ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಜೊತೆಯಾದ ಜ್ವಾಲಾ- ಅಶ್ವಿನಿ

Last Updated 2 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್): ಅಶ್ವಿನಿ ಪೊನ್ನಪ್ಪ ಮತ್ತು ಜ್ವಾಲಾ ಗುಟ್ಟಾ ಮುಂಬರುವ ಡೆನ್ಮಾರ್ಕ್ ಓಪನ್ ಸೂಪರ್ ಸೀರಿಸ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಜೊತೆಯಾಗಿ ಆಡಲು ನಿರ್ಧರಿಸಿದ್ದಾರೆ.

ಈ ಟೂರ್ನಿ ಅಕ್ಟೋಬರ್ 15 ರಿಂದ 20ರ ವರೆಗೆ ನಡೆಯಲಿದೆ. ಲಂಡನ್ ಒಲಿಂಪಿಕ್ಸ್ ನಂತರ ಜ್ವಾಲಾ ಸ್ಪರ್ಧಾ ಕಣದಿಂದ ದೂರ ಸರಿದಿದ್ದರು. ಆ ಬಳಿಕ ಅಶ್ವಿನಿ ಅವರು ಪ್ರದ್ನ್ಯಾ ಗಾದ್ರೆ ಜೊತೆ ವಿವಿಧ ಟೂರ್ನಿಗಳಲ್ಲಿ ಆಡಿದ್ದರು.

ಇದೀಗ ಜ್ವಾಲಾ ಸ್ಪರ್ಧಾ ಕಣಕ್ಕೆ ಮರಳಲು ಬಯಸಿದ್ದಾರೆ. ಈ ಕಾರಣ ಇಬ್ಬರೂ ಮತ್ತೆ ಜೊತೆಯಾಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT