ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಬಣ್ಣ ಹಚ್ಚುವ ಹಾದಿಯಲ್ಲಿ...

Last Updated 1 ಜುಲೈ 2012, 19:30 IST
ಅಕ್ಷರ ಗಾತ್ರ

ಸುಷ್ಮಿತಾ ಸೇನ್ ಕಳೆದೆರಡು ವರ್ಷಗಳಿಂದ ಬೆಳ್ಳಿ ತೆರೆಯಿಂದ ದೂರ ಸರಿದಿದ್ದಾರೆ. ಸೌಂದರ್ಯ ಸ್ಪರ್ಧೆಗೆ ಯುವತಿಯರನ್ನು ಸಿದ್ಧಪಡಿಸುವ ತಮ್ಮ ಸಂಸ್ಥೆ `ಐ ಆ್ಯಮ್ ಶಿ~ಗೆ ಈಗ ಎರಡು ವರ್ಷ ತುಂಬಿದೆ.

`ಈ ಸಂಸ್ಥೆಯ ಹುಡುಗಿ ಹಿಮಾಂಗಿನಿ ಸಿಂಗ್ ಯಾದು ಮಿಸ್ ಏಷ್ಯಾ ಪೆಸಿಫಿಕ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಹೀಗಾಗಿ ಈಗ ನಿರಾತಂಕಳಾಗಿದ್ದೇನೆ. ಇನ್ನು ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಬಲ್ಲೆ~ ಎಂದೆಲ್ಲ ಸುಷ್ಮಿತಾ ಸೇನ್ ಹೇಳಿಕೊಂಡಿದ್ದಾರೆ.

`ನೋ ಪ್ರಾಬ್ಲಂ~ ಚಿತ್ರದ ನಂತರ ಸುಷ್ಮಿತಾ ಯಾವುದೇ ಚಿತ್ರಗಳನ್ನು ಒಪ್ಪಿಕೊಂಡಿರಲಿಲ್ಲ. ತಮ್ಮ ಸಂಸ್ಥೆಯನ್ನು ಕಟ್ಟುವಲ್ಲಿ ನಿರತರಾಗಿದ್ದರು. ಈ ನಡುವೆ ಇನ್ನೊಂದು ಹೆಣ್ಣು ಮಗುವನ್ನೂ ದತ್ತು ಪಡೆದಿದ್ದರು.

`ನನ್ನ ಮೊದಲ ಮಗಳು ರೆನೆಗೆ ಈಗ 13ರ ಹರೆಯ. ಎರಡನೆಯ ಮಗಳು ಆಸೀಹಾಗೆ ಮೂರು ತುಂಬಿತು. ಈಗ ಈ ಎರಡು ವರ್ಷಗಳ ಬ್ರೇಕ್ ಸಾಕು. ಒಂದಷ್ಟು ಪ್ರಾಜೆಕ್ಟ್‌ಗಳು ಕೈಯಲ್ಲಿವೆ. ಎಲ್ಲವೂ ಅಂದುಕೊಂಡಂತೆ ನಡೆದರೆ ವರ್ಷದ ಕೊನೆಯಲ್ಲಿ ಅಥವಾ 2013ರ ಆರಂಭದಲ್ಲಿ ನಾನು ತೆರೆಯ ಮೇಲೆ ಕಾಣಿಸಿಕೊಳ್ಳುವೆ~ ಎಂದು ಹೇಳಿದ್ದಾರೆ.

2007ರಲ್ಲಿ `ಝಾನ್ಸಿ ಕಿ ರಾಣಿ~ ಚಿತ್ರ ನಿರ್ಮಾಣ ಮತ್ತು ನಿರ್ದೇಶನದ ಬಗ್ಗೆ ಸುಷ್ಮಿತಾ ಘೋಷಿಸಿದ್ದರು. ಈಗ ಈ ಚಿತ್ರಕ್ಕೆ ಅಗತ್ಯವಿರುವಷ್ಟು ಬಜೆಟ್ ಸೇರಿದೊಡನೆ, ಕೆಲಸವನ್ನು ಆರಂಭಿಸುವೆ~ ಎಂದೂ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT