ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರಲ್ಲಿ ಅರಿವು ಮೂಡಿಸಿ

ಹಿರಿಯೂರು: ಮತದಾರರ ಜಾಗೃತಿ ಆಂದೋಲನ
Last Updated 5 ಏಪ್ರಿಲ್ 2013, 9:09 IST
ಅಕ್ಷರ ಗಾತ್ರ

ಹಿರಿಯೂರು: ಹೊಸದಾಗಿ ಮತಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಯುವ ಮತದಾರರಿಗೆ ಚುನಾವಣೆ ನೀತಿ-ನಿಯಮಗಳ ಬಗ್ಗೆ ಅರಿವು ಮೂಡಿಸುವಂತೆ ಜಿ.ಪಂ. ಯೋಜನಾ ನಿರ್ದೇಶಕ ಲಕ್ಷ್ಮೀನಾರಾಯಣ್ ಕರೆ ನೀಡಿದರು.

ನಗರದ  ಗುರುಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ `ಮತದಾರರ ಜಾಗೃತಿ ಆಂದೋಲನ'ದಲ್ಲಿ ಅವರು ಮಾತನಾಡಿದರು.
ಏ. 7ರವರೆಗೆ ಮತಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು ಅವಕಾಶವಿದೆ. ಮತದಾನ ಗೌಪ್ಯವಾಗಿ ನಡೆಯುವ ಕಾರಣದಿಂದ ನಿರ್ಭಯವಾಗಿ ಮತ ಚಲಾಯಿಸಬಹುದು. ಮತದಾನ ಹಕ್ಕು ಎನ್ನುವುದನ್ನು ಯುವಕರಿಗೆ ಮನವರಿಕೆ ಮಾಡಿಕೊಡಬೇಕು. ವೃದ್ಧರು, ಅಂಗವಿಕಲರು ಕೂಡಾ ಮತದಾನದಲ್ಲಿ ಭಾಗವಹಿಸಬಹುದು. ಆಮಿಷಕ್ಕೆ ಬಲಿಯಾಗಬೇಡಿ ಎಂದು ಮತದಾರರಿಗೆ ಮನವರಿಕೆ ಮಾಡಿಕೊಡಬೇಕಿದೆ ಎಂದು ಅವರು ತಿಳಿಸಿದರು.

ಚುನಾವಣೆ ಆಯೋಗದ ಸೂಚನೆಯಂತೆ ಸ್ತ್ರೀಶಕ್ತಿ ಸಂಘ-ಸ್ವಸಹಾಯ ಸಂಘಗಳ ಸದಸ್ಯರಿಗೆ ಗ್ರಾಮಮಟ್ಟದಲ್ಲಿ ಏ. 5ರಿಂದ ಮೇ 2ರವರೆಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತದೆ. ಚುನಾವಣೆ ಸುಸೂತ್ರವಾಗಿ ನಡೆಯಲು ಎಲ್ಲರೂ ಸಹಕರಿಸಬೇಕು ಎಂದು ಲಕ್ಷ್ಮೀನಾರಾಯಣ್ ಮನವಿ ಮಾಡಿದರು.

ಪಿಯು ಉಪ ನಿರ್ದೇಶಕ ಸಿ.ಬಿ. ಶಿವಣ್ಣ, ಬಸವರಾಜ್ ವೈ ಶಿರಹಟ್ಟಿ, ಎಸ್. ಆನಂದರಾಜು, ಜಿ.ಆರ್. ರಮೇಶ್, ಪಿ. ರಾಮಯ್ಯ, ತಿಪ್ಪಯ್ಯ ಹಾಜರಿದ್ದರು.
ಅಂಗನವಾಡಿ ಕಾರ್ಯಕರ್ತೆಯರು ಮತದಾನ ಕುರಿತು ಜಾಗೃತಿ ಜಾಥಾ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT