ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ

Last Updated 16 ಅಕ್ಟೋಬರ್ 2011, 9:35 IST
ಅಕ್ಷರ ಗಾತ್ರ

ಮಡಿಕೇರಿ: ದೇಶದ ನಾನಾ ಭಾಗಗಳ ಎನ್‌ಸಿಸಿ ಕೆಡೆಟ್‌ಗಳು ಒಂದೆಡೆ ಸೇರಿ ರಾಷ್ಟ್ರದ ಭದ್ರತೆ, ಐಕ್ಯತೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಪರಸ್ಪರ ಚರ್ಚಿಸಲು ರಾಷ್ಟ್ರೀಯ ಭಾವೈಕ್ಯತಾ ಶಿಬಿರವು ವೇದಿಕೆಯನ್ನು ನಿರ್ಮಿಸಿ ಕೊಡುತ್ತದೆ ಎಂದು ಕರ್ನಾಟಕ ಮತ್ತು ಗೋವಾ ರಾಜ್ಯಗಳ ಎನ್‌ಸಿಸಿ ಡೆಪ್ಯೂಟಿ ಡಿಜಿ ಏರ್‌ಕಮಾಂಡ್ ಎಸ್.ಎಸ್. ದೇಶಪಾಂಡೆ ಅವರು ಹೇಳಿದರು.

ಮಡಿಕೇರಿ ಸಮೀಪದ ಗಾಳಿಬೀಡು ಬಳಿಯ ಜವಾಹರ್ ನವೋದಯ ವಿದ್ಯಾಲಯದಲ್ಲಿ ಎನ್.ಸಿ.ಸಿ ಶಿಬಿರ ನಡೆಯುತ್ತಿದ್ದು, ಈ ಪ್ರಯುಕ್ತ ಶನಿವಾರ ನಡೆದ ರಾಷ್ಟ್ರೀಯ ಭಾವೈಕ್ಯತಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಸುಮಾರು 15 ಎನ್.ಸಿ.ಸಿ ರಾಜ್ಯ ಘಟಕ ಗಳಿಂದ 628 ಕೆಡೆಟ್‌ಗಳು ಸೇರಿದಂತೆ 680 ಜನರು ಪಾಲ್ಗೊಂಡಿದ್ದು, ಕ್ರೀಡೆ, ಸಾಂಸ್ಕೃತಿಕ, ಕಲೆ, ಸಾಹಿತ್ಯ, ಶಿಸ್ತು ಮತ್ತಿತರ ಬಗ್ಗೆ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ರಾಜ್ಯದ 2 ಜಿಲ್ಲೆಗಳಲ್ಲಿ ರಾಷ್ಟ್ರ ಮಟ್ಟದ ಎನ್.ಸಿ.ಸಿ ಕ್ಯಾಂಪ್‌ನ್ನು ನಡೆ ಸಲು ತೀರ್ಮಾನಿಸಲಾಗಿತ್ತು. ಅದರಂತೆ ಮೈಸೂರು ಜಿಲ್ಲೆಯಲ್ಲಿ ಈಗಾಗಲೇ ಕ್ಯಾಂಪ್ ಪೂರ್ಣಗೊಂಡಿದ್ದು, ಈಗ ಕೊಡಗು ಜಿಲ್ಲೆಯಲ್ಲಿ ನಡೆಯುತ್ತಿದೆ. ಕೊಡಗು ಜಿಲ್ಲೆಯಲ್ಲಿ ಪ್ರತಿ ವರ್ಷವೂ ಕೂಡ ಈ ಶಿಬಿರವನ್ನು ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಎನ್.ಸಿ.ಸಿ. ಅಧಿಕಾರಿಗಳಾದ ಕರ್ನಲ್ ದಿನೇಶ್ ನಾಯಕ್‌ವಾಡ್, ಉಪ ಲೆಫ್ಟಿನೆಂಟ್ ಕರ್ನಲ್ ಪ್ರಶಾಂತ್, ದಾಬೋದ್‌ಕರ್, ಕ್ಯಾಪ್ಟನ್ ಡಿ. ಮಹೇಶ್ ರೈ, ಲೆಪ್ಟಿನೆಂಟ್ ಬ್ರೈಟಾ ಕುಮಾರ್, ಬಿ.ಎಂ.ಗಣೇಶ್, ಬಾಬೂ ರಾಜನ್ ಮತ್ತಿತರರು ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದರು.

2010-11 ನೇ ಸಾಲಿನಲ್ಲಿ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸ ವದ ಪೆರೆಡ್‌ನಲ್ಲಿ ಕೊಡಗು ಬೆಟಾಲಿ ಯನ್ ಪ್ರತಿನಿಧಿಸಿ, ಪೆರೆಡ್‌ನಲ್ಲಿ ಭಾಗ ವಹಿಸಿದ್ದ ಪುತ್ತೂರು ವಿವೇಕಾನಂದ ಕಾಲೇಜಿನ ಎನ್‌ಸಿಸಿ ಕೆಡೆಟ್ ಪಿ. ಕೀರ್ತನ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕೊಡವ ಸಾಂಸ್ಕೃತಿಕ ಕಲೆಯಾದ ಉಮ್ಮತ್ತಾಟ್ ಸೇರಿದಂತೆ  ಭರತನಾಟ್ಯ ಹಾಗೂ ಜಾನಪದ, ಭಾವಗೀತೆ ಮತ್ತಿತರ ಹಾಡು, ನೃತ್ಯಗಳು ಹಾಗೂ ಹಲವೂ ರಾಜ್ಯದ ಶಿಬಿರಾರ್ಥಿಗಳು ತಮ್ಮ ರಾಜ್ಯದ ವಿಶೇಷವಾದ ಭಂಗಿಯಲ್ಲಿ ನೃತ್ಯ ಪ್ರದರ್ಶನ ಮಾಡಿ ಎನ್.ಸಿ.ಸಿ ಕೆಡೆಟ್‌ಗಳನ್ನು ರಂಜಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT