ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಮೋಹಕ ಕೂಚುಪುಡಿ ಪ್ರದರ್ಶನ

Last Updated 15 ಜನವರಿ 2012, 19:30 IST
ಅಕ್ಷರ ಗಾತ್ರ

ಜನವರಿ ಮಾಸ ಬಂತೆಂದರೆ ತ್ಯಾಗರಾಜರ ಆರಾಧನೆ, ಸಂಕ್ರಾಂತಿ ಸಂಗೀತೋತ್ಸವ ಕಾರ್ಯಕ್ರಮಗಳು ನಗರದ ನಾನಾಕಡೆ ನಡೆಯುತ್ತವೆ. ಆ ಮೂಲಕ ಸಂಗೀತಾಸಕ್ತರಿಗೆ ಗಾನದ ರಸಧಾರೆ ಹರಿಯುತ್ತದೆ. ಜೊತೆಗೆ ನೃತ್ಯ ಕಾರ್ಯಕ್ರಮಗಳೂ ಅದಕ್ಕೆ ಮೆರುಗು ನೀಡುತ್ತವೆ.

ಸುಚಿತ್ರಾ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯಲ್ಲಿ ಆಯೋಜಿಸದ್ದ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮದಲ್ಲಿ ನೃತ್ಯ ಕಲಾವಿದೆ ವೈಜಯಂತಿಕಾಶಿ ಅವರ ಕೂಚಿಪುಡಿ ನೃತ್ಯ ಮನಮೋಹಕವಾಗಿತ್ತು. ಅವರ ನೃತ್ಯದಲ್ಲಿ ಅಭಿನಯ ಸೂಕ್ಷ್ಮ, ಭಾವಕ್ಕೆ ತಕ್ಕ ಹಾಗೇ ಬಳುಕುವ ಜಾಣ್ಮೆ ಕಣ್ಮನ ಸೆಳೆಯಿತು.

ಕೂಚಿಪುಡಿ ನಾಟ್ಯದ ಲಯ ಲಾಸ್ಯ, ಮೆಲು ಸಂಗೀತದೊಂದಿಗೆ ಶುರುವಾದ ಅವರ ನೃತ್ಯ ಪ್ರದರ್ಶನ ಮನಸೂರೆಗೊಳಿಸಿತು. ನೃತ್ಯಕ್ಕೆ ಜೀವತುಂಬುವ ಅವರ ಆಂಗಿಕ ಅಭಿನಯ ವಿಶಿಷ್ಟವಾಗಿತ್ತು.

ಅವರ ನೃತ್ಯದಲ್ಲಿ ಕೂಚಿಪುಡಿ ಸಂಪ್ರದಾಯಗಳು ಹಾಗೂ ಹೊಸತನ ಪ್ರಭಾವದ ಮಿಶ್ರಣವಿತ್ತು. ನೃತ್ಯ ಸಂಗೀತ ಮತ್ತು ತಾಳಗಳ ಸಮ್ಮಿಳತದಿಂದ ಕೂಡಿದ ಕಾರ್ಯಕ್ರಮ ವಿಶಿಷ್ಟವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT