ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ-ಮನ ಬೆಳಗಿದ ಗ್ರಾಮೀಣ ದಸರಾ

Last Updated 22 ಸೆಪ್ಟೆಂಬರ್ 2011, 6:10 IST
ಅಕ್ಷರ ಗಾತ್ರ

ಪಿರಿಯಾಪಟ್ಟಣ: ಸರ್ಕಾರವು ಗ್ರಾಮೀಣ ದಸರಾವನ್ನು ಆಚರಣೆ  ಮಾಡುವ ಮೂಲಕ ಗ್ರಾಮೀಣ ಜನತೆಗೆ ಮನರಂಜನೆ ನೀಡಲು ಮುಂದಾಗಿರುವುದು ಸಂತೋಷದ ಸಂಗತಿ ಎಂದು ಮೈಸೂರು ಗ್ರಾಮೀಣ ದಸರಾ ಉಪಸಮಿತಿಯ ಸದಸ್ಯ ವರುಣಾ ಮಹೇಶ್ ತಿಳಿಸಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲಾ ಆವರಣದಲ್ಲಿ ಬುಧ ವಾರ ಆಯೋಜಿಸಲಾಗಿದ್ದ ಗ್ರಾಮೀಣ ದಸರಾ ಕಾರ್ಯಕ್ರಮವನ್ನು ಉದ್ಘಾ ಟಿಸಿ ಮಾತನಾಡಿದರು. ನಾಡಹಬ್ಬ ದಸರಾ ಕೇವಲ ಮೈಸೂರಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಸರ್ಕಾರವು ಮೈಸೂರು ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ಗ್ರಾಮೀಣ ದಸರಾ ಆಚರಿಸಲು ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ ಎಂದು ತಿಳಿಸಿದರು.

ಜಿಲ್ಲಾ ಪಂಚಾಯತಿ ಸದಸ್ಯೆ ಮಂಜುಳರಾಜ್ ಮಾತನಾಡಿ, ನಾಡ ಹಬ್ಬ ದಸರಾಕ್ಕೆ 400 ವರ್ಷಗಳ ಇತಿಹಾಸವಿದ್ದು ಭಾರತೀಯ ಸಂಸ್ಕೃತಿ, ಕಲೆಯನ್ನು ಈ ಹಬ್ಬದಲ್ಲಿ ಗುರುತಿಸ ಬಹುದು. ಮುಂದಿನ ಪೀಳಿಗೆಯವರಿಗೆ ಹಿಂದಿನ ಸಂಸ್ಕೃತಿ ಪರಂಪರೆಯನ್ನು ತಿಳಿಸಲು ಪ್ರೇರಕವಾಗಿದೆ ಎಂದರು.

ಪಟ್ಟಣದ ಎಪಿಎಂಸಿ ಆವರಣದಿಂದ ಹೊರಟ ಮೆರವಣಿಗೆಗೆ ಜಿಲ್ಲಾ ಪಂಚಾ ಯಿತಿ ಅಧ್ಯಕ್ಷೆ ಸುನೀತಾ ವೀರಪ್ಪಗೌಡ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ನಂದಿಧ್ವಜ ಕುಣಿತ, ಡೊಳ್ಳು ಕುಣಿತ, ವೀರಗಾಸೆ, ಕೋಲಾಟ ಕುಣಿತ ಮುಂತಾದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಜಿ.ಪಂ.ಎಂಜಿನಿಯರಿಂಗ್ ಉಪ ವಿಭಾಗ, ಆರೋಗ್ಯ ಇಲಾಖೆ, ಅರಣ್ಯ ಇಲಾಖೆ, ತಾಲ್ಲೂಕು ಪಶು ಸಂಗೋಪನಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಗಳು ಸ್ತಬ್ಧ ಚಿತ್ರ ಪ್ರದರ್ಶನ ಏರ್ಪಡಿಸಿದ್ದರು. ಗ್ರಾಮೀಣ ದಸರಾ ಕಾರ್ಯಕ್ರಮದ ಅಂಗವಾಗಿ ನಡೆಸ ಲಾದ ಸ್ಪರ್ಧೆಗಳಲ್ಲಿ ಗ್ರಾಮೀಣ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 1500 ರೂ, ದ್ವಿತೀಯ ಬಹುಮಾನ 1000ರೂ ಹಾಗೂ ತೃತೀಯ ಬಹುಮಾನ 500ರೂಗಳನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯ ಎಂ.ಪಿ.ಚಂದ್ರೇಶ್, ತಹಶೀಲ್ದಾರ್ ವಿ.ಆರ್.ಶೈಲಜಾ, ಕ್ಷೇತ್ರ ಶಿಕ್ಷಣಾಧಿ ಕಾರಿ ಸಿ.ಎಸ್.ರಾಮಲಿಂಗು, ತಾ.ಪಂ. ಅಧ್ಯಕ್ಷ ಜವರಪ್ಪ, ಉಪಾಧ್ಯಕ್ಷೆ ಎಚ್.ಕೆ.ಶೈಲಜಾ, ಪ.ಪಂ.ಅಧ್ಯಕ್ಷೆ ಮಂಜುಳ ನಾಗೇಶ್, ಉಪಾಧ್ಯಕ್ಷ ತಿಮ್ಮನಾಯಕ, ಸದಸ್ಯ ವೇಣುಗೋಪಾಲ್, ಎಪಿಎಂಸಿ ಅಧ್ಯಕ್ಷ ಎಸ್.ಟಿ. ರಾಜಶೇಖರ್, ಸಬ್‌ಇನ್ಸ್‌ಪೆಕ್ಟರ್ ಜಿ.ಜೆ.ಸತೀಶ್, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ನಾಗಸುಂದರ್, ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಕೆ.ಎಸ್.ಮಹಾ ದೇವಪ್ಪ, ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಪ್ರಕಾಶ್, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಟರಾಜನಾಯಕ ಮತ್ತಿತ ರರು ಹಾಜರಿದ್ದರು.

ಅಧಿಕಾರಿ-ಜನಪ್ರತಿನಿಧಿಗಳ ಹಗ್ಗ ಜಗ್ಗಾಟ!
ಎಚ್.ಡಿ.ಕೋಟೆ: ಪಟ್ಟಣದ ಸ್ಟೇಡಿಯಂನಲ್ಲಿ ಬುಧವಾರ ಗ್ರಾಮೀಣ ದಸರಾ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಹಗ್ಗ ಜಗ್ಗಾಟ ಕ್ರೀಡೆಯಲ್ಲಿ ಅಧಿಕಾರಿಗಳ ತಂಡ ಹಾಗೂ ಜನ ಪ್ರತಿನಿಧಿಗಳ ತಂಡ ಭಾಗವಹಿಸಿ ಅಚ್ಚರಿ ಮೂಡಿಸಿತು.

ಅಧಿಕಾರಿಗಳ ತಂಡದಲ್ಲಿ ತಹಶೀ ಲ್ದಾರ್ ಎನ್.ಸಿ. ಜಗದೀಶ್ ನೇತೃತ್ವ ವಹಿಸಿದ್ದರು. ಜನಪ್ರತಿನಿದಿಗಳ ತಂಡಕ್ಕೆ ಶಾಸಕ ಚಿಕ್ಕಣ್ಣ ನೇತೃತ್ವ ವಹಿಸಿದ್ದರು.

ಹಗ್ಗ ಜಗ್ಗಾಟ ಪ್ರಾರಂಭದಲ್ಲಿ ಜನಪ್ರತಿನಿಧಿಗಳು ಎಡವಿದರೂ ನಂತರ ಎಚ್ಚೆತ್ತುಕೊಂಡು ಅಧಿಕಾರಿಗಳ ತಂಡವನ್ನು ಸೋಲಿಸುವಲ್ಲಿ ಶಾಸಕ ಚಿಕ್ಕಣ್ಣ ತಂಡ ಯಶಸ್ವಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT