ ಸಭಾಂಗಣದಲ್ಲಿ ಭಾನುವಾರ ಮುಕ್ತಾಯವಾದ ಎರಡು ದಿನಗಳ ರಾಜ್ಯಮಟ್ಟದ ಮುಕ್ತ ಚದುರಂಗ ಸ್ಪರ್ಧೆಯಲ್ಲಿ ಮಡಿಕೇರಿಯ ಅಗಸ್ಟಿನ್ ಮೊದಲ ಸ್ಥಾನವನ್ನು ಪಡೆಯುವ ಮೂಲಕ ಪ್ರಶಸ್ತಿ ಮುಡಿಗೇರಿಸಿ ಕೊಂಡರು.

ತಾಲ್ಲೂಕು ಚೆಸ್‌ ಅಸೋಸಿಯೇಷನ್‌ ಹಾಗೂ ಲಯನ್ಸ್ ಕ್ಲಬ್‌ ಸಂಯುಕ್ತವಾಗಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಸುಮಾರು 295 ಕ್ರೀಡಾಪಟುಗಳು ಭಾಗವಹಿಸಿದ್ದರು.

ಭದ್ರಾವತಿ ನಿಖಿಲ್‌ ಆರ್‌.ಉಮೇಶ್ 2ನೇ ಸ್ಥಾನ ಹಾಗೂ ದಾವಣಗೆರೆ ಲಿಖಿತ್ ಚಿಲ್ಕುರಿ 3ನೇ ಸ್ಥಾನ ಪಡೆದರು.


ಸ್ಪರ್ಧೆಯಲ್ಲಿ ಶಿರಸಿಯ ಅಂಗವಿಕಲ ಬಾಲಕ ಸಮರ್ಥ್ ಜಿ.ರಾವ್ ಭಾಗವಹಿಸಿ, ನೋಡುಗರ ಗಮನ ಸೆಳೆದರು. ಅವರು ಒಟ್ಟು ಐದು ಅಂಕ ಪಡೆಯುವ ಮೂಲಕ ಟೂರ್ನಿಯ ಗೌರವ ಬಹುಮಾನ ಪಡೆದರು.

ವಿಜೇತರಿಗೆ ಅತಿಥಿಗಳಾದ ದೇವರಾಜ್, ಎನ್‌.ಕೆ.ರಾಮಕೃಷ್ಣ, ಪಿ.ಸೋಮಶೇಖರಪ್ಪ, ನಾಗರಾಜ, ಜಿ.ಆನಂದಕುಮಾರ್, ತಿಪ್ಪೇಸ್ವಾಮಿ, ಎ.ವಿ.ಮಾಲತೇಶ್, ಉಮೇಶ್, ಜೆ.ಮಂಜುನಾಥ, ಎನ್‌.ಬಿ.ಪಾಲಾಕ್ಷಿ, ಜಿ.ಎಸ್‌.ನಾಗರಾಜ್ ಬಹುಮಾನ ವಿತರಿಸಿದರು.

ಮೊದಲ ಹತ್ತು ಸ್ಥಾನ ಪಡೆದವರ ವಿವರ: ಅಗಸ್ಟಿನ್ (ಮಡಿಕೇರಿ), ನಿಖಿಲ್ ಆರ್‌.ಉಮೇಶ್ (ಭದ್ರಾವತಿ), ಲಿಖಿತ್ ಚಿಲ್‌ಕುರಿ (ದಾವಣಗೆರೆ), ಟಿ.ಎಸ್‌. ಫಣೀಂದ್ರ (ತುಮಕೂರು), ಚಿರಂತ್ (ಶಿವಮೊಗ್ಗ). ಎಸ್‌.ನಾಗಕಿರಣ್ (ಭದ್ರಾವತಿ), ಸಂತೋಷ್ ಮೋಹನ್ ದಾಸ್ ಭಂಡಾರಿ (ಶಿರಸಿ), ಎನ್‌. ಲೋಕೇಶ್ (ತುಮಕೂರು), ಸಂಜಯ್ ಸಿಂದಿಯಾ (ಬೆಂಗಳೂರು), ಆನಂದ್ ವಿಠಲ್ (ತುಮಕೂರು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT