ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯ ಮಾರಾಟ ವಿರೋಧಿಸಿ ಪ್ರತಿಭಟನೆ

Last Updated 4 ಅಕ್ಟೋಬರ್ 2011, 6:40 IST
ಅಕ್ಷರ ಗಾತ್ರ

ಹಾವೇರಿ: ಗ್ರಾಮದಲ್ಲಿ ಅಂಗಡಿ ಮುಂಗ ಟ್ಟುಗಳಲ್ಲಿ ಇಟ್ಟು ಮಾರಾಟ ಮಾಡುತ್ತಿ ರುವ ಮದ್ಯದ ಅಕ್ರಮ ಮಾರಾಟವನ್ನು ತಡೆಗೆ ಹಾಗೂ ಮದ್ಯದ ಅಕ್ರಮ ಮಾರಾಟ ಮಾಡುವಾಗ ಸಿಕ್ಕ ಬಿದ್ದ ವ್ಯಕ್ತಿಗೆ ದಂಡ ವಿಧಿಸಲು ಒತ್ತಾಯಿಸಿ ತಾಲ್ಲೂಕಿನ ಕುರುಬಗೊಂಡ ಗ್ರಾಮದ ಮಹಿಳೆಯರು ಸೋಮವಾರ ಗ್ರಾ.ಪಂ. ಪಕ್ಕದ ಸಭಾ ಭವನದ ಎದುರು ಧರಣಿ ನಡೆಸಿದರು.

ಬೆಳಿಗ್ಗೆಯಿಂದಲೇ ಗ್ರಾಮದ ನೂರಾರು ಮಹಿಳೆಯರು ಗ್ರಾ.ಪಂ. ಕಚೇರಿಗೆ ಆಗಮಿಸಿ ಮದ್ಯ ಮಾರಾಟ ಮಾಡದಂತೆ ನಿರ್ಬಂಧನೆ ಹಾಕಿದ್ದರೂ, ಗ್ರಾಮದ ಜನರ ಮಾತನ್ನು ಧಿಕ್ಕರಿಸಿ ಮಾರಾಟ ಮಾಡಿದ ವ್ಯಕ್ತಿಗೆ ಕೂಡಲೇ ದಂಡವನ್ನು ವಿಧಿಸಬೇಕೆಂದು ಒತ್ತಾಯಿಸಿದರು.

ಗ್ರಾಮದಲ್ಲಿ ಎಲ್ಲೆಂದರಲ್ಲಿ ದೊರೆಯು ತ್ತಿರುವ ಮದ್ಯವನ್ನು ಕುಡಿದು ಬಡ ಹಾಗೂ ಯುವ ಜನರು ಆರೋಗ್ಯ ಹಾಳು ಮಾಡಿಕೊಳ್ಳುವುಷ್ಟೇ ಅಲ್ಲ. ಗ್ರಾಮದ ವಾತಾವರಣವನ್ನು ಹದಗೆಡಿ ಸುತ್ತಿದ್ದಾರೆ. ಆದಕಾರಣ ಅಕ್ರಮವಾಗಿ ಮಾರಾಟ ಮಾಡುವುದನ್ನು ತಡೆದು ಮದ್ಯ ಮುಕ್ತ ಗ್ರಾಮವೆಂದು ಘೋಷಿಸ ಬೇಕು ಎಂದು ಆಗ್ರಹಿಸಿದರು.

ಕುರಬಗೊಂಡ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಈಗಾಗಲೇ ಮದ್ಯದ ಮಾರಾಟವನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ನಮ್ಮ ಗ್ರಾಮದ 30-40 ಅಂಗಡಿಗಳಲ್ಲಿ ಮಾತ್ರ ಮಾರಾಟ ನಡೆಯುತ್ತಿದ್ದು, ಸುತ್ತ ಮುತ್ತಲಿನ ಗ್ರಾಮಗಳ ಜನರು ಮದ್ಯ ಕುಡಿಯಲು ಗ್ರಾಮಕ್ಕೆ ಬರುತ್ತಿದ್ದಾರೆ. ಇದರಿಂದ ಸಂಜೆ ಸಮಯದಲ್ಲಿ ಮಹಿಳೆ ಯರು ರಸ್ತೆಯಲ್ಲಿ ಓಡಾಡದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನಾ ಕಾರರು ತಿಳಿಸಿದರು.

ಮದ್ಯ ಮಾರಾಟ ಮಾಡಿದವರಿಗೆ ಐದು ಸಾವಿರ ದಂಡ, ಕುಡಿದು ದಾಂಧಲೆ ಮಾಡಿದವರಿಗೆ 3 ಸಾವಿರ ದಂಡ ಹಾಗೂ ಹಿಡಿದುಕೊಟ್ಟವರಿಗೆ ಎರಡೂವರೆ ಸಾವಿರ ರೂ. ದಂಡ ಹಾಕಲು ಭಾನುವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಆದರೆ, ಈ ನಿರ್ಧಾರದ ನಂತರವೂ ಗ್ರಾಮದ ವ್ಯಕ್ತಿಯೊಬ್ಬ ಮದ್ಯದ ಬಾಟಲಿಗಳನ್ನು ಮಾರಾಟ ಮಾಡುವ ಸಂದರ್ಭದಲ್ಲಿ ಸಿಕ್ಕು ಬಿದ್ದಿದ್ದಾನೆ. ಆತ ಈವರೆಗೆ ದಂಡ ನೀಡಿಲ್ಲ. ಕೂಡಲೇ ಆತನಿಂದ ದಂಡ ವಸೂಲಿ ಮಾಡಬೇಕೆಂದು ಮಹಿಳೆ ಯರು ಗ್ರಾಮದ ಮುಖಂಡರನ್ನು ಒತ್ತಾಯಿಸಿದರು.

ಈ ಬಗ್ಗೆ ಸಂಜೆ ಸಭೆ ಸೇರಿ ಗ್ರಾಮದ ಮುಖಂಡರ ಸಮ್ಮುಖದಲ್ಲಿ ದಂಡ ವಸೂಲಿ ಬಗ್ಗೆ ನಿರ್ಧರಿಸಲಾಗುವುದು. ಅಲ್ಲಿವರೆಗೆ ಪ್ರತಿಭಟನಾ ಧರಣಿಯನ್ನು ವಾಪಸ್ಸು ಪಡೆಯುವಂತೆ ಗ್ರಾಮದ ಕೆಲವರು ಮನವಿ ಮಾಡಿದರು.
ಅವರ ಭರವಸೆ ಮೇರೆಗೆ ಧರಣಿ ಯಿಂದ ಹಿಂದೆ ಸರಿದ ಪ್ರತಿಭಟನಾಕಾ ರರು, ಮದ್ಯ ಮಾರಾಟ ಮಾಡಿದ ವ್ಯಕ್ತಿಗೆ ದಂಡ ಹಾಕದಿದ್ದರೆ, ಮತ್ತೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಗ್ರಾ.ಪಂ.ಉಪಾ ಧ್ಯಕ್ಷ ನಾಗರತ್ನಾ ವಡ್ಡರ, ಪ್ರೇಮವ್ವ ಕರಡೆಪ್ಪನವರ, ಪುಟ್ಟವ್ವ ಅನ್ವೇರಿ, ನೀಲವ್ವ ಬೆನಕನಹಳ್ಳಿ, ಹಾಲವ್ವ ಮತ್ತಿ ಹಳ್ಳಿ, ಗಂಗವ್ವ ಕೂಡಲ, ಗ್ರಾ.ಪಂ. ಸದಸ್ಯರಾದ ಎಲ್.ಎಸ್.ಪಾಟೀಲ, ಮಲ್ಲೇಶ ಕೂಡಲ, ನಜೀರಸಾಬ ರಾಣೆ ಬೆನ್ನೂರ, ಶಾಂತಪ್ಪ ಬಸೆಟ್ಟಿಯವರ, ಮುಖಂಡರಾದ ಬಸವಂತಪ್ಪ ದುರಗಣ್ಣನವರ, ಕೆಂಚ್ಚಪ್ಪ ಗೋಲನ ವರ ಅಲ್ಲದೇ ಅನೇಕರು ಭಾಗವಹಿಸಿದ್ದರು.



 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT