ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಮ ಗಾತ್ರದ ಕಾರಿಗೆ ಆದ್ಯತೆ

Last Updated 6 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ಕಾರುಗಳ ತಯಾರಿಕೆಯಲ್ಲಿ ಶೇ 40ರಷ್ಟು ಮಾರುಕಟ್ಟೆ ಪಾಲುದಾರಿಕೆ ಹೊಂದಿರುವ ಮಾರುತಿ ಸುಜುಕಿ, ಯುಟಿಲಿಟಿ ಕಾರುಗಳ ವಿಭಾಗದಲ್ಲಿ ಮಧ್ಯಮ ಗಾತ್ರದ      `ಎರ್ಟಿಗಾ~ ಕಾರನ್ನು ಇಲ್ಲಿನ ಪ್ರಗತಿ ಮೈದಾನದಲ್ಲಿ ನಡೆಯುತ್ತಿರುವ 11ನೇ ವಾಹನ ಮೇಳದ ಎರಡನೇ ದಿನವಾದ ಶುಕ್ರವಾರ  ಬಿಡುಗಡೆ ಮಾಡಿತು.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಷಿನ್ಜೊ  ನಕನಾಷಿ ಹಾಗೂ ಜಾಗತಿಕ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಕೆನೆಚಿ ಅಕಾವಾ `ಎರ್ಟಿಗಾ~ ಕಾರನ್ನು ಪರಿಚಯಿಸಿದರು.

`2020ರ ವೇಳೆಗೆ ವಾಹನ ಕ್ಷೇತ್ರದಲ್ಲಿ ಭಾರತ ಅತಿ ದೊಡ್ಡ ಮಾರುಕಟ್ಟೆಯಾಗುವ ಸಂಭವ ಇರುವುದರಿಂದ ಹಾಗೂ ಭವಿಷ್ಯದಲ್ಲಿ ಎದುರಾಗುವ ಸವಾಲುಗಳಿಗೆ ಸಂಸ್ಥೆ ಸರ್ವ ಸನ್ನದ್ಧವಾಗಿದೆ~ ಎಂದರು. `ಭಾರತದಲ್ಲಿ ಮಧ್ಯಮ ಗಾತ್ರದ ಕಾರುಗಳ ಪಾಲು ಶೇ 5ರಷ್ಟು ಇರುವುದರಿಂದ ಮುಂದಿನ ದಿನಗಳಲ್ಲಿ ಬೇಡಿಕೆ ಹೆಚ್ಚಾಗಲಿದೆ.

ಇಂಡೋನೇಷ್ಯಾ ಸೇರಿದಂತೆ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಈ ವಿಭಾಗದ ಕಾರುಗಳಿಗೆ ಭಾರಿ ಬೇಡಿಕೆ ಇರುವುದರಿಂದ ಹಾಗೂ ಭಾರತದಲ್ಲಿ `ಎಸ್‌ಯುವಿ~ ಹಾಗೂ `ಎಂಪಿವಿ~ ಕಾರುಗಳ ಬೇಡಿಕೆ ಕಳೆದ ನಾಲ್ಕು ವರ್ಷಗಳಲ್ಲಿ 12 ಪಟ್ಟು ಏರಿರುವುದರಿಂದ ಮಾರುತಿ ಸುಜುಕಿ ತನ್ನ ಬೆಳವಣಿಗೆ ದೃಷ್ಟಿಯಿಂದ ಈ ಕ್ಷೇತ್ರವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ~ ಎಂದು ಭಾರತೀಯ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಶಶಾಂಕ ಶ್ರೀವಾತ್ಸವ ತಿಳಿಸಿದರು.

`ಕೆ ಸರಣಿಯ 1.4 ಲೀಟರ್ ಸಾಮರ್ಥ್ಯದ ವಿವಿಟಿ ಪೆಟ್ರೋಲ್ ಎಂಜಿನ್ ಅನ್ನು ಇದೇ ಮೊದಲ ಬಾರಿಗೆ ಕಂಪೆನಿ ಪರಿಚಯಿಸುತ್ತಿದೆ. ಜತೆಯಲ್ಲಿ 1.3 ಲೀಟರ್ ಸಾಮರ್ಥ್ಯದ ಡಿಡಿಐಎಸ್ ಎಂಜಿನ್ ಹೊಂದಿರುವ `ಎರ್ಟಿಗಾ~ ತನ್ನ ಇತರ ಕಾರುಗಳಿಗಿಂತ ಹೆಚ್ಚು ಶಕ್ತಿಯುತವಾಗಿದೆ. ಪೆಟ್ರೋಲ್ ಕಾರು ಪ್ರತಿ ಲೀಟರ್‌ಗೆ 16 ಕಿ.ಮೀ ಹಾಗೂ ಡೀಸೆಲ್ 20 ಕಿ.ಮೀ ಇಂಧನ ದಕ್ಷತೆ ಹೊಂದಿದೆ. ಮೂರು ಮಾದರಿ ಹೊಂದಿರುವ `ಎರ್ಟಿಗಾ~ ಕಾರುಗಳ ನೋಂದಣಿ ಏಪ್ರಿಲ್ ಮೊದಲ ವಾರದಲ್ಲಿ ಆರಂಭವಾಗಲಿದೆ~ ಎಂದು ಮಾರುತಿ ಸುಜುಕಿ ಅಧಿಕಾರಿಗಳು ತಿಳಿಸಿದರು. ಮೂರು ಸಾಲಿನ ಏಳು ಆಸನಗಳ ವ್ಯವಸ್ಥೆ ಇರುವ ಈ ಕಾರಿನ ಕಾಲ್ಪನಿಕ ವಿನ್ಯಾಸ ಕಳೆದ ಸಾಲಿನ ವಾಹನ ಮೇಳದಲ್ಲಿಯೇ ಅನಾವರಣಗೊಳಿಸಲಾಗಿತ್ತು. ಗುರಗಾಂವ್‌ನಲ್ಲಿರುವ ಮಾರುತಿ ಸುಜುಕಿ ತಯಾರಿಕಾ ಕೇಂದ್ರದಲ್ಲಿ ಈಗಾಗಲೇ ವಾಹನಗಳ ತಯಾರಿಕೆ ಆರಂಭವಾಗಿದೆ. ಆದರೆ, ಇದರ ಬೆಲೆಯನ್ನು ಮಾರ್ಚ್ ಅಂತ್ಯದ ವೇಳೆಗೆ ನಿರ್ಧರಿಸಲಾಗುವುದು ಎಂದು ಶಶಾಂಕ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT