ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಮತಾಗೆ ಎಐಸಿಸಿ ನಿಷ್ಠುರ ಸಂದೇಶ

Last Updated 17 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮ್ಮ ಸಂಪುಟದಲ್ಲಿ ಕಾಂಗ್ರೆಸ್ ಸಚಿವರೊಬ್ಬರಿಗೆ ನೀಡಿದ್ದ ಎರಡು ಖಾತೆಗಳಲ್ಲಿ ಒಂದನ್ನು ಕಸಿದುಕೊಂಡ ಬಗ್ಗೆ ಮಂಗಳವಾರ ಇಲ್ಲಿ ಪ್ರತಿಕ್ರಿಯಿಸಿರುವ ಎಐಸಿಸಿ, `ಸಮ್ಮಿಶ್ರ ಧರ್ಮವು ಏಕಪಕ್ಷೀಯ ನಿರ್ಧಾರಕ್ಕೆ ಅನುಮತಿ ನೀಡುವುದಿಲ್ಲ~ ಎಂಬ ನಿಷ್ಠುರ ಸಂದೇಶ ಕಳುಹಿಸಿದೆ.

ಆದರೂ `ತೃಣಮೂಲ ಕಾಂಗ್ರೆಸ್‌ನೊಂದಿಗೆ ಮಾತುಕತೆ ನಡೆಸಿದ ನಂತರ ಬಿಕ್ಕಟ್ಟು ನಿವಾರಣೆಯಾಗಬಹುದು~ ಎಂಬ ವಿಶ್ವಾಸದೊಂದಿಗೆ ತಟಸ್ಥ ಮತ್ತು ರಾಜಿ ಸಂಧಾನದ ನಿಲುವು ತಾಳುವ ಮಂತ್ರವನ್ನೂ ಎಐಸಿಸಿ ಪಠಿಸಿದೆ.
`ಪಶ್ಚಿಮಬಂಗಾಳಕ್ಕೆ ಸಂಬಂಧಿಸಿದಂತೆ ಕಠಿಣ ಅಥವಾ ತೀಕ್ಷ್ಣ ಪದಗಳ ವಿನಿಮಯದಿಂದ ಸಮಸ್ಯೆ ಬಗೆಹರಿಯದು. ಪರಸ್ಪರ ಮಾತುಕತೆಯೊಂದಿಗೆ ತಟಸ್ಥ ಮತ್ತು ತಾಳ್ಮೆಯ ಮನೋಭಾವನೆ ಅಗತ್ಯ~ ಎಂದು ಎಐಸಿಸಿ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT