ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರು ಹೆಚ್ಚಾದರೂ ಮತದಾನ ಕುಸಿತ!

* ಶೇ 70 ದಾಟದ ಮತಪ್ರಮಾಣ *ತೀವ್ರಗೊಂಡ ‘ಸ್ವೀಪ್‌’ನಿಂದ ಜಾಗೃತಿ ಕಾರ್ಯಕ್ರಮ
Last Updated 11 ಏಪ್ರಿಲ್ 2014, 9:27 IST
ಅಕ್ಷರ ಗಾತ್ರ

ಗುಲ್ಬರ್ಗ: ಗುಲ್ಬರ್ಗ ಲೋಕಸಭೆ ಕ್ಷೇತ್ರಕ್ಕೆ 1952ರಲ್ಲಿ ನಡೆದ ಮೊದಲ ಚುನಾವಣೆಯಿಂದ ಇಲ್ಲಿಯವರೆಗೂ ಮತದಾರರ ಸಂಖ್ಯೆ ಗಣನೀಯ ಹೆಚ್ಚಾಗಿದ್ದರೂ, ಮತದಾನ ಮಾತ್ರ ಶೇ 70ರ ಗಡಿ ತಲುಪಿಲ್ಲ!

1962ರಲ್ಲಿ ನಡೆದ 3ನೇ ಲೋಕಸಭೆ ಚುನಾವಣೆ ಅವಧಿಯಲ್ಲಿ ಒಟ್ಟು ಮತದಾರರು 4,13,239 ರಷ್ಟಿದ್ದರು. 2014ರಲ್ಲಿ ನಡೆಯು ತ್ತಿರುವ 16ನೇ ಲೋಕಸಭೆ ಗಲ್ಬರ್ಗ ಕ್ಷೇತ್ರದ 18ನೇ ಚುನಾವಣೆ (2 ಉಪ ಚುನಾವಣೆ)ಯಲ್ಲಿ ಮತದಾರರ ಸಂಖ್ಯೆ 17,21,166ಕ್ಕೆ ತಲುಪಿದೆ. ಅಲ್ಲಿಂದ ಇಲ್ಲಿಯವರೆಗೂ ಒಟ್ಟು ಶೇ 316ರಷ್ಟು ಮತದಾರರ ಸಂಖ್ಯೆ ಹೆಚ್ಚಳವಾಗಿದೆ. ಪ್ರತಿ ಲೋಕಸಭೆ ಚುನಾವಣೆಯಲ್ಲೂ ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗುವವರ ಸಂಖ್ಯೆ ಹೆಚ್ಚುತ್ತಲೇ ಬಂದಿದೆ. ಆದರೆ ಮತ ಚಲಾವಣೆಯಾದ ಪ್ರಮಾಣವು 1962ರ ಚುನಾವಣೆಯಲ್ಲಿ

ಶೇ52.28ರಷ್ಟಿದ್ದರೆ, 2009ರ ಚುನಾವಣೆಯಲ್ಲಿ ಶೇ 45.20ರಷ್ಟು ಮತದಾನ ದಾಖಲಾಗಿದೆ. 1980ರಲ್ಲಿ ನಡೆದ ಗುಲ್ಬರ್ಗ ಲೋಕಸಭೆ ಕ್ಷೇತ್ರದ ಉಪ ಚುನಾವಣೆ ಸೇರಿ ಇಲ್ಲಿಯವರೆಗೂ ನಡೆದ ಒಟ್ಟು 17 ಬಾರಿ ನಡೆದ ಮತದಾನದಲ್ಲಿ ನಾಲ್ಕು ಬಾರಿ ಶೇ 40ಕ್ಕಿಂತಲೂ, ಆರು ಸಲ ಶೇ 50ಕ್ಕಿಂತಲೂ, ನಾಲ್ಕು ಸಲ ಶೇ60ಕ್ಕಿಂತಲೂ ಹಾಗೂ ಮೂರು ಬಾರಿ ಶೇ 70ಕ್ಕಿಂತಲೂ ಕಡಿಮೆ ಮತದಾನ ಪ್ರಮಾಣ ದಾಖಲಾಗಿದೆ.

1999ರಲ್ಲಿ ಗುಲ್ಬರ್ಗ ಲೋಕಸಭೆ ಕ್ಷೇತ್ರಕ್ಕೆ ನಡೆದ 13ನೇ ಲೋಕಸಭೆ ಚುನಾವಣೆಯಲ್ಲಿ ಶೇ 64.45ರಷ್ಟು ಮತದಾನವಾಗಿರು ವುದೆ ಗರಿಷ್ಠ ದಾಖಲೆ. 1980ರಲ್ಲಿ ಸಂಸದರಾಗಿ ಆಯ್ಕೆಯಾಗಿದ್ದ ಧರ್ಮಸಿಂಗ್‌ ಅವರ ರಾಜೀನಾಮೆ ಯಿಂದಾಗಿ ಅದೇ ವರ್ಷ ನಡೆದ ಉಪಚುನಾವಣೆಯಲ್ಲಿ ಶೇ 35.31ರಷ್ಟು ಮತದಾನವಾ ಯಿತು. 1974ರಲ್ಲಿ ನಡೆದ 6ನೇ ಲೋಕಸಭೆ ಉಪ ಚುನಾವಣೆಯಲ್ಲೂ ಶೇ 35.38ರಷ್ಟು ಕಡಿಮೆ ಪ್ರಮಾಣದ ಮತದಾನ ವಾಗಿತ್ತು.

ಉಪಚುನಾವಣೆಯ ನಂತರ 1984ರಲ್ಲಿ ನಡೆದ 8ನೇ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸು ವವರ ಪ್ರಮಾಣವು ಗಣನೀಯ ಹೆಚ್ಚಳವಾಯಿತು. ಉಪಚುನಾವಣೆ ಯಲ್ಲಾದ ಶೇಕಡಾವಾರು ಮತದಾನಕ್ಕೆ ಹೋಲಿಸಿದರೆ ಶೇ18.75ರಷ್ಟು ಹೆಚ್ಚಳ ಮತದಾನವಾಗಿ ಶೇ 54.06ಕ್ಕೆ ತಲುಪಿತು. ಲೋಕಸಭೆ ಚುನಾವಣೆ ಯನ್ನು ಅದರ ಹಿಂದಿನ ಅವಧಿಗೆ ನಡೆದಿದ್ದ ಚುನಾವಣೆಗೆ ಹೋಲಿಸಿದರೆ 1999ರಲ್ಲಿ ದಾಖಲಾದ ಮತ ದಾನವೇ ಗರಿಷ್ಠ ಪ್ರಮಾಣದ್ದಾಗಿದೆ.

1989ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಮತದಾರರ ಸಂಖ್ಯೆ ಒಮ್ಮೆಲೆ ಶೇ 34.77ರಷ್ಟು ಹೆಚ್ಚಳವಾ ಯಿತು. 1984ರಲ್ಲಿ 7,68,620 ರಷ್ಟಿದ್ದ ಮತದಾರರ ಪ್ರಮಾಣವು ಐದು ವರ್ಷದ ನಂತರ 10,35,882ಕ್ಕೆ ತಲುಪಿತು. ಮತದಾನವು 1984ರಲ್ಲಿ ಶೇ 54.06ರಷ್ಟಾದರೆ 1989ರಲ್ಲಿ ಶೇ 61.59 ಆಯಿತು. ಆದರೆ, ಮತದಾನ ಪ್ರಮಾಣವು ಕೇವಲ ಶೇ 7.53ರಷ್ಟು ಹೆಚ್ಚಳವಾಯಿತು.

2009ರಲ್ಲಿ ನಡೆದ 15ನೇ ಲೋಕಸಭೆ ಗುಲ್ಬರ್ಗ ಕ್ಷೇತ್ರದ 17ನೇ ಚುನಾವಣೆಯಲ್ಲಿ ಮತದಾರರ ಸಂಖ್ಯೆ 15,43,479ರಷ್ಟಿತ್ತು. ಮತದಾನವಾ ಗಿದ್ದು ಶೇ 49.20ರಷ್ಟು ಮಾತ್ರ. 2004ರಲ್ಲಾದ ಈ ಕ್ಷೇತ್ರದ 16ನೇ ಲೋಕಸಭೆ ಚುನಾವಣೆಯ ಮತದಾನಕ್ಕೆ ಹೋಲಿಸಿದರೆ 2009 ರಲ್ಲಿ ಶೇ 8.37ರಷ್ಟು ಕಡಿಮೆ ಪ್ರಮಾಣದ ಮತದಾನವಾಗಿದೆ. ಪ್ರತಿವರ್ಷವು ಮತದಾರರು ಹೆಚ್ಚಳ ವಾಗುತ್ತಿದ್ದರೂ ಮತದಾನದ ಪ್ರಮಾಣದಲ್ಲಿ ಸಾಕಷ್ಟು ಏರಿಳಿತವಾಗು ತ್ತಿರುವುದು ಗಮನಾರ್ಹ.

1989,1998 ಮತ್ತು 1999ರ ಲ್ಲಾದ ಲೋಕಸಭೆ ಚುನಾವಣೆಗಳಲ್ಲಿ ಮಾತ್ರ ಕ್ರಮವಾಗಿ ಶೇ 61.59, ಶೇ 62.08 ಮತ್ತು ಶೇ 64.45ರಷ್ಟು ಆಗಿರುವ ಮತದಾನವು ಹೆಚ್ಚಿನ ಪ್ರಮಾ ಣದ್ದಾಗಿದೆ. 2004 ಮತ್ತು 2009 ರಲ್ಲಾದ ಲೋಕಸಭೆ ಚುನಾವ ಣೆಯ ಎರಡು ಅವಧಿಯಲ್ಲಿ ಮತದಾನ ಕಡಿಮೆಯಾಗುತ್ತಾ ನಡೆದಿದೆ.

ದೇಶದಲ್ಲಿ ಮತದಾನ ಪ್ರಮಾಣ ಹೆಚ್ಚಿಸುವುದಕ್ಕಾಗಿ ಚುನಾವಣಾ ಆಯೋಗವು ಈಚೆಗೆ ‘ಸ್ವೀಪ್‌’ ವಿಶೇಷ ಜಾಗೃತಿ ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸುತ್ತಿದೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಾಗುವ ಮತದಾನ ಪ್ರಮಾಣವು ‘ಸ್ವೀಪ್‌’ ಕಾರ್ಯಕ್ರಮಗಳಿಗೆ ಸೂಕ್ತ ಫಲಿತಾಂಶವಾಗಿ ಹೊಮ್ಮವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT