ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಮುಂದೆ ಮಕ್ಕಳ ಸಿನಿಮಾ

Last Updated 21 ಜನವರಿ 2011, 19:35 IST
ಅಕ್ಷರ ಗಾತ್ರ

ಚಿಲ್ಡ್ರನ್ಸ್ ಇಂಡಿಯಾ ‘ಮನೆ ಮುಂದೆ ಮಕ್ಕಳ ಸಿನಿಮಾ’ ಎಂಬ ನೂತನ ಪ್ರಯೋಗಕ್ಕೆ ಕೈಹಾಕಿದೆ. ಇದರಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗದಂತೆ ವರ್ಷ ಪೂರ್ತಿ ಪ್ರತಿ ಶನಿವಾರ ಮತ್ತು ಭಾನುವಾರ ನಗರದ 52 ಬಡಾವಣೆಗಳಲ್ಲಿ ಒಟ್ಟೂ 104 ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.

ಜಗತ್ತಿನ ಅತ್ಯುತ್ತಮ ಮಕ್ಕಳ ಚಲನಚಿತ್ರಗಳನ್ನು ಪ್ರದರ್ಶಿಸುವ ಉದ್ದೇಶದಿಂದ ಈ ಚಲನಚಿತ್ರೋತ್ಸವ ಆಯೋಜಿಸಲಾಗಿದೆ. ಛಿದ್ರವಾಗುತ್ತಿರುವ ಕೌಟುಂಬಿಕ ಬದುಕು, ಹೆಚ್ಚಾಗುತ್ತಿರುವ ಪರಿಸರ ನಾಶ, ಕುಸಿಯುತ್ತಿರುವ ನೈತಿಕ ಮೌಲ್ಯಗಳು ಹೀಗೆ ಸಾಮಾಜಿಕ ಪರಿಣಾಮ ಬೀರುವ ಚಿತ್ರಗಳನ್ನು ಪ್ರಮುಖವಾಗಿ ಪ್ರದರ್ಶಿಸಲಾಗುತ್ತದೆ ಎನ್ನುತ್ತಾರೆ ಚಿಲ್ಡ್ರನ್ಸ್ ಇಂಡಿಯಾ ಅಧ್ಯಕ್ಷ, ಚಿತ್ರ ನಿರ್ದೇಶಕ ಎನ್.ಆರ್. ನಂಜುಂಡೇಗೌಡ.

ಶನಿವಾರ ‘ಮಕ್ಕಳ ಸಿನಿಮಾ’ ಉದ್ಘಾಟನೆ. ನಂತರ ರಾಷ್ಟ್ರ ಪ್ರಶಸ್ತಿ ವಿಜೇತ ಕನ್ನಡ ಸಿನಿಮಾ ‘ಪುಟಾಣಿ ಪಾರ್ಟಿ’ ಪ್ರದರ್ಶನ.

ಅತಿಥಿಗಳು: ಅನಂತಕುಮಾರ್, ಆರ್. ಅಶೋಕ್, ಎಸ್.ಕೆ. ನಟರಾಜ್, ಶೋಭಾ ಕರಂದ್ಲಾಜೆ, ಅಂಬರೀಶ್, ಮುಖ್ಯಮಂತ್ರಿ ಚಂದ್ರು, ಎ.ಎಸ್. ಸದಾಶಿವಯ್ಯ, ತಾರಾ ವೇಣು, ಸುಶೋವನ್ ನ್ಯಾನರ್ಜಿ, ಬಸಂತಕುಮಾರ್ ಪಾಟೀಲ್, ರಮೇಶ ಬಿ. ಝಳಕಿ, ಜಿ. ಕುಮಾರ ನಾಯಕ್.

 ಸ್ಥಳ: ಜೆ ಸಿ ರಸ್ತೆ ರವೀಂದ್ರ ಕಲಾಕ್ಷೇತ್ರ. ಬೆಳಿಗ್ಗೆ 11.                                    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT