ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಮತಾ ಸಹಕಾರ: ಮೋದಿ ವಿಶ್ವಾಸ

Last Updated 18 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಕೋಲ್ಕತ್ತ (ಪಿಟಿಐ):  ಅಧಿಕಾರಕ್ಕೆ ಬಂದರೆ ಸಿಂಗೂರು ವಿವಾದ ಬಗೆಹರಿಸುವುದೂ ಸೇರಿದಂತೆ ಪಶ್ಚಿಮ ಬಂಗಾಳದಲ್ಲಿ ಉದ್ದಿಮೆಗೆ ಪೂರಕ ವಾತಾವರಣ ಸೃಷ್ಟಿ­ಸಲು ಮಮತಾ ಬ್ಯಾನರ್ಜಿ ಸರ್ಕಾರ ತಮಗೆ ಸಹಕಾರ ನೀಡುವ ವಿಶ್ವಾಸವನ್ನು ನರೇಂದ್ರ ಮೋದಿ ಶುಕ್ರವಾರ ವ್ಯಕ್ತಪಡಿಸಿದ್ದಾರೆ.

‘ಆನಂದಬಜಾರ್‌’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮೋದಿ ಅವರು ಈ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘ರಾಜ್ಯದ ಅಭಿವೃದ್ಧಿ ವಿಚಾರಕ್ಕೆ ಬಂದಾಗ ತೃಣಮೂಲ ಕಾಂಗ್ರೆಸ್‌ ಮತಬ್ಯಾಂಕ್‌ ರಾಜಕೀಯ ಮಾಡದು ಎಂಬ ವಿಶ್ವಾಸ ನನಗಿದೆ’ ಎಂದೂ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ನ್ಯಾನೊ ಕಾರು ಯೋಜನೆ ಕುರಿತಾಗಿ ಮಾತನಾಡಿದ ಮೋದಿ, ‘ಟಾಟಾದವರು ತೊಂದರೆಯಲ್ಲಿದ್ದಾಗ ನಾನು ಅವರಿಗೆ ಭೂಮಿ ನೀಡಿದೆ. ಆದರೆ, ಈ ವಿಚಾರದಲ್ಲಿ ನನಗೆ ಅಪರಾಧಿ ಭಾವವಿತ್ತು. ಪಶ್ಚಿಮ ಬಂಗಾಳದಿಂದ ಆ ಯೋಜನೆ­ಯನ್ನು ಕಸಿದುಕೊಳ್ಳುವ ಉದ್ದೇಶ ನನಗಿರಲಿಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT