ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಂದು ಅಕ್ರಮ ಗಣಿಗಾರಿಕೆ ಪ್ರಕರಣ

Last Updated 15 ಅಕ್ಟೋಬರ್ 2012, 8:25 IST
ಅಕ್ಷರ ಗಾತ್ರ

ಲಿಂಗಸುಗೂರು(ಮುದಗಲ್ಲ): ತಾಲ್ಲೂಕಿನಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣಗಳ ಗುಮ್ಮ, ಈಗೊಮ್ಮೆ ಪ್ರತಿಧ್ವನಿಸುತ್ತಲೆ ಬಂದಿವೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಕ್ರಮ ಗಣಿಗಾರಿಕೆಗಳು ಇಲ್ಲವೆ ಇಲ್ಲ ಎಂದು ಹೇಳಿಕೊಂಡ ಬೆನ್ನ ಹಿಂದೆಯೆ ಮುದಗಲ್ಲ ಪಟ್ಟಣದ ಹೊರವಲಯದ ಮೇಗಳಪೇಟೆ ಸೀಮೆಯ ಜಮೀನೊಂದರಲ್ಲಿ ಗುರುವಾರ ಅಕ್ರಮ ಗಣಿಗಾರಿಕೆ ನಡೆದಿರುವುದು ಪತ್ತೆಯಾಗಿ ಮುದಗಲ್ಲ ಠಾಣೆಯಲ್ಲಿ ಪ್ರಕರಣ ದಾಖಲೆಗೊಂಡಿರುವುದು ತಡವಾಗಿ ವರದಿಯಾಗಿದೆ.

ಮೇಗಳಪೇಟೆಯ ಸರ್ವೆ ನಂಬರ 443 ಹಿಸ್ಸಾ 1ರಲ್ಲಿ ಕೆಲ ತಿಂಗಳಿಂದ ಅಕ್ರಮ ಗಣಿಗಾರಿಕೆ ನಡೆಸುವ ಮಾಹಿತಿ ಮೇರೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಅರುಣ ನೇತೃತ್ವದ ತಂಡ ಗುರುವಾರ ಧಿಡೀರ್ ದಾಳಿ ನಡೆಸಿ 25 ಕಲ್ಲು ಶಿಲೆಗಳು, 3 ಕಾಂಪ್ರೆಸ್‌ರ ಟ್ರ್ಯಾಕ್ಟರ್, 1 ಫೋಕ್‌ಲೈನ್ ಜಪ್ತಿ ಮಾಡಿಕೊಂಡು ಮುದಗಲ್ಲ ಠಾಣೆಗೆ ದೂರು ನೀಡಿದ್ದಾರೆ. ಶಿಲೆಗಳ (ಕಲ್ಲು ದಿಮ್ಮಿ) ಕಾವಲಿಗೆ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT