ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡುಗಟ್ಟಿದ ದು:ಖ- ಕುಸಿದುಬಿದ್ದ ಹೆತ್ತಮ್ಮ...

Last Updated 25 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಹೈದರಾಬಾದ್: ಕರೀಂ ನಗರ ಜ್ಲ್ಲಿಲಾ ಕೇಂದ್ರದಿಂದ 197 ಕಿ.ಮೀ ದೂರ ಇರುವ ಕಿಶನ್‌ಜಿ ಸ್ವಗ್ರಾಮ ಪೆದ್ದಪಲ್ಲಿಯಲ್ಲಿ ಈಗ ದುಃಖ ಮಡುಗಟ್ಟಿದೆ. ಗ್ರಾಮದ ಹೆಮ್ಮೆಯ ಮಗನನ್ನು ಕಳೆದುಕೊಂಡ ವಾತಾವರಣ ಅಲ್ಲಿದೆ.

ಮುಲ್ಲೊಜುಲ್ಲಾ ಎಂಬ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಕಿಶನ್‌ಜಿ ಅವರ ಅಜ್ಜ ಸ್ವಾತಂತ್ರ್ಯ ಹೋರಾಟಗಾರ. ವಾರಂಗಲ್‌ನ ಎಸ್‌ಎಸ್‌ಆರ್ ಕಾಲೇಜಿನಲ್ಲಿ ಬಿ.ಕಾಂ ವ್ಯಾಸಂಗ ಮಾಡಿದ ಅವರಿಗೆ ಆ ಹಂತದಲ್ಲೇ, ನಕ್ಸಲ್ ಪರ ಸಹಾನುಭೂತಿ ಹೊಂದಿದ್ದ ಸಾಹಿತಿಗಳಾದ ವರವರರಾವ್ ಮತ್ತು ಕೊಲ್ಲಾಜಿ ನಾರಾಯಣರಾವ್ ಅವರ ಸಂಪರ್ಕ ಬೆಳೆದಿತ್ತು.

ಆಂಧ್ರದಲ್ಲಿ ಪೀಪಲ್ಸ್ ವಾರ್ ಗ್ರೂಪ್ ಕಾರ್ಯದರ್ಶಿಯಾಗಿದ್ದ ಕಿಶನ್, ನಂತರ ಪಶ್ಚಿಮ ಬಂಗಾಳದತ್ತ ಮುಖ ಮಾಡಿದ್ದರು.

ಪುತ್ರನ ಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆ, ಇದೇ ಗ್ರಾಮದಲ್ಲಿರುವ ತಾಯಿ ಮಧುರಮ್ಮ ಆಘಾತದಿಂದ ಕುಸಿದು ಬಿದ್ದರು. 70ರ ದಶಕದಲ್ಲಿ ವಿದ್ಯಾರ್ಥಿ ದೆಸೆಯಿಂದಲೇ ಹೋರಾಟದಲ್ಲಿ ಧುಮುಕಿದ ಕಿಶನ್‌ಜಿ  ನಾಲ್ಕು ವರ್ಷಗಳ ನಂತರ ಭೂಗತರಾಗಿದ್ದರು. ಅಂದಿನಿಂದ ಮಧುರಮ್ಮ ಮಗನನ್ನು ನೋಡಿಲ್ಲ. ಕಿಶನ್‌ಜಿ ಕಿರಿಯ ಸಹೋದರ ಕೂಡಾ ನಕ್ಸಲ್ ಚಳವಳಿಯಲ್ಲಿ ಸಕ್ರಿಯರಾಗಿದ್ದಾರೆ. 

ಅಂತಿಮ ವಿಧಿ, ವಿಧಾನಗಳನ್ನು ನಡೆಸಲಾದರೂ ಶವವನ್ನು ಕುಟುಂಬಕ್ಕೆ ಒಪ್ಪಿಸುವಂತೆ ಹಿರಿಯ ಸಹೋದರ ಆಂಜನೇಯಲು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT