ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಾಠಾ ಸಮಾಜ 2ಎಗೆ ಸೇರ್ಪಡೆ

Last Updated 4 ಅಕ್ಟೋಬರ್ 2011, 6:55 IST
ಅಕ್ಷರ ಗಾತ್ರ

ಶಿಗ್ಗಾವಿ: ಹಿಂದುಳಿದ ಮರಾಠಾ ಸಮಾ ಜದ ಅಭಿವೃದ್ಧಿ ಉದ್ದೇಶದಿಂದ ಈ ಸಮಾಜವನ್ನು 2ಎ ವರ್ಗಕ್ಕೆ ಸೇರ್ಪಡೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಅಲ್ಲದೆ ಮರಾಠಾ ಸಮಾಜದ ಏಳಿಗೆಗಾಗಿ ಸರ್ಕಾರದ ಸೌಲಭ್ಯಗಳನ್ನು ಮಂಜೂ ರಾತಿ ನೀಡು ವುದಾಗಿ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ತಾಲ್ಲೂಕಿನ ಹುನಗುಂದ ಗ್ರಾಮದಲ್ಲಿ ಭಾನುವಾರ ನಡೆದ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಅನಾವರಣ ಹಾಗೂ ಕಿರುನೀರು ಸರಬರಾಜು ಯೋಜನೆ ಮತ್ತು ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ  ಶಂಕು ಸ್ಥಾಪನೆ ನೆರವೇರಿಸಿ  ಮಾತನಾಡಿದರು.

ಹುನಗುಂದ ಗ್ರಾಮವನ್ನು ಗ್ರಾಮ ಪಂಚಾಯಿತಿಗೆ ಬಡ್ತಿ ನೀಡುವ ಮೂಲಕ ಇಲ್ಲಿನ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಸುಮಾರು 15 ಲಕ್ಷ ರೂ.ಗಳನ್ನು ಹಾಗೂ ಕಿರುನೀರು ಸರಬ ರಾಜು ಕಾಮಗಾರಿಗೆ ಸುಮಾ ರು 8ಲಕ್ಷ ರೂ.ಗಳನ್ನು ಮಂಜುರಾತಿ ನೀಡಿದೆ.

ಅಲ್ಲದೆ ತಾಲ್ಲೂಕಿನ ಪ್ರತಿ ಯೊಂದು ಗ್ರಾಮಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಸರ್ಕಾರ ಸುಮಾರು 17ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಿದೆ. ಅದರ ಪ್ರಯೋಜನ ಜನತೆಗೆ ಮುಟ್ಟಬೇಕು ಎಂದು ಹೇಳಿದರು.

ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ಅನ್ಯಾಯ, ಅಕ್ರಮಗಳು ತಾಂಡವಾಡುತ್ತಿರುವ ಸಂದರ್ಭದಲ್ಲಿ ಛತ್ರಪತಿ ಶಿವಾಜಿಯವರು ತಮ್ಮ ಧೈರ್ಯ ಸಾಹಸದಿಂದ ತಡೆಯುವ ಜೊತೆಗೆ ಅಂದು ಸುಭದ್ರವಾದ ನಾಡು ಕಟ್ಟುವಲ್ಲಿ ಯಶಸ್ವಿಯಾಗಿದ್ದರು. ತಾಯಿ ಜೀಜಾಬಾಯಿಯ ಆದರ್ಶದ ಸಂಸ್ಕಾರ ಗಳನ್ನು ಅಳವಡಿಸಿಕೊಂಡ ಶಿವಾಜಿ ಉತ್ತಮ ತಂತ್ರಗಾರಿಕೆಯಿಂದ ರಾಜ್ಯಾ ಡಳಿತ ನಡೆಸಿದರು.

ಹೆಬ್ಬಳ್ಳಿ ಶಿವಾನಂದಮಠದ ಬ್ರಹ್ಮಾ ನಂದ ಸ್ವಾಮಿಗಳು, ಗೌರಮ್ಮಾಜಿ ಮಠದ ಶಿವಪುತ್ರಪ್ಪ ಗುಲ್ಯಾನವರ ಸಾನ್ನಿಧ್ಯ ವಹಿಸಿದ್ದರು.

ಹುನಗುಂದ ಮರಾಠಾ ಸಮಾಜದ ಅಧ್ಯಕ್ಷ ಫಕ್ಕೀರಪ್ಪ ಹಾನಗಲ್ ಅಧ್ಯ ಕ್ಷತೆ ವಹಿಸಿದ್ದರು. ಕಾಡಾ ಅಧ್ಯಕ್ಷ ಸೋಮಣ್ಣ ಬೇವಿನಮರದ, ಜಿಲ್ಲಾ ಮರಾಠಾ ಸಮಾಜದ ಅಧ್ಯಕ್ಷ ಯಲ್ಲಪ್ಪ ಕಿತ್ತೂರ, ಚಂದ್ರಶೇಖರ ಚಾಧವ, ಜಿಪಂ ಕೃಷಿ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಪದ್ಮಾನಾಭ ಕುಂದಾಪುರ, ಎಂ.ಎನ್.ಹೊನಕೇರಿ, ಸಿ.ಪಂ.ಸದಸ್ಯ ರಾದ ಸರೋಜಾ

ಆಡೀನ, ಶಶಿಧರ ಹೊನ್ನಣ್ಣವರ, ತಾ.ಪಂ.ಸದಸ್ಯರಾದ ಸುಜಾತಾ ಕಲಕಟ್ಟಿ, ನಿಂಗಪ್ಪ ಹರಿಜನ, ಅಲ್ಲಭಕ್ಷ ಸಾಣಿ, ಪಿ.ವಿ.ಹೊಂಡದಕಟ್ಟಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಎಸ್.ಕೆ. ಅಕ್ಕಿ, ಜಿಪಂ ಮಾಜಿ ಅಧ್ಯಕ್ಷ ಮಲ್ಲೇಶಪ್ಪ ಹರಿಜನ, ಎಪಿಎಂಸಿ ಅಧ್ಯಕ್ಷ ವೀರಣ್ಣ ಶೀಲವಂತರ, ಪುರಸಭೆ ಸದಸ್ಯ ರಾಮಣ್ಣ ರಾಣೋಜಿ ಮತ್ತಿತರರು ಉಪಸ್ಥಿತರಿದ್ದರು.


ತಾಲ್ಲೂಕು ಮರಾಠಾ ಸಮಾಜದ ಅಧ್ಯಕ್ಷ ಸುಭಾಸ ಚವ್ಹಾಣ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಜ್ಯೋತಿ ಪಾಪೋಜಿ ಪ್ರಾರ್ಥಿಸಿದರು. ರಾಮಣ್ಣ ಮೂಲಿಮನಿ ಸ್ವಾಗತಿಸಿ ದರು. ಶಿವಪ್ರಕಾಶ ಬಳಿಗಾರ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT