ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧುಗಿರಿ: ಕುಡಿಯುವ ನೀರಿಗೆ 40 ಲಕ್ಷ

Last Updated 6 ಏಪ್ರಿಲ್ 2013, 9:33 IST
ಅಕ್ಷರ ಗಾತ್ರ

ಮಧುಗಿರಿ: ಪಟ್ಟಣದ ಕುಡಿಯುವ ನೀರಿನ ಸ್ಥಿತಿ ಸುಧಾರಿಸಲು ವಿಶೇಷ ಹಣಕಾಸು ಯೋಜನೆಯಡಿ ಸರ್ಕಾರ ರೂ 40 ಲಕ್ಷ ಬಿಡುಗಡೆ ಮಾಡಿದೆ.
ರೂ 40 ಲಕ್ಷ ವೆಚ್ಚದಲ್ಲಿ ಈ ಹಿಂದೆ ಕೊರೆದ ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಹಾಗೂ ಪಂಪ್ ಅಳವಡಿಸುವುದು. ಹೊಸದಾಗಿ 6 ಕೊಳವೆ ಬಾವಿ ಕೊರೆಸುವುದು, ಬಸವನಹಳ್ಳಿ ಬಳಿಯ ಪಂಪ್‌ಹೌಸ್‌ಗೆ ರೂ 9 ಲಕ್ಷ ವೆಚ್ಚದಲ್ಲಿ ಪಂಪ್‌ಸೆಟ್ ಅಳವಡಿಸುವ ಬಗ್ಗೆ ಕ್ರಿಯಾ ಯೋಜನೆ ತಯಾರಿಸಿ ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆಯಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಮಾರುತಿ ಶಂಕರ್ `ಪ್ರಜಾವಾಣಿ'ಗೆ ವಿವರಿಸಿದರು.

ಪಟ್ಟಣದಲ್ಲಿ ಒಟ್ಟು 52 ಕೊಳವೆ ಬಾವಿಗಳಿವೆ. ಹಲವೆಡೆ ನೀರಿನ ಇಳುವರಿ ಕಡಿಮೆಯಾಗಿದೆ. ಸಿದ್ದಾಪುರ ಕೆರೆ ಬತ್ತಿ ಹೋಗಿರುವುದರಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಅಭಾವ ಕಾಣಿಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.
ಮಿತವಾಗಿ ನೀರು ಬಳಸಿ, ಬೇಸಿಗೆ ಎದುರಿಸಲು ಸಜ್ಜಾಗಬೇಕು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT