ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ ಚಲಾಯಿಸಿದರೆ ‘ಕೋಟ್ಯಧಿಪತಿ’!

Last Updated 7 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಗ್ಯಾಂಗ್ಟಕ್‌ (ಪಿಟಿಐ): ಸಿಕ್ಕಿಂ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ ತಮ್ಮ ಪಕ್ಷ ಸಿಕ್ಕಿಂ ಡೆಮೊಕ್ರಟಿಕ್‌ ಫ್ರಂಟ್‌ (ಎಸ್‌ಡಿಎಫ್‌) ಪರ ಮತ ಚಲಾಯಿಸಿದರೆ ರಾಜ್ಯದಲ್ಲಿರುವ ಪ್ರತಿಯೊಬ್ಬರನ್ನೂ ‘ಕೋಟ್ಯಧಿಪತಿ’ ಮಾಡುವುದಾಗಿ ಸಿಕ್ಕಿಂ ಮುಖ್ಯಮಂತ್ರಿ ಪವನ್‌ ಕುಮಾರ್‌ ಚಾಮ್ಲಿಂಗ್‌ ಭರವಸೆ ನೀಡಿದ್ದಾರೆ. ಆದರೆ, ಅವರ ಈ ಹೇಳಿಕೆಗೆ ವಿರೋಧಿಗಳಿಂದ ತೀವ್ರ ಟೀಕೆ ವ್ಯಕ್ತವಾಗಿದೆ.

‘ಸಿಕ್ಕಿಂನಲ್ಲಿರುವ ಪ್ರತಿಯೊಬ್ಬರನ್ನು ಕೋಟ್ಯಧಿಪತಿಯಾಗಿ ಮಾಡಲು ಮುಂಬರುವ ದಿನಗಳಲ್ಲಿ ಶ್ರಮ ವಹಿಸಲಾಗುವುದು’ ಎಂದು ಎಸ್‌ಡಿಎಫ್‌ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ.

2012–13ನೇ ಸಾಲಿ­ನಲ್ಲಿ ಸಿಕ್ಕಿಂ ರಾಜ್ಯದಲ್ಲಿ ತಲಾ ಆದಾಯ ₨1,42,625 ಇತ್ತು. ಇದು ದೇಶದಲ್ಲಿಯೇ ಅತ್ಯಧಿಕ. ರಾಷ್ಟ್ರೀಯ ಸರಾಸರಿ ಮೀರಿ ಮುನ್ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT