ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯ ಒಳಾಂಗಣ ಸೌಂದರ್ಯಕ್ಕೆ ಪುಷ್ಪ

Last Updated 19 ಜೂನ್ 2012, 19:30 IST
ಅಕ್ಷರ ಗಾತ್ರ

ಕಣ್ಣು ಹಾಯಿಸಿದತ್ತ ಹೂಗಳ ಗೊಂಚಲು  ಕಾಣುವಂತಹ ಮನೆಯ ಕಲ್ಪನೆ ಮಾಡಿದರೇನೇ ಕಣ್ಣು ತಂಪಾಗುವುದು.  ಹೂವುಗಳು ವಾತಾವರಣದಲ್ಲಿ ಜೀವ ತುಂಬಿ ಬಾಳನ್ನು ರಂಗುಗೊಳಿಸುತ್ತವೆ. ಆದ್ದರಿಂದಲೇ ಗೃಹಾಲಂಕಾರದಲ್ಲಿ ಇವುಗಳ ಪಾತ್ರ ಹಿರಿದು.

ಹೂವಿನ ಅಲಂಕಾರ ಯಾವ ಮಟ್ಟಿಗೆ ಪ್ರಚಲಿತದಲ್ಲಿದೆ ಎಂದರೆ ಯಾವುದೇ ಚಿಕ್ಕದೊಂದು ಕಾರ್ಯಕ್ರಮವೂ ಹೂಗಳ ಅಲಂಕಾರವಿಲ್ಲದೆ ಆರಂಭವಾಗದು. ಮನೆಯ ಒಳಾಂಗಣದ ಲೀವಿಂಗ್ ಹಾಲ್, ಬೆಡ್ ರೂಮ್, ಅಡಿಗೆ ಮನೆ ಬಾತ್ ರೂಮ್‌ನಲ್ಲಿ ಕೂಡ ಹೂಗಳ ಜೋಡಣೆಯಿಂದ ಮನೆಯ ಅಂದ-ಚೆಂದ ಹೆಚ್ಚಿದೆ. ಮನದ ಮಾತುಗಳನ್ನು ಹೇಳುವ ಅಥವಾ ನಿಮ್ಮ ಭಾವನೆಗಳನ್ನು ಮೌನವಾಗಿದ್ದೆೀ ವ್ಯಕ್ತಪಡಿಸಲು ಹೂಗಳು ಉತ್ತಮ `ಸಂವಹನ~ ಪಾತ್ರ ನಿರ್ವಹಿಸುತ್ತವೆ.

ಹೂಗಳನ್ನು ಎಲೆಗಳೊಂದಿಗೆ ಜೋಡಿಸುವುದೊಂದು ಕಲೆ. ಇವುಗಳಲ್ಲಿ ಕೂಡ ಸಾಕಷ್ಟು ವಿಧಾನಗಳಿವೆ. ಸ್ಥಳ ಮತ್ತು ಕಾಲಕ್ಕೆ ಅನುಸಾರವಾಗಿ ಪುಷ್ಪಾಲಂಕಾರಮಾಡಬೇಕಾಗುತ್ತದೆ. ಸೆಂಟರ್ ಟೇಬಲ್ ಮೇಲೆ ಇರಿಸುವ ಹೂದಾನಿಯಲ್ಲಿ 4 ಕಡೆಗಳಿಂದಲೂ ಒಂದೇ ತೆರನಾಗಿ ಕಾಣುವಂತೆ ಹೂ ಜೋಡಣೆ ಮಾಡಬೇಕು.

ಹೂ ಜೋಡಣೆಯಲ್ಲಿ  ಗಮನಿಸಬೇಕಾದ ಅಂಶವೆಂದರೆ ಬೆಳಕು ಮತ್ತು ಬಣ್ಣಗಳ ಸಂಯೋಜನೆ. ಹೂಗಳನ್ನು ಆರಿಸಿಕೊಳ್ಳುವ ಮೊದಲು ಕೋಣೆಯ ಬಣ್ಣವನ್ನು ನೋಡಿರಿ. ಮೂಲೆಯಲ್ಲಿ ಜೋಡಿಸಬೇಕಾದರೆ ಗೋಡೆಯ ಕಡೆ ಬರೀ ಎಲೆ ಇಟ್ಟು, ಉಳಿದ ಕಡೆಗೆ ಹೂಗಳು ಬರುವಂತೆ ಇರಿಸಬೇಕು.  ಪುಷ್ಪಗುಚ್ಛ ಜೋಡಣೆಗೆ ಹೂಗಳನ್ನು ಕೊಳ್ಳುವಾಗ ಅವು ತಾಜಾ ಆಗಿರಬೇಕೆಂದು ಗಮನಿಸಿ.

ಪುಷ್ಪ ಜೋಡಣೆಯು ಮನೆಯಲ್ಲಿ   ಚೈತನ್ಯ ತುಂಬುವುದರೊಂದಿಗೆ ಒಳಾಂಗಣಕ್ಕೆ ತಂಪನ್ನೂ ನೀಡುತ್ತದೆ.  ಪುಷ್ಪಾಲಂಕಾರ ನೋಡಿದ ಅತಿಥಿಗಳು ಅನುಭವಿಸುವ ಆನಂದ, ವ್ಯಕ್ತಪಡಿಸುವ ಪ್ರಶಂಸೆ ಸದಾ ನಿಮ್ಮ ನೆನಪಿನಲ್ಲಿ ಉಳಿಯುತ್ತದೆ.
ಚಂದದ ಪಾವ್ಲರ್ ವಾಸ್‌ಗಳಲ್ಲಿ ಸುಂದರ ಹೂ ಜೋಡಣೆ ಸುಗಂಧಮಯ ವಾತಾವರಣವನ್ನು ಸೃಷ್ಟಿಸುತ್ತದೆ.
 
ಮನೆಯ ಮೂಲೆ ಮೂಲೆಯಲ್ಲಿ ಹೂ ಜೋಡಣೆ ಮನದಲ್ಲಿ ಹರುಷ ಮೂಡಿಸಿ ಮನೆಯು ವಿಶಿಷ್ಟತೆಯಿಂದ ಕೂಡಿ, ನೋಡುಗರ ದೃಷ್ಟಿ ಪದೇ ಅದನ್ನೇ ನೋಡುವಂತೆ ಮಾಡಿ ಒಳಾಂಗಣವೆಲ್ಲ ಸುಗಂಧದಿಂದ  ಕೂಡಿರುತ್ತದೆ. 

ಯಾವ ವಿಶೇಷವೂ ಇಲ್ಲದ ಒಂದು ಸಾದಾ ಕೋಣೆಗೆ ಹೂಗಳಿಂದ ಅಲಂಕಾರ ಮಾಡಿದ ಹೂದಾನಿಗಳು ನೈಸರ್ಗಿಕ ಸ್ಪರ್ಶ ನೀಡಿ ಅದನ್ನು ಸುಂದರಗೊಳಿಸಬಹುದು. ಜತೆಗೆ ಆರೋಗ್ಯದ ದೃಷ್ಟಿಯಿಂದಲೂ ಅವು ಪ್ರಯೋಜನಕಾರಿ. ಮನೆಯಲ್ಲಿ ಹೂಗಳ ಜೋಡಣೆಯಿಂದ ನಿಮ್ಮ ಜೀವನದಲ್ಲಿ ಸಕಾರಾತ್ಮಕ ದೃಷ್ಟಿಕೋನ ವಿಕಾಸಗೊಳ್ಳುತ್ತದೆ. ಈ ಹೂಗಳು ನಿಮ್ಮ ಮನೆಗೆ ಸುಮಧುರ ಕಂಪು ನೀಡುತ್ತವೆ. ಮನದಲ್ಲಿ ಹರುಷ ಮೂಡಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT