ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಗೆ ಹೂಡಿಕೆ ಮಾಡುವ ಮುನ್ನ

Last Updated 4 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಮನೆ ಎನ್ನುವುದು ಹಲವರ ಪಾಲಿಗೆ ಭಾವನಾತ್ಮಕ ನಂಟು. ಆದರೆ ಈಗ ಸ್ವಂತ ಮನೆ ಮಾಡಿಕೊಂಡು ಹೂಡಿಕೆ ದೃಷ್ಟಿಯಿಂದ ಎರಡನೇ ಮನೆ ಕೊಳ್ಳುವವರ ಸಂಖ್ಯೆಯೂ ಕಡಿಮೆಯಿಲ್ಲ.

ಈ ಸಮಯದಲ್ಲಿ ಯಾವುದರ ಕಡೆಗೆ ಗಮನ ಕೊಟ್ಟರೆ ಒಳ್ಳೆಯದು ಎಂಬ ಕಿರು ಮಾಹಿತಿ ಇಲ್ಲಿದೆ. ಮನೆ ಕೊಳ್ಳಲು ಬ್ಯಾಂಕ್, ನಿಮ್ಮ ಆಸ್ತಿಯನ್ನು ಆಧರಿಸಿ ಶೇಕಡಾ 80ರವರೆಗೂ ಸಾಲವನ್ನು ಕೊಡುತ್ತದೆ.

ಇನ್ನುಳಿದ ಶೇಕಡಾ 20 ಅನ್ನು ನೀವೇ ಹೇಗಾದರೂ ಹೊಂದಿಸಿಕೊಳ್ಳಲೇಬೇಕು. ಆದ್ದರಿಂದ ನಿಮ್ಮ ಬಜೆಟ್‌ಗೆ ತಕ್ಕ ಮನೆಯನ್ನು ಆರಿಸಿಕೊಂಡರೆ ಉತ್ತಮ. ಇದಕ್ಕೆ ಮುನ್ನ ನಿಮ್ಮ ಬಳಿ ಸಾಕಷ್ಟು ಹಣ (ಮಾರ್ಜಿನ್ ಹಣ) ಇದೆಯೇ ಖಾತರಿಪಡಿಸಿಕೊಳ್ಳಿ.

ಮನೆ ಕೊಳ್ಳುವುದೆಂದರೆ ಕೇವಲ ಕಟ್ಟಡ ಖರೀದಿ ಮಾತ್ರವಲ್ಲ. ಸ್ಟ್ಯಾಂಪ್ ಡ್ಯೂಟಿ, ನೋಂದಣಿ ಮತ್ತು ಇತರ ಖರ್ಚೂ ಸೇರಿಕೊಳ್ಳುತ್ತದೆ. ಮನೆ ಕೊಳ್ಳುವುದು ಜೀವನಕ್ಕೆ ಸುಭದ್ರ ಭಾವನೆ ನೀಡುತ್ತದೆ ಮಾತ್ರವಲ್ಲ, ತೆರಿಗೆ ವಿನಾಯಿತಿ ಪಡೆಯಲೂ ಅನುಕೂಲ. ಎರಡನೇ ಮನೆ ದೀರ್ಘ ಕಾಲ ನಿಮ್ಮ ಹಣವನ್ನು ಒಟ್ಟುಗೂಡಿಸುತ್ತದೆ, ಜೊತೆಗೆ ದೊಡ್ಡ ಮೊತ್ತದ ಹಣವನ್ನು ಬಾಡಿಗೆ ರೂಪದಲ್ಲೂ ಪಡೆಯುವ ಅವಕಾಶವನ್ನೂ ನೀಡುತ್ತದೆ.

ಈಗ ಆಸ್ತಿ ಬೆಲೆ ಏರಿದ್ದರೂ, ಯೋಜಿತ ರೀತಿಯಲ್ಲಿ ಕೆಲಸ ಮಾಡಿದರೆ ಮನೆ ಖರೀದಿ ಅಸಾಧ್ಯವಲ್ಲ. ಮೊದಲು ನಿಮ್ಮ ಬಜೆಟ್ ನಿರ್ಧರಿಸಿಕೊಳ್ಳಿ. ನಿಮ್ಮ ಸಂಗಾತಿಯ ಆದಾಯವನ್ನೂ ಸೇರಿಸಿ ಯೋಚಿಸಲು ಮರೆಯದಿರಿ.

ಸಾಲ ಮಂಜೂರು ಮಾಡುವ ಮುನ್ನ ಬ್ಯಾಂಕ್‌ ತನ್ನ ಗ್ರಾಹಕರ ಆಸ್ತಿ, ಮಾಲೀಕತ್ವ, ಸೇರಿದಂತೆ ಹಲವು ದಾಖಲೆಗಳನ್ನು ಪರೀಕ್ಷಿಸುತ್ತದೆ. ಬ್ಯಾಂಕ್‌ಗಳು ಸಿಐಬಿಐಎಲ್ ಕ್ರೆಡಿಟ್ ಸ್ಕೋರ್‌ ಅನ್ನೂ ಕೇಳುತ್ತದೆ. ಜಂಟಿಯಾಗಿ ಅರ್ಜಿ ಸಲ್ಲಿಸಿದರೆ ಸಾಲ ಸುಲಭವಾಗಿ ದೊರೆಯುತ್ತದೆ.

ಸಾಲ ಸಿಗುತ್ತದೆ ಎಂಬ ಏಕೈಕ ಕಾರಣಕ್ಕೆ ಅತಿ ದುಬಾರಿ ಹೂಡಿಕೆಗೆ ಕೈ ಹಾಕದಿರಿ. ನಿಮ್ಮ ಮಾಸಿಕ ಸಂಬಳದಲ್ಲಿ ಶೇ 40ಕ್ಕಿಂತ ಹೆಚ್ಚು ಮೊತ್ತ ಸಾಲಕ್ಕೆ ಜಮೆಯಾಗದಂತೆ ಗಮನ ನೀಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT