ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯ ಸೇವಿಸಿ ವಿಮಾನ ಚಾಲನೆ; ಪೈಲಟ್‌ಗೆ ಶಿಕ್ಷೆ

Last Updated 24 ಜನವರಿ 2011, 19:30 IST
ಅಕ್ಷರ ಗಾತ್ರ

ಲಂಡನ್ (ಐಎಎನ್‌ಎಸ್): ಕುಡಿದ ಅಮಲಿನಲ್ಲಿ ವಿಮಾನ ಚಾಲನೆ ಮಾಡಿದ್ದ ಪೈಲಟ್‌ಗೆ ಆರು ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ. ಲಂಡನ್‌ನ ಹೀಥ್ರೂ ವಿಮಾನನಿಲ್ದಾಣದಲ್ಲಿ ವಿಮಾನ ಚಾಲನೆ ಮಾಡುವಾಗ ತಾನು ಎಲ್ಲಿ ವಿಮಾನ ಚಾಲನೆ ಮಾಡುತ್ತಿದ್ದೇನೆ ಎಂಬುದನ್ನೇ ಕಂಠಪೂರ್ತಿ ಕುಡಿದಿದ್ದ ಡೆಲ್ಟಾ ಏರ್‌ಲೈನ್ಸ್‌ನಲ್ಲಿ ನಿರ್ವಹಿಸುತ್ತಿದ್ದ ಜಾರ್ಜ್ ಲಾ ಪರ್ಲ್ ಮರೆತಿದ್ದ.

ಆತನಿಗೆ ವಿಮಾನ ಚಾಲನೆ ಮಾಡುತ್ತಿರುವ ಬಗ್ಗೆ ಅರಿವೇ ಇರಲಿಲ್ಲ ಎಂಬುದು ಭದ್ರತಾ ಸಿಬ್ಬಂದಿ ಆತನನ್ನು ಪ್ರಶ್ನಿಸಿದ ಸಂದರ್ಭದಲ್ಲಿ ಕಂಡುಬಂತು. ಜಾರ್ಜ್ ಅಂದು ಮಿತಿಗಿಂತ ನಾಲ್ಕೂವರೆ ಪಟ್ಟು ಹೆಚ್ಚು ಮದ್ಯವನ್ನು ಸೇವಿಸಿದ್ದ.ಡೆಟ್ರಾಯಿಟ್‌ಗೆ ಹೋಗಬೇಕಿದ್ದ ವಿಮಾನವನ್ನು ನ್ಯೂಯಾರ್ಕ್‌ಗೆ ಹೋಗುತ್ತಿರುವುದಾಗಿ ಭದ್ರತಾ ಸಿಬ್ಬಂದಿಗೆ ಆತ ತಿಳಿಸಿದ್ದ. ವಿಮಾನ ಚಾಲನೆಯಲ್ಲಿ 20 ವರ್ಷಗಳ ಅನುಭವ ಹೊಂದಿರುವ ಜಾರ್ಜ್ ಅಮೆರಿಕದ ಬಾಸ್ಟನ್ ಮೂಲದವನು.

2010ರ ನವೆಂಬರ್ 1ರಂದು ಕಂಠಪೂರ್ತಿ ಕುಡಿದು ಆತ ಬೋಯಿಂಗ್ 767 ವಿಮಾನ ಚಾಲನೆ ಮಾಡುತ್ತಿದ್ದ. ಆತನೊಂದಿಗೆ ಮೂವರು ಪೈಲಟ್‌ಗಳಿದ್ದರು. ವಿಮಾನದಲ್ಲಿ ಅಮೆರಿಕಕ್ಕೆ ಹೊರಟಿದ್ದ 241 ಪ್ರಯಾಣಿಕರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT