ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರಿಗೆ ‘ವಿಶ್ವಾಸ ಕಾರ್ಡ್‌’

Last Updated 3 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಮುಜಪ್ಫರ್‌ನಗರ(ಪಿಟಿಐ): ಗಲಭೆಗೆ ತುತ್ತಾಗಿದ್ದ ಮುಜ­ಫ್ಫರ್‌­ನಗರ ಪ್ರದೇಶದ ಜನರು ನಿರಾತಂಕ­ವಾಗಿ ಮತ ಚಲಾಯಿಸು­ವಂತಾಗಲು ಹಾಗೂ ಅವ­ರಲ್ಲಿ ವಿಶ್ವಾಸ ಮೂಡಿಸಲು  ಜಿಲ್ಲಾಡಳಿತ ಸ್ಥಳೀಯರಿಗೆ ‘ವಿಶ್ವಾಸ ಕಾರ್ಡ್‌’ ವಿತರಿಸಿದೆ.

‘ವಿಶ್ವಾಸ ಕಾರ್ಡ್‌ನಲ್ಲಿ ಅಧಿಕಾರಿಗಳ ಸಂಪರ್ಕ ಸಂಖ್ಯೆ ಇರುತ್ತದೆ. ಮತದಾನದ ವೇಳೆ ಈ ಕಾರ್ಡ್‌ ಹೊಂದಿದವರಿಗೆ ಯಾವುದೇ ರೀತಿಯ ತೊಂದರೆ ಉಂಟಾ­ದಲ್ಲಿ ಅದನ್ನು ಅಧಿಕಾರಿಗಳ ಗಮನಕ್ಕೆ ತರಬೇಕು. ಅಂತಹವರಿಗೆ ತಕ್ಷಣ ರಕ್ಷಣೆ ಒದಗಿಸ­ಲಾಗು­ವುದು’ ಎಂದು ಪೊಲೀಸ್‌ ಅಧಿಕಾರಿ ಎಚ್‌.­ಎನ್‌.­ಸಿಂಗ್ ತಿಳಿಸಿದ್ದಾರೆ.

ವಿಶ್ವಾಸ ಕಾರ್ಡ್‌ ಅಲ್ಲದೇ ಕೆಲವರಿಗೆ ‘ಚೇತಾವಣಿ ಕಾರ್ಡ್’ (ಕೆಂಪು ಕಾರ್ಡ್‌) ಕೂಡ ನೀಡಲಾಗಿದೆ. ಮತದಾನದ ವೇಳೆ ಅಹಿತಕರ ಘಟನೆ ನಡೆ­ದರೆ ಚೇತಾವಣಿ ಕಾರ್ಡ್‌ ಹೊಂದಿ­ದ­ವರು ಅದಕ್ಕೆ ಹೊಣೆಗಾರ­ರಾಗುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT