ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯವರ್ತಿಗಳ ನಿಯಂತ್ರಣಕ್ಕೆ ಕ್ಯಾಮೆರಾ ಕಣ್ಗಾವಲು

ಮಂಡ್ಯ ನಗರಸಭೆಯಲ್ಲೊಂದು ಪ್ರಯೋಗ
Last Updated 6 ಜನವರಿ 2014, 5:00 IST
ಅಕ್ಷರ ಗಾತ್ರ

ಮಂಡ್ಯ: ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಿಸಲು ಹಾಗೂ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಂಡ್ಯ ನಗರಸಭೆ ಕಚೇರಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಕಚೇರಿಯ ವಿವಿಧೆಡೆ 9 ಕ್ಯಾಮೆರಾಗಳನ್ನು 85 ಸಾವಿರ ರೂಪಾಯಿಗಳನ್ನು ಅಳವಡಿಸಲಾಗಿದ್ದು, ಅದರ ವೀಕ್ಷಣೆಗೆ ನಗರಸಭೆ ಪೌರಾಯುಕ್ತರ ಕಚೇರಿಯಲ್ಲಿ ಟಿವಿಯ ವ್ಯವಸ್ಥೆ ಮಾಡಲಾಗಿದೆ.

ನಗರಸಭೆಯ ಪ್ರವೇಶ ದ್ವಾರಗಳಲ್ಲಿ ಎರಡು ಕ್ಯಾಮೆರಾಗಳನ್ನು ಅಳವಡಿಸ ಲಾಗಿದೆ. ಕಚೇರಿಗೆ ಯಾರು ಬರುತ್ತಾರೆ, ಯಾರು ಹೋಗುತ್ತಾರೆ ಎಂಬುದನ್ನು ಗಮನಿಸಲು ಇವು ಸಹಾಕಯವಾಗಿವೆ.

ಖಾತಾ ಬದಲಾವಣೆ, ಲೆಕ್ಕಪತ್ರ, ಸಾಮಾನ್ಯ ರಸೀದಿ, ಜನನ ಮತ್ತು ಮರಣ, ಬಿಲ್‌ ಕಲೆಕ್ಷನ್‌ ಸೇರಿದಂತೆ ಉಳಿದೆಡೆ ಏಳು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕಂದಾಯ ಹಾಗೂ  ಆಡಳಿತ ವಿಭಾಗದಲ್ಲಿ ಇನ್ನೆರಡು ಕ್ಯಾಮೆರಾಗಳನ್ನು ಶೀಘ್ರದಲ್ಲಿಯೇ ಅಳವಡಿಸಲಾಗುವುದು ಎಂದು ಪೌರಾಯುಕ್ತ ಡಾ.ದಾಸೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಬರುತ್ತಾರೆಯೇ, ಕುರ್ಚಿಯಲ್ಲಿ ಇರುತ್ತಾರೆಯೇ, ಕಚೇರಿಗೆ ಆಗಮಿಸುವ ಸಾರ್ವಜನಿಕರೊಂದಿಗೆ ಹೇಗೆ ವರ್ತಿಸುತ್ತಾರೆ ಎಂಬುದನ್ನು ಗಮನಿಸಲಾಗುತ್ತದೆ. ಪ್ರವೇಶ ದ್ವಾರದಲ್ಲಿ ಹಾಕಲಾಗಿರುವ ಕ್ಯಾಮೆರಾಗಳಲ್ಲಿ ಪದೇ, ಪದೇ ಯಾರಾದರೂ ನಗರಸಭೆಗೆ ಬರುತ್ತಾರೆಯೇ, ಬಂದರೆ ಅವರ ಕೆಲಸ ಏನು ಎಂಬುದನ್ನು ಪರಿಶೀಲಿಸ ಲಾಗುತ್ತದೆ ಎಂದರು.

ಕೆಲಸ ನಿರ್ವಹಣೆಯನ್ನು ಸರಿಯಾಗಿ ಮಾಡುತ್ತಿಲ್ಲ ಎಂಬ ಕಾರಣಕ್ಕೆ ಈಗಾಗಲೇ ಒಬ್ಬರನ್ನು ಬೇರೆ ವಿಭಾಗಕ್ಕೆ ವರ್ಗಾಯಿಸಲಾಗಿದೆ. ಕ್ಯಾಮೆರಾ ಅಳವಡಿಕೆಯ ನಂತರ ಸಿಬ್ಬಂದಿಯ ಕಾರ್ಯದಲ್ಲಿ ಸುಧಾರಣೆಯಾಗಿದೆ. ಮಧ್ಯವರ್ತಿಗಳಿಗೂ ಕಡಿವಾಣ ಹಾಕಲು ಸಾಧ್ಯವಾಗುತ್ತೆದೆ ಎನ್ನುತ್ತಾರೆ ಅವರು.
ಎಲ್ಲ ಕ್ಯಾಮೆರಾಗಳ ನಿರ್ವಹಣೆಯನ್ನು ನಗರಸಭೆಯ ತಾಂತ್ರಿಕ ವಿಭಾಗದ ಸಿಬ್ಬಂದಿ ಮಾಡುತ್ತಿದ್ದಾರೆ. ಹತ್ತು ದಿನಗಳ ಕಾಲ ಕ್ಯಾಮೆರಾದಲ್ಲಿ ಸತತವಾಗಿ ರೆಕಾರ್ಡ್‌ ಆಗುತ್ತದೆ. ಹತ್ತು ದಿನಕ್ಕೊಮ್ಮೆ ಅದನ್ನು ಸಿಡಿಗಳಲ್ಲಿ ಸಂಗ್ರಹಿಸಿಡಲಾಗುತ್ತದೆ.

ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಈಗಾಗಲೇ 15 ದಿನಗಳು ಕಳೆದಿವೆ. ಆಡಳಿತ ವ್ಯವಸ್ಥೆಯಲ್ಲಿಯೂ ಅಲ್ಪ ಬದಲಾವಣೆ ಕಂಡು ಬಂದಿದೆ ಎನ್ನುತ್ತಾರೆ ಅಧಿಕಾರಿಗಳು. ಕಾರ್ಮಿ ಕರಿಗೂ ಹಾಜರಾತಿಗೆ ಬಯೋ ಮೆಟ್ರಿಕ್‌ ಅಳವಡಿಸುವ ಚಿಂತನೆಯೂ ನಡೆದಿದೆ. ಒಟ್ಟಿನಲ್ಲಿ ನಗರಸಭೆಯಲ್ಲಿ ಸರಾಗವಾಗಿ ಸಾರ್ವಜನಿಕರ ಕೆಲಸಗಳಾದರೆ ಸಾಕು ಎನ್ನುವುದು ನಗರದ ಜನತೆ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT