ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಮನುಷ್ಯರು ಮಾನವರಾಗಿ ಜೀವಿಸಬೇಕು'

Last Updated 4 ಏಪ್ರಿಲ್ 2013, 7:55 IST
ಅಕ್ಷರ ಗಾತ್ರ

ಹುಣಸಗಿ: ಎಲ್ಲ ಪ್ರಾಣಿಗಳಿಂತ ಹೆಚ್ಚಿನದನ್ನು ದೇವರು ಮಾನವನಿಗೆ ನೀಡಿದ್ದಾನೆ. ಆದರೆ ನಾವು ಅದನ್ನು ಸದುಪಯೋಗ ಮಾಡಿಕೊಳ್ಳದೇ ಬೇರೆ ಯಾವುದಕ್ಕೋ ಬಳಕೆ ಮಾಡಿಕೊಳ್ಳುತ್ತದ್ದೇವೆ. ನಾವು ಯಾವುದನ್ನು ಮಾಡಬೇಕು ಎಂಬುದು ಮೊದಲು ತಿಳಿದುಕೊಳ್ಳಬೇಕು. ಮಾನವರು ಮಾನವರಾಗಿ ಜೀವಿಸಬೇಕೆಂದು ತಾಳಿಕೋಟೆ ವಿರಕ್ತ ಮಠದ ಖಾಸ್ಗತೇಶ್ವರ ಸ್ವಾಮಿಗಳು ನುಡಿದರು.

ಹುಣಸಗಿ ಸಮೀಪದ ಗುಳಬಾಳ ಗ್ರಾಮದ ಆನಂದಾಶ್ರಮದ ಮರಿಹುಚ್ಚೇಶ್ವರ ಸ್ವಾಮಿಗಳು ಮೌನ ಅನುಷ್ಠಾನ ಮುಕ್ತಾಯ, ಕಿರಿಯ ಪ್ರಾಥಮಿಕ ಶಾಲೆಯ ಉದ್ಘಾಟನೆ ಮತ್ತು ಹುಚ್ಚೇಶ್ವರ ಸ್ವಾಮಿಗಳ ಮೂರನೇ ಪುಣ್ಯಾರಾಧನೆ ಕಾರ್ಯಕ್ರದಲ್ಲಿ ಪಾಲ್ಗೊಂಡು ಮಾತನಾಡಿದರು.

ದೇವರು ನಮಗೆ ಅಗಾಧವಾದ ಶಕ್ತಿ ಮತ್ತು ಸಂಪತ್ತನ್ನು ನೀಡಿದ್ದಾನೆ. ಆದರೆ ಅದರ ಸದ್ವಿನಿಯೋಗ ವಾಗಬೇಕು. ಎಲ್ಲವೂ ನನಗೆ ಇರಲಿ ಎನ್ನುವದು ತಪ್ಪು, ಶರಣರು ಹೇಳಿದಂತೆ ಕಂತಿ ಬಿಕ್ಷೆ ಮಾಡಿ ತಂದರೂ ಅದರಲ್ಲಿ ಪರರಿಗೆ ನೀಡಿ ನಂತರ ನಾವು ಊಟಮಾಡಬೇಕು. ಅದರಂತೆ ಇಂದು ದಾನ ಧರ್ಮಕಾರ್ಯ ಮಾಡುವ ಮೂಲಕ ಬಡವರನ್ನು ಮೇಲೆತ್ತುವ ಕಾರ್ಯ ಮಾಡಿದಾಗ ಮಾತ್ರ ನಾವು ಮಾನವರಾಗಿ ಹುಟ್ಟಿದ್ದು ಸಾರ್ಥಕ ಎಂದು ಕಥೆಗಳ ಮೂಲಕ ತಿಳಿಸಿದರು.

ಶಿಕ್ಷಣ ಸಂಯೋಜಕ ಯಲ್ಲಪ್ಪ ಚಂದನಕೇರಿ ಮಾತನಾಡಿ ಇಂದು ಮಠಗಳು ಶೈಕ್ಷಣಿಕ ಕಾರ್ಯವನ್ನು ಮಾಡುವ ಮೂಲಕ ಸಮಾಜದ ಒಳಿತಿಗಾಗಿ ಶ್ರಮಿಸುತ್ತಿವೆ. ಅದಕ್ಕೆ ಹಿಂದಿನ ಪೀಠಾಧಿಪತಿಗಳಾದ ಹುಚ್ಚೇಶ್ವರ ಸ್ವಾಮಿಗಳು ಸಾಕಷ್ಟು ಶ್ರಮಿಸಿದ್ದನ್ನು ಸ್ಮರಿಸಬಹುದಾಗಿದೆ ಎಂದು ನುಡಿದರು.
ಚಂದ್ರಶೇಖರಗೌಡ ಮಾಗನೂರ, ರುದ್ರಗೌಡ ಪಾಟೀಲ ಗುಳಬಾಳ, ವೀರಯ್ಯ ಸ್ವಾಮಿಗಳು, ಚನ್ನಬಸವ ಶಿವಾಚಾರ್ಯರು, ಶಿವಲಿಂಗೇಶ್ವರಸ್ವಾಮಿಗಳು ಸೇರಿದಂತೆ ಇತರ ಸ್ವಾಮಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT