ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಪುರ: ಕಾಂಗ್ರೆಸ್-ಟಿಎಂಸಿ ಮುಖಾಮುಖಿ

Last Updated 13 ಜನವರಿ 2012, 19:30 IST
ಅಕ್ಷರ ಗಾತ್ರ

ಇಂಫಾಲ (ಪಿಟಿಐ): ಯುಪಿಎ ಮಿತ್ರಪಕ್ಷಗಳಾದ  ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷಗಳು ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ  ಮುಖಾಮುಖಿಯಾಗಿ ಸ್ಪರ್ಧಿಸಲಿವೆ.

ಕಾಂಗ್ರೆಸ್ ಎಲ್ಲಾ 60 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ, ತೃಣಮೂಲ ಕಾಂಗ್ರೆಸ್‌ನಿಂದ 47 ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಟಿಎಂಸಿ ಇದೇ ಮೊದಲಬಾರಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಚುನಾವಣಾ ಅಖಾಡಕ್ಕಿಳಿದಿದೆ.

ವಿಧಾನಸಭೆಯಲ್ಲಿ ಟಿಎಂಸಿಯ ಒಬ್ಬ ಶಾಸಕ ಮಾತ್ರ ಇದ್ದಾರೆ. ಕಳೆದ ವರ್ಷ ಪಶ್ಚಿಮ ಇಂಫಾಲದ ಕೊಂತೌಜಮ್  ಕ್ಷೇತ್ರಕ್ಕೆ ನಡೆದಿದ್ದ ಉಪ ಚುನಾವಣೆಯಲ್ಲಿ ಟಿಎಂಸಿಯ ಶರತ್ ಸಿಂಗ್ ಜಯಶಾಲಿಯಾಗಿದ್ದರು. ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ ಎಂದು ಪಕ್ಷದ ವೀಕ್ಷಕ ಸೌರವ್ ಚೌಧರಿ ಹೇಳಿದ್ದಾರೆ.
 291 ನಾಮಪತ್ರ ಕ್ರಮಬದ್ಧ: ಈ ತಿಂಗಳ 28ರಂದು ನಡೆಯುವ ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು 291 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. 

 ನಾಮಪತ್ರ ಪರಿಶೀಲನೆ ಕಾರ್ಯ ಶುಕ್ರವಾರ ಮುಕ್ತಾಯಗೊಂಡಿದ್ದು, 291 ನಾಮಪತ್ರಗಳು ಕ್ರಮಬದ್ಧವಾಗಿವೆ. ನಾಮಪತ್ರ ವಾಪಸಾತಿಗೆ ಶನಿವಾರ ಕಡೇ ದಿನವಾಗಿದ್ದು, ನಂತರ ಅಂತಿಮವಾಗಿ ಕಣದಲ್ಲಿ ಉಳಿಯುವವರ ಸಂಖ್ಯೆಯ ಸ್ಪಷ್ಟ ಚಿತ್ರಣ ದೊರಕಲಿದೆ.

ಜೈಲಿನಲ್ಲಿರುವ ಮಣಿಪುರ ಪೀಪಲ್ಸ್ ಪಕ್ಷದ ವೈ. ಮಂಗಿ ಮತ್ತು ಪಕ್ಷೇತರ ಅಭ್ಯರ್ಥಿ ಇಟೊಂಬಾಸಿಂಗ್ ಕ್ರಮವಾಗಿ ಇಂಫಾಲ ಪೂರ್ವ ಜಿಲ್ಲೆಯ ಹೈಂಗಾಂಗ್ ಮತ್ತು ಕೈರಾವೊ ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದಾರೆ. ಉಗ್ರಗಾಮಿಗಳ ಜತೆ ಸಂಪರ್ಕ ಹೊಂದಿರುವ ಆಪಾದನೆಗಾಗಿ ಈ ಇಬ್ಬರನ್ನು ಬಂಧಿಸಲಾಗಿದೆ. ರಾಜ್ಯದ 2357 ಮತಗಟ್ಟೆ ಪೈಕಿ 160 ಮತಗಟ್ಟೆಗಳನ್ನು ಬಿಟ್ಟು ಉಳಿದವು ಅತಿ ಸೂಕ್ಷ್ಮ ಅಥವಾ ಸೂಕ್ಷ್ಮ ಮತಗಟ್ಟೆ ಂದು ಗುರುತಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT