ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳು ಅಕ್ರಮ ಸಾಗಣೆ: 3 ಲಾರಿಗಳ ವಶ

Last Updated 14 ಡಿಸೆಂಬರ್ 2012, 6:32 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಹೊರ ರಾಜ್ಯಕ್ಕೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಲಾರಿಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಗುರುವಾರ ಬೆಳಿಗ್ಗೆ ವಶಪಡಿಸಿಕೊಂಡು  ಪೊಲೀಸರ ವಶಕ್ಕೆ ನೀಡಿದ್ದಾರೆ.

ತಿ. ನರಸೀಪುರದಿಂದ ಮರಳು ತುಂಬಿದ 3 ಲಾರಿಗಳು ಚಾಮರಾಜನಗರದ ಮಾರ್ಗವಾಗಿ ಕೇರಳಕ್ಕೆ ಸಾಗಾಟ ಮಾಡುತ್ತಿದ್ದವು ಎನ್ನಲಾಗಿದೆ. ವಿಷಯ ತಿಳಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಲಾರಿಗಳನ್ನು ವಶಪಡಿಸಿಕೊಂಡು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಸಂತೇಮರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮ ಮರಳು ಸಂಗ್ರಹ: ತಹಶೀಲ್ದಾರ್ ದಾಳಿ, ವಶ

ಕೊಳ್ಳೇಗಾಲ: ಸರಗೂರು ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮರಳನ್ನು ತಹಶೀಲ್ದಾರ್ ಸುರೇಶ್ ಕುಮಾರ್ ವಶ ಪಡಿಸಿಕೊಂಡಿದ್ದಾರೆ. ಕಾನೂನು ಬಾಹಿರ ವಾಗಿ ಕಾವೇರಿ ನದಿಯಿಂದ ಮರಳನ್ನು ತೆಗೆದು ಎತ್ತಿನ ಗಾಡಿಗಳ ಮೂಲಕ ತಂದು ಅಕ್ರಮವಾಗಿ ಸಂಗ್ರಹಿಸಲಾ ಗಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ತಹಶೀಲ್ದಾರ್ ಗುರುವಾರ ದಾಳಿ ನಡೆಸಿ 6 ಟ್ರಾಕ್ಟರ್ ಮರಳನ್ನು ವಶಪಡಿಸಿ ಕೊಂಡಿದ್ದಾರೆ. ದಾಳಿಯಲ್ಲಿ ಉಪ ತಹಶೀಲ್ದಾರ್ ನಂದಕಿಶೋರ್, ರಾಜಸ್ವ ನಿರೀಕ್ಷಕ ಪರಮೇಶ್, ಗ್ರಾಮ ಲೆಕ್ಕಿಗ ಶಿವಮಲ್ಲಪ್ಪ ಇದ್ದರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT