ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಕಲಕಿದ ಛಾಯಾಚಿತ್ರ ಪ್ರದರ್ಶನ

Last Updated 31 ಜುಲೈ 2013, 6:36 IST
ಅಕ್ಷರ ಗಾತ್ರ

ಧಾರವಾಡ:  `ಉತ್ತರಾಖಂಡ ಜಲಪ್ರಳಯದಿಂದ ನಿರಾಶ್ರಿತರಾದವರಿಗೆ ನೆಲೆ ಒದಗಿಸಿಕೊಡಲು ಛಾಯಾಗ್ರಾಹಕರು ಹಾಗೂ ಕಲಾವಿದರು ಒಟ್ಟಾಗಿ ಶ್ರಮಿಸುತ್ತಿರುವುದು ಇತರರಿಗೆ ಮಾದರಿ' ಎಂದು ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಹೇಳಿದರು.

ನಗರದ ಆರ್ಟ್ ಗ್ಯಾಲರಿಯಲ್ಲಿ ಮಾಸ್ ಮೀಡಿಯಾ ಕಮ್ಯುನಿಕೇಶನ್ಸ್ ಫಾರ್ ಅರ್ಬನ್ ಅಂಡ್ ರೂರಲ್ ಡೆವಲಪ್‌ಮೆಂಟ್ ಸೆಂಟರ್, ಬಾಲನಂದನ ಟ್ರಸ್ಟ್, ಆರ್.ಕೆ. ಛಾಯಾ ಫೌಂಡೇಶನ್ ಹಾಗೂ ಸರ್ಕಾರಿ ಚಿತ್ರಕಲಾ ಕಾಲೇಜು ಜಂಟಿಯಾಗಿ ಆಯೋ ಜಿಸಿದ್ದ 11 ದಿನಗಳ ಛಾಯಾಚಿತ್ರ ಹಾಗೂ ಚಿತ್ರಕಲಾ ಪ್ರದರ್ಶನವು ಮಂಗಳವಾರ ಸಮಾರೋಪಗೊಂಡ ಹಿನ್ನೆಲೆಯಲ್ಲಿ ಅವರು ಮಾತನಾಡಿದರು.

`ಛಾಯಾಚಿತ್ರದ ಮೂಲಕ ಪರಿಸರ ಕಾಳಜಿ ನಿರ್ಮಾಣ ಮಾಡುತ್ತಿರುವುದು ಸಂತಸದ ಸಂಗತಿ. ಇದಕ್ಕೆ ಜಿಲ್ಲಾಡಳಿತ ಮುಂಬರುವ ದಿನಗಳಲ್ಲಿ ಅಗತ್ಯ ಸಹಾಯ ಹಾಗೂ ಸಹಕಾರ ನೀಡಲಿದೆ' ಎಂದು ಭರವಸೆ ನೀಡಿದರು.

ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಮಹೇಶ ಶೆಟ್ಟಿ, ಹುಬ್ಬಳ್ಳಿ, ಧಾರವಾಡ ನಾಗರಿಕ ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ, ಸರ್ಕಾರಿ ಚಿತ್ರಕಲಾ ಕಾಲೇಜಿನ ಪ್ರಾಚಾರ್ಯ ಎನ್.ಎಂ.ದಾಟನಾಳ, ಮಾಸ್ ಮೀಡಿಯಾ ಕಮ್ಯುನಿಕೇಶನ್ಸ್ ಫಾರ್ ಅರ್ಬನ್ ಅಂಡ್ ರೂರಲ್ ಡೆವಲಪ್‌ಮೆಂಟ್ ಸೆಂಟರ್ ಅಧ್ಯಕ್ಷ ಬಾಲಚಂದ್ರ ಜಾಬಶೆಟ್ಟಿ, ಉಪಾಧ್ಯಕ್ಷ ಶಶಿಕಾಂತ ದೇವಾಡಿಗ, ಛಾಯಾಗ್ರಾಹಕ ರಾಮಚಂದ್ರ ಕುಲಕರ್ಣಿ, ಬಾಲನಂದನ ಟ್ರಸ್ಟ್‌ನ ಪ್ರೀತಿ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT