ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರುಪರಿಶೀಲನಾ ಅರ್ಜಿ: ಕಂಪೆನಿ ಇಂಗಿತ

Last Updated 2 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): 2 ಜಿ ತರಂಗಾಂತರ ಪರವಾನಗಿ ರದ್ದುಗೊಳಿಸಿದ ತೀರ್ಪಿನಿಂದ ಆಘಾತಗೊಂಡಿರುವ ದೂರಸಂಪರ್ಕ ಕಂಪೆನಿಗಳು, ಪುನರ್ ಪರಿಶೀಲನಾ ಅರ್ಜಿ ಸಲ್ಲಿಸುವ ಇಂಗಿತ ವ್ಯಕ್ತಪಡಿಸಿವೆ.

`ಪರವಾನಗಿ ಪಡೆಯಲು ಸರ್ಕಾರ ನಿಗದಿಗೊಳಿಸಿದ್ದ ನಿಯಮವನ್ನು ನಾವು ಪಾಲಿಸಿದ್ದೇವೆ. ಇದರಲ್ಲಿ ನಮ್ಮ ತಪ್ಪೇನೂ ಇಲ್ಲದಿದ್ದರೂ ನಮಗೆ ಅನ್ಯಾಯವಾಗಿದೆ~ ಎಂದು ಕಂಪೆನಿಗಳು ಅಸಮಾಧಾನ ವ್ಯಕ್ತಪಡಿಸಿವೆ.

ತಮ್ಮ ಕಂಪೆನಿ ಕಾನೂನಿಗೆ ಬದ್ಧವಾಗಿರುವ ಸಂಸ್ಥೆಯಾಗಿದೆ. ಕಂಪೆನಿಯ ಹಿತಾಸಕ್ತಿ ರಕ್ಷಿಸಲು ಕಾನೂನಿನಲ್ಲಿ ಎಲ್ಲ ಅವಕಾಶಗಳ ಬಗ್ಗೆ ಪರಿಶೀಲಿಸಲಾಗುವುದು ಎಂದು ಸಿಸ್ಟೆಮಾ- ಶ್ಯಾಮ್‌ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

`ಸರ್ಕಾರದ ಪ್ರಕ್ರಿಯೆಯಲ್ಲಿ ಇದ್ದ ಲೋಪಗಳಿಗಾಗಿ ನಮಗೆ ದಂಡ ವಿಧಿಸಲಾಗಿದೆ~ ಎಂದು ಯೂನಿನಾರ್ ಅಸಮಾಧಾನ ವ್ಯಕ್ತಪಡಿಸಿದೆ.

ಸಿಸ್ಟೆಮಾ- ಶ್ಯಾಮ್ ಕಂಪೆನಿ ಎಂಟಿಎಸ್ ಬ್ರ್ಯಾಂಡ್ ಹೆಸರಿನಲ್ಲಿ ಮೊಬೈಲ್ ಸೇವೆ ಒದಗಿಸುತ್ತಿದ್ದರೆ, ಯೂನಿಟೆಕ್- ಟೆಲಿನಾರ್ ಜಂಟಿ ಸಹಭಾಗಿತ್ವವು ಯೂನಿನಾರ್ ಹೆಸರಿನಲ್ಲಿ ಸೇವೆ ಒದಗಿಸುತ್ತಿದೆ. ಈ ಕಂಪೆನಿಗಳು ದೂರಸಂಪರ್ಕ ವಹಿವಾಟಿಗಗಿ ಭಾರಿ ಬಂಡವಾಳ ಹೂಡಿರುವ ಕಂಪೆನಿಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT