ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನರಂಜನಾ ಪಾರ್ಕ್‌ಗಳಲ್ಲಿ ವಂಡರ್‌ಲಾಗೆ 8ನೇ ಸ್ಥಾನ

Last Updated 11 ಜುಲೈ 2013, 19:59 IST
ಅಕ್ಷರ ಗಾತ್ರ

ಭಾರತದ ಪ್ರಮುಖ ಮನರಂಜನಾ ಪಾರ್ಕ್‌ಗಳಲ್ಲಿ ಒಂದಾಗಿರುವ ವಂಡರ್ ಲಾ ಹಾಲಿಡೇಸ್ ಸಂಸ್ಥೆಯ ಬೆಂಗಳೂರು ಘಟಕವು ಏಷ್ಯಾದಲ್ಲಿ ಮೊದಲ 8ನೇ ಸ್ಥಾನವನ್ನು ಗಳಿಸಿದೆ. ಟ್ರಿಪ್ ಅಡ್ವೈಸರ್ ಎಂಬ ಟ್ರಾವೆಲ್ ಸೈಟ್ ವೀಕ್ಷಕರ ಅಭಿಪ್ರಾಯಗಳನ್ನು ಆಧರಿಸಿ `ಟ್ರಾವೆಲ್ಲರ್ಸ್‌ ಚಾಯ್ಸ ಅಟ್ರಾಕ್ಷನ್ಸ್ ಪ್ರಶಸ್ತಿ'ಯನ್ನು ಪ್ರಕಟಿಸಿತು. ಇದರಲ್ಲಿ ಜಗತ್ತಿನಲ್ಲೇ ಅತಿ ದೊಡ್ಡದು ಎಂದು ಗುರುತಿಸಲಾದ ಮನರಂಜನಾ ಉದ್ಯಾನ, ವಾಟರ್ ಪಾರ್ಕ್‌ಗಳು ಸೇರಿದಂತೆ 1263 ಕೇಂದ್ರಗಳಿಗೆ ಪ್ರಶಸ್ತಿ ಪ್ರಟಿಸಲಾಯಿತು.

ದೇಶದಲ್ಲೇ ಮೊದಲ ಹತ್ತು ಮನರಂಜನಾ ಮತ್ತು ವಾಟರ್ ಪಾರ್ಕ್‌ಗಳಲ್ಲಿ ಗೌರವಕ್ಕೆ ಪಾತ್ರವಾದ್ದ ವಂಡರ್ ಲಾ ಬೆಂಗಳೂರಿಗೆ 8ನೇ ಹಾಗೂ ಕೊಚ್ಚಿಗೆ 14ನೇ ಸ್ಥಾನ ಪ್ರಾಪ್ತವಾಯಿತು. ಸ್ಪರ್ಧೆಯಲ್ಲಿ ಒಟ್ಟು 25 ಕೇಂದ್ರಗಳು ಪಾಲ್ಗೊಂಡಿದ್ದವು. ವಂಡರ್‌ಲಾ ಕೊಚ್ಚಿ ಒಟ್ಟಾರೆ 92.95 ಎಕರೆ  ಭೂ ಪ್ರದೇಶದಲ್ಲಿದ್ದು, ಇಲ್ಲಿ 22 ನೀರು ಆಧಾರಿತ ಆಕರ್ಷಣೆಗಳಿವೆ.

ಇತರೆ 34 ಆಕರ್ಷಣೆಗಳಿವೆ. ವಂಡರ್‌ಲಾ ಬೆಂಗಳೂರು 81.75 ಎಕರೆ ಭೂ ಪ್ರದೇಶದಲ್ಲಿದ್ದು, ಇಲ್ಲಿ 20 ನೀರು ಆಧಾರಿತ ಮತ್ತು ಇತರೆ 33 ಆಕರ್ಷಣೆಗಳಿವೆ. ವಂಡರ್‌ಲಾಗೆ 2012ನೇ ವರ್ಷದಲ್ಲಿ 2.26 ಮಿಲಿಯನ್ ಜನರು ಭೇಟಿ ನೀಡಿದ್ದು, ಕಳೆದ ಒಂಬತ್ತು ತಿಂಗಳಿನಲ್ಲಿ ಒಟ್ಟಾರೆ 1.82 ದಶಲಕ್ಷ ವೀಕ್ಷಕರು ಈ ಎರಡು ಪಾರ್ಕ್‌ಗಳಿಗೆ ಭೇಟಿ ನೀಡಿದ್ದಾರೆ.

ಎರಡೂ ಪಾರ್ಕ್‌ಗಳಲ್ಲಿ ಸೋಲಾರ್ ಆಧಾರಿತ ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು, ಪ್ರಕೃತಿಸ್ನೇಹಿ ಆಗಿದೆ. ಎರಡು ಪಾರ್ಕ್‌ಗಳಲ್ಲಿ ಗೋ ಗ್ರೀನ್ ಪರಿಸರ ಸ್ನೇಹಿ ಕ್ರಮಗಳನ್ನು ಅಳವಡಿಸಲಾಗಿದೆ. ಪರಿಸರಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದ ರೀತಿಯಲ್ಲಿ ಇಲ್ಲಿ ಕ್ರಮ ಕೈಗೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ವಂಡರ್‌ಲಾದ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕೆ. ಚಿಟ್ಟಿಲಪ್ಪಿಲ್ಲಿ ಅವರು, `ಗ್ರಾಹಕರು ಮತು ಟ್ರಿಪ್ ಅಡ್ವೈಸರ್ ಸಂಸ್ಥೆಗೆ ಈ ಗೌರವಕ್ಕಾಗಿ ಕೃತಜ್ಞತೆ ಸಲ್ಲಿಸುತ್ತೇವೆ. ಇದು ಅತ್ಯುತ್ತಮ ಸೇವೆ ಒದಗಿಸುವ ನಮ್ಮ ಬದ್ಧತೆಗೆ ದೊರೆತ ಗೌರವ. ಅತ್ಯಾಧುನಿಕ ಕ್ರಮಗಳಿಂದ ಅತ್ಯುತ್ತಮ ಮನರಂಜನೆಯನ್ನು ಒದಗಿಸಲು ಸಂಸ್ಥೆಯು ಬಯಸಲಿದೆ. ಭಾರತದಲ್ಲಿ ಮನರಂಜನಾ ಉದ್ಯಾನ ಕ್ಷೇತ್ರವು ಬೆಳವಣಿಗೆಗೆ ವಿಫುಲವಾದ ಅವಕಾಶಗಳನ್ನು ಹೊಂದಿದೆ' ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT