ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಮನುಷ್ಯನಿಗೆ ಆತ್ಮ ಸಾಕ್ಷಾತ್ಕಾರದ ಹಂಬಲವಿರಬೇಕು'

Last Updated 24 ಏಪ್ರಿಲ್ 2013, 6:46 IST
ಅಕ್ಷರ ಗಾತ್ರ

ಗದಗ: ಮನುಷ್ಯನಿಗೆ ಆತ್ಮ ಸಾಕ್ಷಾತ್ಕಾರದ ಹಂಬಲವಿರಬೇಕು, ತ್ಯಾಗ ಜೀವನದ ಪರಿಕಲ್ಪನೆ ಹೊಂದಿ, ಆಧ್ಯಾತ್ಮಿಕ ನಿಲುವಿನಲ್ಲಿ ಅಹಿಂಸೆಯ ಧರ್ಮ ಪಥದಲ್ಲಿ ನಡೆದಾಗ ಮಾನವೀಯ ಗುಣ ಸಂಪನ್ನತೆ  ಪಡೆಯುತ್ತಾನೆ ಎಂದು ಅಣ್ಣಿಗೇರಿಯ ಪ್ರಾಚಾರ್ಯ ಎಸ್.ಎಸ್.ಹರ್ಲಾಪೂರ ಅಭಿಪ್ರಾಯಪಟ್ಟರು.

ಅನಂತ ಆರ್ಟ್ಸ್ ಗೆಳೆಯರ ಬಳಗ ನಗರದ ಕಾಶೀ ಪೀಠದ ಸಂಸ್ಕೃತ ವೈದಿಕ ಪಾಠ ಶಾಲೆಯಲ್ಲಿ  ಮಂಗಳವಾರ ಏರ್ಪಡಿಸಿದ್ದ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ  ಜೈನ ಧರ್ಮದಲ್ಲಿ ಮಾನವೀಯ ತತ್ವಗಳು ಕುರಿತು ಉಪನ್ಯಾಸ ನೀಡಿದರು.

ಜೀವನದಲ್ಲಿ ಅನುಭವಿಸುವ ಎಲ್ಲ ದುಖಃಗಳ ಮೂಲವೇ ಆಸೆ. ಮಹಾವೀರರ ಜೀವನ, ಆದರ್ಶ, ತ್ಯಾಗಮಯ ಬದುಕು ಸಂದೇಶಗಳು ಸರ್ವಕಾಲಕ್ಕೂ ಪ್ರಸ್ತುತ ಎಂದರು.

ಜಿಲ್ಲಾ ಜಮಾತೆ ಇಸ್ಲಾಂ ಹಿಂದ್‌ನ ಅಧ್ಯಕ್ಷ ಜನಾಬ ಕೆ.ಐ.ಶೇಖ ಮಾತನಾಡಿ, ಬದುಕಿನ ಗುರಿ ಸಾಧಿಸಲು ಯೋಗ್ಯ ಗುರು, ಸೂಕ್ತ ಮಾರ್ಗದರ್ಶನ, ಆದರ್ಶ ತತ್ವಗಳು ಅವಶ್ಯವಾಗಿ ಬೇಕು ಎಂದು ಹೇಳಿದರು.

ಗದುಗಿನ ಸತ್ಸಂಗ ಸಮಿತಿ ಅಧ್ಯಕ್ಷ ಐ.ಕೆ. ಬಲೂಚಗಿ, ಬಾಗಲಕೋಟೆಯ ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದ ವ್ಯವ ಸ್ಥಾಪಕ ಕೆ.ಎಂ.ಗುಂಡಪ್ಪ, ಕಾಶೀ ಪೀಠ ಸಂಸ್ಕೃತ ಪಾಠಶಾಲೆಯ ವ್ಯವಸ್ಥಾಪಕ ವೇ.ಮೂ.ಬೆಟದಯ್ಯ ಹಿರೇಮಠ, ಗ್ರಾಮೀಣ ಲಿಂಗವಂತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಎಂ.ಪಾಟೀಲ, ನಿವೃತ್ತ ಉಪ ತಹಶೀಲ್ದಾರ ದೇವರಾಜ ಪಿಡ್ಡಿ, ನಿವೃತ್ತ ಗ್ರಂಥಪಾಲಕ ಎ.ವೈ.ಇಂಚಲ ಮಾತನಾಡಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಕವಿತಾ ಬಸವರಾಜ ದಂಡಿನ ಅಧ್ಯಕ್ಷತೆ ವಹಿಸಿದ್ದರು. ಹರ್ಷಾ ಬ್ಯಾಹಟ್ಟಿ ಪ್ರಾರ್ಥಿಸಿದರು, ಅನಂತ ಮಣಿ ಸ್ವಾಗತಿಸಿದರು, ಗೂಳಯ್ಯ ಮಾಲಗಿತ್ತಿಮಠ ವಂದಿಸಿದರು.

ಗುರುಸಿದ್ದಯ್ಯ ಹಿರೇಮಠ, ಎಂ.ಎಫ್.ಕೊಲ್ಕಾರ, ಗಂಗಾಧರಗೌಡ ಗೌಡರ, ಬಿ.ಎಂ.ಮುದ್ದೇಬಿಹಾಳ, ಬಿ.ವಿ.ಜಾಲಿಹಾಳ, ಪಿ.ಈರಪ್ಪ, ವಿ.ಎಂ.ಕ್ಯಾಮನಗೌಡ್ರ, ಗೊಡಚಪ್ಪ ಬಿ.ಪಿ.ಹಿರೇಮಠ, ಪಿ.ಬಿ.ಮುಧೋಳಮಠ, ಎಚ್.ಬಿ.ಮೇಟಿ ಹಾಜರಿದ್ದರು.

ಮಹಾವೀರರ ಜಯಂತಿ ಮೆರವಣಿಗೆ
ನರಗುಂದ: ಪಟ್ಟಣದಲ್ಲಿ   ಮಹಾವೀರರ 2613ನೇ ಜಯಂತಿ ಅಂಗವಾಗಿ  ಮಂಗಳವಾರ ಮಹಾವೀರರ ಮೂರ್ತಿ ಹಾಗೂ  ಭಾವಚಿತ್ರದ ವೆುರವಣಿಗೆ ಸಕಲ ವಾದ್ಯಮೇಳದೊಂದಿಗೆ ಸಂಭ್ರಮದಿಂದ ನಡೆಯಿತು.

  ಬೆಣ್ಣಿಪೇಠೆಯ ಜಿನಮಂದಿರದಿಂದ ಆರಂಭ ವಾದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಾದ ದಂಡಾಪುರ, ಮಾರ್ಕೆಟ್ ಹಾಗೂ ಗಾಂಧಿಚೌಕ್ ಮೂಲಕ ಸಂಚರಿಸಿ ನಂತರ ಜಿನಮಂದಿರದಲ್ಲಿ  ಸಮಾರೋಪಗೊಂಡಿತು. ಜಯಂತಿ ಅಂಗವಾಗಿ ಜಿನಮಂದಿರದಲ್ಲಿ ವಿಶೇಷ ಪೂಜೆ ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ಎ.ಜಿ.ಉಪಾಧ್ಯೆ, ಕೃಷ್ಣಪ್ಪ ರೋಖಡೆ, ಲಲಿತ ಜೈನ್, ಸುರೇಶ ಜೈನ್, ತವನಪ್ಪ ರೋಖಡೆ,  ಸುರೇಶ ವಜ್ರಂಗಿ, ನಾಗರಾಜ ವಡವಿ, ಹೇಮಣ್ಣ ಮುತ್ಲಿ, ಮನೋಜ ಚೋಪ್ರಾ, ಸುರೇಶ ಚೋಪ್ರಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT