ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನದ ಜಾಗೃತಿ ಜಾಥಾ

Last Updated 5 ಏಪ್ರಿಲ್ 2013, 5:28 IST
ಅಕ್ಷರ ಗಾತ್ರ

ಕಲಘಟಗಿ: ಸ್ಥಳಿಯ ಗುಡ್ ನ್ಯೂಸ್ ಕಲಾ ಹಾಗೂ ವಾಣಿಜ್ಯ ಪ್ರಥಮ ದರ್ಜೆ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಬೋಧಕರೊಂದಿಗೆ ಕಾಲೇಜ ಆವರಣದಿಂದ ಪಟ್ಟಣದ ಮುಖ್ಯ ಬೀದಿಗಳಲ್ಲಿ ಮತಾಧಿಕಾರವೇ-ಜನಾಧಿಕಾರ ಎಂಬ ಘೋಷಣೆಯೊಂದಿಗೆ ಮತದಾನದ ಜಾಗೃತಿ ಜಾಥಾವನ್ನು ಗುರುವಾರ ನಡೆಸಿದರು.

ನೂರಾರು ವಿದ್ಯಾರ್ಥಿಗಳು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಮತಕ್ಷೇತ್ರದ ಜನರು ನೊರಕ್ಕೆ ನೂರರಷ್ಟು ಮತದಾನ ಮಾಡಿ ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು, ನಮ್ಮ ರಾಷ್ಟ್ರದ ಪ್ರಜಾ ಪ್ರಭುತ್ವದ ತಳಹದಿಯನ್ನು ಗಟ್ಟಿಗೊಳಿಸಬೇಕು ಮತದಾರರು ಯಾವುದೇ ಆಮಿಶಗಳಿಗೆ ಬಲಿಯಾಗದೆ ಪ್ರಭುದ್ದ ಅಭ್ಯರ್ಥಿಯನ್ನು ಆಯ್ಕೆಮಾಡಬೇಕು.

18 ವರ್ಷ ತುಂಬಿದ ಪ್ರತಿಯೊಬ್ಬರು ಮತದಾರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಕಡ್ಡಾಯವಾಗಿ ನೋಂದಾಯಿಸಿ ಕೊಳ್ಳಬೇಕು. ಭ್ರಷ್ಟ್ರಾಚಾರವನ್ನು ತೊಲಗಿಸಬೇಕು ಹೀಗೆ ಹತ್ತು ಹಲವು ಮನವಿಗಳನ್ನು ಮಾಡಿದರು.

ಮತದಾನದಿಂದ ದೂರ:ಎಚ್ಚರಿಕೆ
ತಹಶೀಲ್ದಾರ್ ಗುಳಗುಳಿ ಆಗಮಿಸುತ್ತಿದ್ದಂತೆಯೇ ಮಹಾವಿದ್ಯಾಲಯದ 2012-13ನೆ ಸಾಲಿನ ಪದವಿ ವಿದ್ಯಾರ್ಥಿಗಳಿಗೆ ಅವರ ಬೋಧನಾ ಶುಲ್ಕ, ಪರಿಶಿಷ್ಟ ಜಾತಿ-ಪಂಗಡದ ಶಿಷ್ಯವೇತನ ಹಣಕಾಸಿನ ವರ್ಷ ಮುಗಿದರೂ ಇಂದಿನವರೆಗೂ ನೀಡಿರುವುದಿಲ್ಲ ಕಾರಣ ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಲು ಆಗ್ರಹಿಸಿದರಲ್ಲದೆ ಗ್ರಾಮೀಣ ಪ್ರದೇಶದ ಆರ್ಥಿಕವಾಗಿ ದುರ್ಬಲರಾದ ತಮ್ಮ ಕುಟುಂಬಗಳು ಸಂಕಷ್ಟಕ್ಕೆ ಒಳಗಾಗಿವೆ ಕಾರಣ ಮತದಾನ ದಿನದ ಒಳಗಾಗಿಯೇ ತಮಗೆ ಈ ಹಣವು ಸಂದಾಯವಾಗುವಂತೆ ಮಾಡಲು ಆಗ್ರಹಿಸುತ್ತಾ ತಪ್ಪಿದಲ್ಲಿ ತಾವು ಮತದಾನದಿಂದ ದೂರ ಉಳಿಯುವುದಾಗಿ ಎಚ್ಚರಿಸಿದರು.

ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಗುಳಗುಳಿ, ವಿದ್ಯಾರ್ಥಿಗಳಾದ ನೀವು ಮತದಾನದಿಂದ ದೂರ ಉಳಿಯುವ ಮಾತನ್ನಾಡಕೂಡದು ನಿಮ್ಮ ಸಮಸ್ಯೆಯ ಪರಿಹಾರಕ್ಕೆ ಹತ್ತು ಹಲವು ದಿಸೆಗಳಿವೆ ತಾನು ಸಂಬಂಧಿಸಿದ ಅಧಿಕಾರಿಗಳೊಂದಿಗೆ ತಕ್ಷಣ ಚರ್ಚಿಸಿ ಸರಕಾರದ ಗಮನಕ್ಕೂ ತಂದು ತಮ್ಮೆಲ್ಲರಿಗೂ ನ್ಯಾಯವನ್ನು ದೊರಕಿಸಿಕೊಡುತ್ತೇನೆ ಎಂದರು.

ಅಲ್ಲದೇ ಸ್ವಯಂ ಸ್ಪೂರ್ತಿಯಿಂದ ಮಹಾವಿದ್ಯಾಲಯದ ಬೋಧಕ ಸಿಬ್ಬಂದಿಗಳು ವಿದ್ಯಾರ್ಥಿಗಳಲ್ಲಿ ಮತದಾನದ ಜಾಗತಿಗೊಳಿಸುವಿಕೆಯಲ್ಲಿ ಮುಂದಾಗಿರುವುದಕ್ಕೆ ತಮ್ಮ ಅಭಿನಂದನೆಗಳನ್ನು ಸಲ್ಲಿಸಿದರು.

ಜಾಥಾದಲ್ಲಿ ಮಹಾವಿದ್ಯಾಲಯದ ಡಾ. ವಿ ಆರ್ ಬೆಟಗಾರ, ಡಾ:ಬಿ.ಜಿ.ಬಿರಾದಾರ,  ಎಮ್ ಪಿ ಹಿರೇಮಠ,  ಎನ್ ಕೆ ಚನ್ನಪ್ಪಗೌಡರ,  ಜಿ.ಆರ್.ಸೂಳಿಭಾವಿ,  ಮಾದೇವ ಉಳ್ಳಾಗಡ್ಡಿ, ವಿದ್ಯಾರ್ಥಿ ತಿನಿಧಿಗಳಾದ ಅಶೋಕ ಚವ್ಹಾಣ, ಉಮೇಶ ಹರಿಜನ, ವಿನಾಯಕ ಆವಾರಿ  ನೇತತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT