ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಅದೇ ಶಾಲೆ ಬೇಡ ಎಂದ ಬಾಲಕಿ

Last Updated 10 ಜುಲೈ 2012, 19:30 IST
ಅಕ್ಷರ ಗಾತ್ರ

ಕೋಲ್ಕತ್ತ (ಐಎಎನ್‌ಎಸ್, ಪಿಟಿಐ): `ನಾನು ಆ ಹಾಸ್ಟೆಲ್‌ನತ್ತ ಮುಖ ಮಾಡುವುದಿಲ್ಲ; ಒಂದು ವೇಳೆ ಅಲ್ಲಿಗೆಹೋದರೆ ಮತ್ತೆ ಅಂಥ ಶಿಕ್ಷೆ ಕೊಡಬಹುದು. ಬೇರೆ ಶಾಲೆಗೆ ಹೋಗುತ್ತೇನೆ~

-ಹಾಸಿಗೆ  ಒದ್ದೆ ಮಾಡಿಕೊಂಡಿದ್ದಕ್ಕಾಗಿ ಬಲವಂತವಾಗಿ ಸ್ವಮೂತ್ರ ಕುಡಿಯುವ ಅಮಾನವೀಯ ಶಿಕ್ಷೆಗೆ ಒಳಗಾಗಿದ್ದ ವಿಶ್ವ ಭಾರತಿ ಕ್ಯಾಂಪಸ್‌ನ 5ನೇ ತರಗತಿ ವಿದ್ಯಾರ್ಥಿನಿ ಭಯಭೀತಳಾಗಿ ನುಡಿದ ಮಾತುಗಳಿವು.

ವರದಿ ಕೇಳಿದ ರಾಜ್ಯಪಾಲ:
ಈ ಪ್ರಕರಣಕ್ಕೆ ಸಂಬಂಧಿಸಿದ ವರದಿ ನೀಡುವಂತೆ ವಿಶ್ವ ಭಾರತಿ ವಿಶ್ವವಿದ್ಯಾಲಯವನ್ನು ಪಶ್ಚಿಮ ಬಂಗಾಳದ ರಾಜ್ಯಪಾಲ ಎಂ.ಕೆ. ನಾರಾಯಣನ್ ಕೇಳಿದ್ದಾರೆ.

`ನಾನು ವರದಿಗಾಗಿ ಕಾಯುತ್ತಿದ್ದೇನೆ. ಬಳಿಕ ಕ್ರಮ ಕೈಗೊಳ್ಳುತ್ತೇನೆ~ ಎಂದು ಮಂಗಳವಾರ ಇಲ್ಲಿ ನಡೆದ ವಿಚಾರ ಸಂಕಿರಣವೊಂದರಲ್ಲಿ ಪಾಲ್ಗೊಂಡ ಬಳಿಕ ಅವರು ಮಾತನಾಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT