ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೆಯಲಾಗದ ಗಾಯಕ

Last Updated 17 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನಾನು ತುಂಬಾ ಚಿಕ್ಕವನಿದ್ದಾಗಿನಿಂದ ಪಿ.ಬಿ.ಶ್ರೀನಿವಾಸ್ ಅವರ ಮಧುರ ರಾಗದೊಳಗೆ ಮೀಯುತ್ತಾ, ಈಜಾಡುತ್ತಾ ಬೆಳೆದಿದ್ದೇನೆ. ಅವರ ಗಾನ `ಸುಧೆ' ಯನ್ನು ಆಗಾಗ ಕುಡಿದಿದ್ದೇನೆ.

ಅನೇಕಾನೇಕ ಹಾಡುಗಾರರನ್ನು, ಸಂಗೀತಗಾರರನ್ನು ಪರಿಚಯ ಮಾಡಿಕೊಂಡಿರುತ್ತೇನೆ. ಆದರೆ ಪಿ. ಬಿ. ಎಸ್. ರವರಲ್ಲಿರುವಂತೆ ಆ ಕಂಠದ ಸವಿರುಚಿ ಇನ್ಯಾರಲ್ಲಿಯೂ ನನಗೆ ದೊರೆತಿಲ್ಲ! ಅಂತಹ ಶಾರೀರ ಅವರಿಗೆ ಮಾತ್ರ ದೇವರು ಕೊಟ್ಟ ವರವೇ ಹೌದು. ಅವರು ಹಾಡಿರುವ ಸಾವಿರಾರು ಗೀತೆಗಳಲ್ಲಿ ಪ್ರಮುಖವಾಗಿ ಇಲ್ಲಿ ಮೂರನ್ನು ನೆನಪಿಸಿಕೊಳ್ಳುತ್ತೇನೆ.

(1) ಹೃದಯ ವೀಣೆ ಮಿಡಿಯೆ ತಾನೆ...; 
(2) ಕನ್ನಡದ ಕುಲದೇವಿ ಕಾಪಾಡು ಬಾ ತಾಯೆ...;
(3) ಮನವೆ ಮಂದಿರ ನ್ಯಾಯದೇಗುಲ.... ಈ ಹಾಡು ಸದಾ ನನ್ನನ್ನು ಭಾವಪರವಶತೆಗೊಳಿಸಿ - ನನ್ನನ್ನು ನಾನೇ ಮರೆಯುವಂತೆ ಮಾಡುತ್ತವೆ. ಸಂಸ್ಕೃತ ಶ್ಲೋಕಗಳನ್ನು ಕೂಡ ಸುಶ್ರಾವ್ಯವಾಗಿ - ಭಕ್ತಿ ಪೂರ್ವಕವಾಗಿ ಪಿಬಿಎಸ್ ಹಾಡಿರುವುದೂ ಕೂಡ ಗಮನಾರ್ಹ.

- ಎನ್. ವೇದಮೂರ್ತಿ,  ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT