ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೂರು: 6 ಕಾಲಿನ ಟಗರು

Last Updated 14 ಆಗಸ್ಟ್ 2012, 13:05 IST
ಅಕ್ಷರ ಗಾತ್ರ

ಕೊಪ್ಪಳ: ಟಗರಿಗೆ ನಾಲ್ಕು ಕಾಲುಗಳಿರುವುದು ಸಾಮಾನ್ಯ ಸಂಗತಿ. ಆದರೆ, ಈ ಟಗರಿಗೆ 6 ಕಾಲುಗಳಿವೆ. ಇದೇ ವಿಷಯಕ್ಕಾಗಿ ಈಗ ಈ ಪ್ರಾಣಿ ಅಚ್ಚರಿಗೆ ಮಾತ್ರವಲ್ಲ ಆಕರ್ಷಣೆಗೂ ಕಾರಣವಾಗಿದೆ.

ತಾಲ್ಲೂಕಿನ ಮತ್ತೂರು ಗ್ರಾಮದ ಬಳಿ ಬಿಡಾರ ಹೂಡಿರುವ ಚಿಕ್ಕೋಡಿ ತಾಲ್ಲೂಕಿನ ವಾಸಪ್ಪ ಎಂಬ ಕುರಿಗಾರರ ಹಟ್ಟಿಯಲ್ಲಿರುವ ಈ ಟಗರಿಗೆ 6   ಕಾಲುಗಳಿವೆ.

ಮುಂದಿನ ಕಾಲುಗಳು ಹಾಗೂ ಕುತ್ತಿಗೆ ನಡುವೆ ಇರುವ ಈ ಕಾಲುಗಳು ನೆಲಕ್ಕೆ ತಾಗುವುದಿಲ್ಲ. ಇವುಗಳ ಸಹಾಯದಿಂದ ಟಗರು ನಡೆಯುವುದೂ ಇಲ್ಲ. ಈ ರೀತಿ ಎರಡು ಕಾಲುಗಳು ಹೆಚ್ಚುವರಿಯಾಗಿ ಇರುವ ಟಗರು ಜನಿಸಿದ ಸಂದರ್ಭದಲ್ಲಿ ಆತಂಕವಾಗಿದ್ದು ನಿಜ. ಈ ಟಗರು ಬದುಕುತ್ತೋ ಇಲ್ಲವೋ ಎಂಬ ಅನುಮಾನವೂ ಇತ್ತು ಎನ್ನುತ್ತಾರೆ ಇದರ ಮಾಲಿಕ ವಾಸಪ್ಪ.

ಆದರೆ, ಎಲ್ಲ ಸಾಮಾನ್ಯ ಟಗರುಗಳ ಹಾಗೆ ಇದು ಕೂಡ ಬೆಳೆಯುತ್ತಿದೆ. ಈ ಟಗರು ಜನಿಸಿದ ನಂತರ ನಮ್ಮ ಅದೃಷ್ಟ ಖುಲಾಯಿಸಿದೆ ಎಂದು ಹೇಳಲು ಸಹ ಮರೆಯಲಿಲ್ಲ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ.ಪಿ.ಎಂ.ನಿಂಬರಗಿ, ಇಂತಹ ಟಗರುಗಳು ಜನಿಸುವುದು ಅಪರೂಪ               ಎನ್ನುತ್ತಾರೆ.

ಈ ಟಗರಿನ ಬೆಳವಣಿಗೆಯಲ್ಲಿ ತೊಂದರೆಯೇ ಈ ರೀತಿ ಕಾಲುಗಳ ಆಕಾರದ ಅಂಗಗಳು ಬೆಳೆದಿವೆ ಎಂದೂ ಹೇಳುತ್ತಾರೆ.

ಕಾರಣಗಳು ಏನೇ ಇದ್ದರೂ, ಈ ಟಗರು ಮಾಲಿಕರ ಪಾಲಿನ ಅದೃಷ್ಟದ ಪ್ರಾಣಿ, ಸುತ್ತಮುತ್ತಲಿನ ಗ್ರಾಮಸ್ಥರಿಗೆ ಆಕರ್ಷಣೆಯ ಕೇಂದ್ರ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT