ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಲ್ಲೇ ಸ್ಕ್ರಬ್

Last Updated 12 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಮನೆಯಲ್ಲಿಯೇ ದೊರಕುವ ಸಾಮಾನ್ಯ ವಸ್ತುಗಳಿಂದ ವಿವಿಧ ಸ್ಕ್ರಬ್ ತಯಾರಿಸಿ ಮತ್ತು ಆತ್ಮವಿಶ್ವಾಸದಿಂದ ಓಡಾಡಿ. ಇಲ್ಲಿವೆ ಕೆಲವು ಟಿಪ್ಸ್:

ಬಾದಾಮಿ ಮತ್ತು ಯೊಗರ್ಟ್ ಸ್ಕ್ರಬ್
ಮೂರು ಚಮಚ ಚೆನ್ನಾಗಿ ನೆನೆಸಿರುವ ಬಾದಾಮಿಯನ್ನು ಮಿಕ್ಸಿಯಲ್ಲಿ ರುಬ್ಬಿ ನಂತರ ಇದಕ್ಕೆ ಅರ್ಧ ಕಪ್ ಯೊಗರ್ಟ್‌ನ್ನು ಬೆರೆಸಿ ಮುಖಕ್ಕೆ ಹಚ್ಚಿ ಒಂದು ಹತ್ತು ನಿಮಿಷ ಮಸಾಜ್ ಮಾಡಿ ನಂತರ ತಣ್ಣಿರಿನಿಂದ ಮುಖ ತೊಳೆಯಿರಿ.

ಬಾದಾಮಿ ಮತ್ತು ಜೇನಿನ ಸ್ಕ್ರಬ್
ನೆನೆಸಿರುವ ಬಾದಾಮಿಯನ್ನು ಚೆನ್ನಾಗಿ ಮಿಕ್ಸಿಯಲ್ಲಿ ಗ್ರೈಂಡ್ ಮಾಡಿ ನಂತರ ಇದಕ್ಕೆ ಜೇನಿನ ತುಪ್ಪ ಸೇರಿಸಿ ಮುಖಕ್ಕೆ ಹಚ್ಚಿ ಮಸಾಜ್ ಮಾಡಿ ನಂತರ ತಣ್ಣಿರಿನಿಂದ ತೊಳೆಯಿರಿ.

ಯೊಗರ್ಟ್, ಬಾದಾಮಿ ಸ್ಕ್ರಬ್
ನೆನೆಸಿರುವ ಬಾದಾಮಿಯನ್ನು ಚೆನ್ನಾಗಿ ಮಿಕ್ಸಿಯಲ್ಲಿ ಗ್ರೈಂಡ್ ಮಾಡಿ ನಂತರ ಇದಕ್ಕೆ ಯೊಗರ್ಟ್‌ನ್ನು ಹಚ್ಚಿ 30 ನಿಮಿಷದ ನಂತರ ತೊಳೆಯಿರಿ. ವಾರದಲ್ಲಿ ಎರಡು ಬಾರಿ ಮಾಡುವುದರಿಂದ ಮುಖವು ಕೋಮಲವಾಗುತ್ತದೆ.

ಬ್ರೌನ್ ಶುಗರ್ ಸ್ಕ್ರಬ್
ಅರ್ಧ ಕಪ್ ಬ್ರೌನ್ ಶುಗರನ್ನು, ಅರ್ಧ ಕಪ್ ಅಲಮಂಡ್ ಎಣ್ಣೆ, ಎರಡು ಚಮಚ ಸ್ಪೂನ್ ವೇನಿಲಾ ಎಕ್ಸಟ್ರಾಕ್ಟ್, ಒಂದು ಚಮಚ ಒಟ್‌ಮಿಲ್ ಎಲ್ಲವನ್ನು ಸಮಪ್ರಮಾಣದಲ್ಲಿ ಬೆರೆಸಿ ಹಚ್ಚಿ ಸ್ಕ್ರಬ್ ಮಾಡಿ ನಂತರ ತೊಳೆಯಿರಿ.

 ಪುದೀನ ಓಟ್‌ಮಿಲ್ ಸ್ಕ್ರಬ್
ಅರ್ಧ ಕಪ್ ಓಟ್‌ಮಿಲ್, ಅರ್ಧ ಕಪ್ ಪುದೀನ ಸೊಪ್ಪನ್ನು ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಕ್ಸಿಯಲ್ಲಿ ರುಬ್ಬಿ. ನಂತರ ಈ ಪೇಸ್ಟ್‌ನ್ನು ಮುಖಕ್ಕೆ ಹಚ್ಚುವುದರಿಂದ ಮುಖ ಆಕರ್ಷಕವಾಗಿರುತ್ತದೆ.

ಲೋಷನ್ಸ್ ಮತ್ತು ಕ್ರೀಮ್
ಚಾಮೋಮೈಲ್ ಮತ್ತು ಜೇನಿನ ತುಪ್ಪದ ಲೋಷನ್
ಮೊದಲನೇಯ ಹಂತ; ಒಂದು ಕಪ್ ಚಾಮೋಮೈಲ್ ಅನ್ನು ಒಂದು ಕಪ್ ಹಾಲಿಗೆ ಹಾಕಿ ಸ್ವಲ್ಪ ಸಮಯ ಕೈಯಾಡಿಸಿ. ನಂತರ ಇದಕ್ಕೆ 4 ಚಮಚ ಜೇನಿನ ತುಪ್ಪ, 8ಚಮಚ ಗೋಧಿ ಹಿಟ್ಟನ್ನು ಹಾಕಿ ಚೆನ್ನಾಗಿ ಬ್ಲೆಂಡ್ ಮಾಡಿ ಇದನ್ನು ಬಾಟಲ್‌ನಲ್ಲಿ ಹಾಕಿ ಬೇಕಾದ ಸಂದರ್ಭದಲ್ಲಿ ಉಪಯೋಗಿಸಿ.

ಆ್ಯಂಟಿ ಏಜಿಂಗ್ ಕ್ರೀಮ್
ಅರ್ಧ ಕಪ್ ಗ್ಲಿಸರಿನ್, ಅರ್ಧ ಕಪ್ ಹೆಜೆಲ್, 6 ಚಮಚ ರೋಸ್ ವಾಟರ್, 3ಚಮಚ ಜೇನಿನ ತುಪ್ಪ, ವೀಟ್ ಜೆರಮ್ ಎಣ್ಣೆಯನ್ನು ಬೆರೆಸಿ ಟೈಟ್ ಸೀಲ್‌ಕಂಟೈನರ್‌ನಲ್ಲಿ ಹಾಕಿಟ್ಟು ಬೇಕಾದ ಸಂದರ್ಭದಲ್ಲಿ ಉಪಯೋಗಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT