ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಒಂದುಗೂಡಲಿರುವ ಭೂಪತಿ-ಬೋಪಣ್ಣ

Last Updated 1 ಏಪ್ರಿಲ್ 2013, 18:42 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮಹೇಶ್ ಭೂಪತಿ ಹಾಗೂ ರೋಹನ್ ಬೋಪಣ್ಣ ಮತ್ತೆ ಜೊತೆಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಈ ವರ್ಷದ ಉಳಿದ ಟೂರ್ನಿಗಳ ಡಬಲ್ಸ್ ವಿಭಾಗದಲ್ಲಿ ಇವರಿಬ್ಬರು ಜೊತೆಗೂಡಿ ಆಡಲಿದ್ದಾರೆ.

ರೋಹನ್ ಹಾಗೂ ಭೂಪತಿ 2012ರಲ್ಲಿ ಒಟ್ಟಿಗೆ ಆಡಿದ್ದರು. ಲಂಡನ್ ಒಲಿಂಪಿಕ್ಸ್‌ನಲ್ಲಿ ಕೂಡ ಒಟ್ಟಿಗೆ ಕಣಕ್ಕಿಳಿದಿದ್ದರು. ಇದು ಹಲವು ವಿವಾದಗಳಿಗೆ ಕಾರಣವಾಗಿತ್ತು. ಈ ಕಾರಣ ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ಈ ಇಬ್ಬರನ್ನೂ ರಾಷ್ಟ್ರೀಯ ತಂಡದಿಂದ ಸದ್ಯ ಹೊರಗಿಟ್ಟಿದೆ.

ಇವರು 2012ರಲ್ಲಿ ದುಬೈ ಹಾಗೂ ಪ್ಯಾರಿಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಗೆಲುವು ಸಾಧಿಸಿದ್ದರು. ಲಂಡನ್ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಡಬಲ್ಸ್‌ನಲ್ಲಿ ರನ್ನರ್ ಅಪ್ ಆಗಿದ್ದರು. ಆದರೆ ಈ ಋತುವಿನ ಆರಂಭದಿಂದ ಬೇರೆ ಆಟಗಾರರ ಜೊತೆಗೂಡಿ ಕಣಕ್ಕಿಳಿಯಲು ಹೋದ ವರ್ಷದ ಅಂತ್ಯದಲ್ಲಿಯೇ ನಿರ್ಧರಿಸಿದ್ದರು. ಈ ವರ್ಷದ ಆರಂಭದಲ್ಲಿ ನಡೆದ ಚೆನ್ನೈ ಓಪನ್ ಟೆನಿಸ್ ಟೂರ್ನಿಯಲ್ಲಿ ಬೋಪಣ್ಣ ಅಮೆರಿಕ ಮೂಲದ ಆಟಗಾರ ರಾಜೀವ್ ರಾಮ್ ಜೊತೆಗೂಡಿ ಆಡಿದ್ದರು. ಭೂಪತಿ ಕೆನಡದ ಡೇನಿಯೆಲ್ ನೆಸ್ಟೋರ್ ಜೊತೆಗೂಡಿ ಕಣಕ್ಕಿಳಿದಿದ್ದರು.

ಮತ್ತೆ ಜೊತೆಗೂಡಿ ಕಣಕ್ಕಿಳಿಯಲು ದಿಢೀರ್ ನಿರ್ಧಾರ ತೆಗೆದುಕೊಂಡಿರುವುದು ಅಚ್ಚರಿ ಮೂಡಿಸಿದೆ. ಕೆಲ ಮೂಲಗಳ ಪ್ರಕಾರ ಈ ಋತುವಿನ ಅಂತ್ಯಕ್ಕೆ 38 ವರ್ಷ ವಯಸ್ಸಿನ ಮಹೇಶ್ ಟೆನಿಸ್‌ಗೆ ವಿದಾಯ ಹೇಳುವ ಸಾಧ್ಯತೆ ಇದೆ.

ಏಪ್ರಿಲ್ 14ರಂದು ಆರಂಭವಾಗಲಿರುವ ಮಾಂಟೆ ಕಾರ್ಲೊ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಜೊತೆಯಾಗಿ ಆಡಲಿದ್ದಾರೆ. `ಹೋದ ವರ್ಷ ನಾವಿಬ್ಬರು ಉತ್ತಮ ಪ್ರದರ್ಶನ ತೋರಿದ್ದೆವು. ನಮ್ಮಿಬ್ಬರ ನಡುವೆ ಉತ್ತಮ ಹೊಂದಾಣಿಕೆ ಇದೆ' ಎಂದು ಭೂಪತಿ ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT