ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ ಬೇಕಿದ್ದರೆ ಹೆಣ್ಣು ಹುಡುಕಿ ಕೊಡಿ

Last Updated 9 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಜಿಂದ್‌(ಪಿಟಿಐ): ಮತ ಕೇಳಲು ಹೊರಡುವ ಹರಿಯಾಣ ಲೋಕ­ಸಭೆ ಅಭ್ಯರ್ಥಿ­ಗಳಿಗೆ ವಿಚಿತ್ರ ಸಮಸ್ಯೆ­ಯೊಂದು ಎದುರಾಗು­ತ್ತಿದೆ. ಮತ ಕೇಳಲು ಬಂದ ಅಭ್ಯರ್ಥಿ­ಗಳಿಗೆ, ‘ನಮಗೆ ಹೆಣ್ಣು ಹುಡುಕಿ ಕೊಟ್ಟು ಮತ ಗಿಟ್ಟಿಸಿಕೊಳ್ಳಿ’ ಎಂದು ಇನ್ನೂ ಮದುವೆ­ಯಾಗ­ದಿರುವ ಮತದಾರರು ಬೇಡಿಕೆ ಮುಂದಿಡುತ್ತಿದ್ದಾರೆ.

ರಾಜ್ಯವು ದೇಶದಲ್ಲೇ ಕಡಿಮೆ ಪುರುಷ–ಮಹಿಳೆ ಅನುಪಾತ ಹೊಂದಿದ್ದು, ಬಿಬಿಪುರ್‌ ಗ್ರಾಮ ಪಂಚಾಯಿತಿ ಮುಖ್ಯಸ್ಥ ಸುನಿಲ್‌ ಜಗ್ಲನ್‌ ಅವರ ನೇತೃತ್ವದ ‘ಅವಿವಾಹಿತ ಪುರುಷರ ಸಂಘಟನೆ’ ಈ ರೀತಿಯಾಗಿ ಹೊಸ ಬೇಡಿಕೆಯನ್ನು ಮುಂದಿಟ್ಟಿದೆ.

‘ಮತ ಕೇಳಲು ಹಲವು ಅಭ್ಯರ್ಥಿಗಳು ಗ್ರಾಮಕ್ಕೆ ಬಂದರೂ ಯಾವೊಬ್ಬ ಅಭ್ಯರ್ಥಿಯೂ ನಮ್ಮ ಬೇಡಿಕೆಗೆ ಗಮನ ಹರಿಸಿಲ್ಲ. ನಮ್ಮ ಬೇಡಿಕೆಯಿಂದಾಗಿ ಎಲ್ಲ ಯುವಕರಿಗೆ ಹುಡುಗಿಯರು ಸಿಗುತ್ತಾರೆ ಎಂದಲ್ಲ. ಆದರೆ ಈ ವಿಚಾರದ ಕುರಿತಾಗಿ ಗಮನ ಸೆಳೆಯುವುದು ನಮ್ಮ ಕಾಳಜಿ’ ಎಂದು ಸುನಿಲ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT