ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯವ್ಯಸನಿಗಳಿಗೆ ಕೆ.ಜಿ. ಬೋಪಯ್ಯ ಕರೆ

Last Updated 13 ಅಕ್ಟೋಬರ್ 2011, 12:20 IST
ಅಕ್ಷರ ಗಾತ್ರ

ಮಡಿಕೇರಿ: ಸಮಾಜಕ್ಕೆ ಕಂಠಕರಾಗಿರುವ ಮದ್ಯ ವ್ಯಸನಿಗಳು ನಮ್ಮ ದೇಶದ ಸಂಸ್ಕಾರ, ಸಂಸ್ಕೃತಿ ಯನ್ನು ಸ್ಮರಿಸಿಕೊಂಡು ದೌರ್ಬಲ್ಯಗಳನ್ನು ಮೆಟ್ಟಿ ನಿಲ್ಲುವ ಮೂಲಕ ಸದೃಢ ದೇಶ ಕಟ್ಟಲು ನೆರವಾಗಬೇಕು ಎಂದು ವಿಧಾನ ಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಕರೆ ನೀಡಿದರು.

ಚೇರಂಬಾಣೆಯ ಬೇಂಗ್‌ನಾಡ್ ಕೊಡವ ಸಮಾಜದ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸ್ಥಳೀಯ ಸಂಘ ಸಂಸ್ಥೆಗಳು, ವಿವಿಧ ವಿದ್ಯಾ ಸಂಸ್ಥೆಗಳು ಹಾಗೂ ದೇವಸ್ಥಾನ ಮಂಡಳಿಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ 445ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾ ರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

 ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಪ್ರಗತಿಪರ ಯೋಜನೆಗಳನ್ನು ಜಾರಿಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಸಂಸ್ಥೆಯ ಜೊತೆ ಕೈಜೋಡಿಸಲು ಗಂಭೀರ ಚಿಂತನೆ ನಡೆಸಬೇಕಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾ ಲಪ್ಪ, ಕುಡಿತದಂತಹ ಯಾವುದೇ ದುಶ್ಚಟಗಳಿಗೆ ಒಳಗಾಗದಂತೆ ನೋಡಿಕೊಂಡು ಜೀವನದಲ್ಲಿ ಸಾರ್ಥಕತೆಯನ್ನು ಪಡೆಯಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಡಾ. ಎಚ್.ಎಸ್. ಶಿವಕುಮಾರ್, ಇಂದಿನ ಯುವಜನರು ಯಾವುದೇ ದುಶ್ಚಟಗಳಿಗೆ ಒಳ ಗಾಗದೇ ಆರೋಗ್ಯವಂತರಾಗುವ ಮೂಲಕ ಇತರರಿಗೆ ಆದರ್ಶರಾಗಬೇಕು ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಯೋಗೀಶ್ ಅವರು ಮಾತ ನಾಡಿ, ನಮ್ಮ ಸಂಸ್ಥೆಯು ರಾಜ್ಯದ 11 ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಈಗಾ ಗಲೇ ರಾಜ್ಯಾದ್ಯಂತ 445 ಮದ್ಯವರ್ಜನ ಶಿಬಿರ ಗಳನ್ನು ಆಯೋಜಿಸಿ ಹಲವಾರು ಮಂದಿಯನ್ನು ಮದ್ಯವ್ಯಸನದಿಂದ ಮುಕ್ತಗೊಳಿಸಲಾಗಿದೆ. ಜಿಲ್ಲೆ ಯಲ್ಲಿ ಇದು 11ನೇ ಮದ್ಯವರ್ಜನ ಶಿಬಿರ ವಾಗಿದ್ದು, ಈ ಶಿಬಿರದಲ್ಲಿ 113 ಮಂದಿಯನ್ನು ಮದ್ಯವ್ಯಸನದಿಂದ ಮುಕ್ತಗೊಳಿಸಲಾಗಿದೆ ಎಂದರು
 
ಶಿಬಿರದ ಅಧ್ಯಕ್ಷರಾದ ಟಿ. ನಾರಾಯಾಣಾ ಚಾರ್ ಅವರು, ಶಿಬಿರದಲ್ಲಿ ನೀಡಲಾಗಿರುವ ಸಂದೇಶ ಹಾಗೂ ವಾಚನಗಳನ್ನು ಕಟ್ಟುನಿಟ್ಟಾಗಿ ಅಳವಡಿಸಿಕೊಳ್ಳಬೇಕು ಎಂದು  ಮದ್ಯಪಾನ ಮುಕ್ತರಿಗೆ ಕಿವಿಮಾತು ಹೇಳಿದರು.
ಧರ್ಮಸ್ಥಳ ಜನಜಾಗೃತಿ ಕಾರ್ಯಕ್ರಮದ ಯೋಜನಾಧಿಕಾರಿ ವಿವೇಕ್ ವಿನ್ಸೆಂಟ್ ಪಾಯಸ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮದ್ಯ ವರ್ಜನ ಶಿಬಿರದ ಕಾರ್ಯದರ್ಶಿ ವಿಜಯ ಕುಮಾರ್ ಅವರು ವಂದಿಸಿದರು.
 
ಆರಂಭದಲ್ಲಿ ಮದ್ಯವ್ಯಸನ ದಿಂದ ಮುಕ್ತರಾದ 113 ಮಂದಿಯು ಸಹ ಪತ್ನಿ ಸಮೇತರಾಗಿ ಹಾಜರಾಗಿದ್ದರು. ಮದ್ಯವ್ಯಸನದಿಂದ ಮುಕ್ತರಾದ ವರು ತಮ್ಮ ಸಂಗಾತಿಯ ಸಮಕ್ಷಮ ದಲ್ಲಿ ಓಂ ಶ್ರೀ ಕಾರದೊಂದಿಗೆ ಮಂತ್ರಪಠಿಸಿ ಮತ್ತೊಮ್ಮೆ ಮದ್ಯ ಪಾನ ಮಾಡುವುದಿಲ್ಲವೆಂದು ವಚನ ನೀಡಿದರು.  ಶುಭವಾಗಲೆಂದು ಹಾರೈಸಿ ಜಿ.ಪಂ. ಅಧ್ಯಕ್ಷ ರವಿ ಕುಶಾಲಪ್ಪ ಅವರು ಪನ್ನೀರಿನ ಪ್ರೋಕ್ಷಣೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT