ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳಿದ ಖರೀದಿ ಆಸಕ್ತಿ

Last Updated 14 ಫೆಬ್ರುವರಿ 2011, 16:20 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಸಗಟು ಬೆಲೆ ಸೂಚ್ಯಂಕ ಆಧರಿಸಿದ ವಾರ್ಷಿಕ ಹಣದುಬ್ಬರ ದರವು ಇಳಿಕೆಯಾಗಿರುವುದು, ಈಜಿಪ್ಟ್ ಬಿಕ್ಕಟ್ಟು ಬಗೆಹರಿದಿರುವುದು ಸೇರಿದಂತೆ ಹಲವಾರು ಸಕಾರಾತ್ಮಕ ಬೆಳವಣಿಗೆಗಳ ಫಲವಾಗಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಸೋಮವಾರ 473 ಅಂಶಗಳಷ್ಟು ಏರಿಕೆ ಕಂಡಿತು.

ಕಳೆದ 4 ತಿಂಗಳಲ್ಲಿ ದಿನವೊಂದರ ಗರಿಷ್ಠ ಹೆಚ್ಚಳ ಇದಾಗಿದೆ. ಪೇಟೆಯಿಂದ ಬಂಡವಾಳವು ಹೊರಗೆ ಹರಿದು ಹೋಗುತ್ತಿದ್ದರೂ ಹೂಡಿಕೆದಾರರು ಕೆಲ ಪ್ರಮುಖ ಉದ್ದಿಮೆ ಸಂಸ್ಥೆಗಳ ಷೇರುಗಳನ್ನು ಖರೀದಿಸಲು ಆಸಕ್ತಿ  ತೋರಿಸಿದರು.ಪೇಟೆಯಲ್ಲಿ ಇತ್ತೀಚಿಗೆ ನಡೆದ ವಹಿವಾಟು ಕುಸಿತದ ಬಗ್ಗೆ ತನಿಖೆ ನಡೆಸುವುದಾಗಿ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಪ್ರಕಟಿಸಿರುವುದೂ ಹೂಡಿಕೆದಾರರ ಆತ್ಮವಿಶ್ವಾಸ ವೃದ್ಧಿಸಿದೆ.

ಎಲ್ಲ 13 ವಲಯವಾರು ಸೂಚ್ಯಂಕಗಳು ಶೇ 0.97ರಿಂದ ಶೇ 5.26ರಷ್ಟು ಏರಿಕೆ ದಾಖಲಿಸಿದವು. ಭಾರಿ ಯಂತ್ರೋಪಕರಣ ಷೇರುಗಳು ಮುನ್ನಡೆಯಲ್ಲಿದ್ದವು. ಬಡ್ಡಿ ದರ ಏರಿಕೆ ಭೀತಿಯಲ್ಲಿ ನಷ್ಟಕ್ಕೆ ಗುರಿಯಾಗಿದ್ದ  ಆಟೊಮೊಬೈಲ್, ಗ್ರಾಹಕ ಬಳಕೆ ಸರಕು ತಯಾರಿಕಾ ಸಂಸ್ಥೆ, ಬ್ಯಾಂಕ್ ಮತ್ತು ರಿಯಾಲ್ಟಿ ವಲಯದ ಷೇರುಗಳು ತಕ್ಕಮಟ್ಟಿಗೆ ಲಾಭ ಬಾಚಿಕೊಂಡವು. ಲೋಹ ಮತ್ತು ವಿದ್ಯುತ್ ಷೇರುಗಳಲ್ಲೂ ಖರೀದಿ ಆಸಕ್ತಿ ಕಂಡು ಬಂದಿತು.
ಸಂವೇದಿ ಸೂಚ್ಯಂಕವು ದಿನದಂತ್ಯಕ್ಕೆ 18,202 ಅಂಶಗಳಿಗೆ ಏರಿಕೆ ಕಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT