ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಗಟ್ಟೆ ಅಧಿಕಾರಿಗಳ ನೇಮಕ

Last Updated 3 ಫೆಬ್ರುವರಿ 2011, 19:10 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಮತಗಟ್ಟೆ ಅಧಿಕಾರಿ ನೇಮಕ ಪ್ರಕ್ರಿಯೆಗೆ ತಾಲ್ಲೂಕು ಕಚೇರಿಯಲ್ಲಿ ಗುರುವಾರ ಚಾಲನೆ ನೀಡಲಾಯಿತು. ತಾಲ್ಲೂಕಿನಲ್ಲಿ ಒಟ್ಟು 222 ಮತ ಗಟ್ಟೆಗಳಿದ್ದು, ಒಟ್ಟು 214 ಮತಗಟ್ಟೆ ಗಳಿಗೆ ಅಧಿಕಾರಿಗಳನ್ನು ನೇಮಿಸಲಾಯಿತು.

ಚುನಾವಣೆ ಸಂದರ್ಭಗಳಲ್ಲಿ ಮತ ದಾರರ ಪಟ್ಟಿಯಲ್ಲಿ ಉಂಟಾಗುವ ಗೊಂದಲ ಮತ್ತು ಆತಂಕ ನಿವಾರಿ ಸುವ ಉದ್ದೇಶದಿಂದ ಚುನಾವಣಾ ಆಯೋಗವು ಈ ಕ್ರಮ ಕೈಗೊಂಡಿದ್ದು, ಮತದಾರರ ಪಟ್ಟಿ ಪರಿಷ್ಕರಣೆ, ಮತದಾರರ ಹೆಸರುಗಳ ಸೇರ್ಪಡೆ, ಹೊರತೆಗೆಯುವಿಕೆ ಮುಂತಾದ ಪ್ರಕ್ರಿಯೆಯನ್ನು ಅಧಿಕಾರಿಗಳು ನಿರ್ವಹಿಸ ಲಿದ್ದಾರೆ. ‘ತಾಲ್ಲೂಕಿನ 214 ಮತಗಟ್ಟೆಗಳಿಗೆ ಅಧಿಕಾರಿಗಳನ್ನು ನೇಮಿಸಿದ್ದೇವೆ. ಇನ್ನುಳಿದ 8 ಮತಗಟ್ಟೆಗಳಿಗೆ ಅಧಿಕಾರಿಗಳ ನೇಮಕಕ್ಕೆ ಶೀಘ್ರ ಕ್ರಮ ಕೈ ಗೊಳ್ಳು ತ್ತೇವೆ. ಕಂದಾಯ ಅಧಿಕಾರಿ ಜಿ.ಟಿ. ಮುನಿಕೃಷ್ಣಪ್ಪ, ಚಿಕ್ಕರಾಮಣ್ಣ, ಸುಬ್ರಮಣಿ, ದ್ವಾರಕಿನಾಥ, ಶ್ರೀನಿವಾಸ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT