ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ನಿರ್ಮಾಣಕ್ಕೆ ಹೊಸ ತಂತ್ರಜ್ಞಾನ

Last Updated 25 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಗೋಡೆ ನಿರ್ಮಾಣಕ್ಕೆ ಕಲ್ಲು ಅಥವಾ ಇಟ್ಟಿಗೆ ಬಳಸದೇ ಗೋಡೆಯಷ್ಟೇ ಉದ್ದವಾಗಿ ತಯಾರಿಸಿರುವ ರೆಡಿಮೇಡ್ ಹಾಲೋ ಬ್ರಿಕ್ಸ್ ಬಳಸಲಾಗುತ್ತದೆ. ಇವುಗಳ ಮಧ್ಯೆ ಕಾಂಕ್ರೀಟ್ ಮತ್ತು ಸಿಮೆಂಟ್ ಹಾಕಲಾಗುತ್ತದೆ. ಏಳೆಂಟು ದಿನಗಳಲ್ಲಿ ಬ್ರಿಕ್ಸ್‌ಗಳನ್ನು ತೆಗೆದುಹಾಕಲಾಗುತ್ತದೆ. ಕೇವಲ ಗೋಡೆಯ ಮಧ್ಯಭಾಗದಲ್ಲಿ ಕಾಂಕ್ರೀಟ್ ಇರುವಂತೆ ನೋಡಿಕೊಳ್ಳುವುದರಿಂದ ಗೋಡೆ ಸಮತಟ್ಟಾಗಿರುತ್ತದೆ. ಅನಂತರ ನೇರವಾಗಿ ಇದಕ್ಕೆ ಬಣ್ಣ ಹಚ್ಚಬಹುದು.

ಇಂಥ ವಿನೂತನ ತಂತ್ರಜ್ಞಾನದಲ್ಲಿ 500 ಚದರ ಅಡಿಯ ಮನೆಯನ್ನು ಒಂದೇ ತಿಂಗಳಲ್ಲಿ ಕಟ್ಟಿ ಮುಗಿಸಬಹುದು. ಎಲೆಕ್ಟ್ರಾನಿಕ್ ಸಿಟಿ ಹೊರವಲಯದಲ್ಲಿ ಕಡಿಮೆ ವೆಚ್ಚದ ಸಾಮೂಹಿಕ ವಸತಿ ನಿರ್ಮಾಣ ಯೋಜನೆ ಕೈಗೊಂಡಿರುವ ‘ವ್ಯಾಲ್ಯೂ ಅಂಡ್ ಬಜೆಟ್ ಹೌಸಿಂಗ್ ಕಾರ್ಪೋರೇಷನ್’ (ವಿಬಿಎಚ್‌ಸಿ) ಈ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಳ್ಳುತ್ತಿದೆ.

ಇದಕ್ಕಾಗಿ ಕಾರ್ಮಿಕರಿಗೆ ಸೂಕ್ತ ತರಬೇತಿ ನೀಡಲಾಗಿದೆ ಎಂದು ವಿಬಿಎಚ್‌ಸಿ ವ್ಯವಸ್ಥಾಪಕ ನಿರ್ದೇಶಕ ಪಿ.ಎಸ್. ಜಯಕುಮಾರ ಹೇಳುತ್ತಾರೆ.
ಹಳೆ ಪದ್ಧತಿಯಡಿ ಮನೆ ನಿರ್ಮಿಸುವಾಗ ಗೋಡೆ ಕಟ್ಟಿ ಪ್ಲಾಸ್ಟರ್ ಮಾಡಲಾಗುತ್ತದೆ. ಇದರಿಂದ ಸಾಕಷ್ಟು ಸಮಯ ಹಿಡಿಯುತ್ತದೆ. ಆದರೆ, ಇಲ್ಲಿ ಗೋಡೆ ಕಟ್ಟುವ ಅಥವಾ ಪ್ಲಾಸ್ಟರ್ ಮಾಡಲಾಗುವುದಿಲ್ಲ. ಹೀಗಾಗಿ ಶೀಘ್ರ ಮನೆಗಳನ್ನು ಕಟ್ಟಲು ಸಾಧ್ಯವಾಗುತ್ತದೆ ಎಂದು ಅವರು ವಿವರಿಸುತ್ತಾರೆ.

ಸುಂದರ ಮನೆ, ಪಕ್ಕದಲ್ಲೇ ಶಾಲೆ, ಆಟದ ಮೈದಾನ, ಆರೋಗ್ಯ ಕೇಂದ್ರ, ಶಾಪಿಂಗ್ ಕಾಂಪ್ಲೆಕ್ಸ್, ಹಚ್ಚ ಹಸಿರಿನ ಉದ್ಯಾನ, ಬ್ಯಾಂಕ್ ಎಟಿಎಂ ಹೀಗೆ ಎಲ್ಲವನ್ನೂ ಒಳಗೊಂಡ ಈ ಯೋಜನೆಗೆ ‘ವೈಭವ’ ಎಂದು ಹೆಸರಿಡಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT