ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲಾಲ ಮೇಲಿನ ದಾಳಿ: ಉಗ್ರಸಂಘಟನೆ ಧುರೀಣನ ತಲೆಗೆ 10 ಲಕ್ಷ ಅಮೆರಿಕನ್ ಡಾಲರ್

Last Updated 16 ಅಕ್ಟೋಬರ್ 2012, 9:35 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಪಾಕಿಸ್ತಾನದ 14ರ ಹರೆಯದ ಬಾಲಕಿ ಮಲಾಲ ಯೂಸುಫ್ ಝೈ ಮೇಲೆ ಮಾರಣಾಂತಿಕ ದಾಳಿ ನಡೆಸಿದ ತಾಲಿಬಾನ್ ತೆಹರಿಕ್-ಇ-ತಾಲಿಬಾನ್ ಉಗ್ರ ಸಂಘಟನೆಯ ನಾಯಕನನ್ನು ಹಿಡಿದು ಕೊಟ್ಟವರಿಗೆ ಹತ್ತು ಲಕ್ಷ ಅಮೆರಿಕನ್ ಡಾಲರ್ ಬಹುಮಾನವನ್ನು ಪಾಕಿಸ್ತಾನ ಘೋಷಿಸಿದೆ.

ಪಾಕಿಸ್ತಾನದ ಒಳಾಡಳಿತ ಸಚಿವ ರೆಹಮಾನ್ ಮಲ್ಲಿಕ್  ಅವರು ಇಲ್ಲಿ ಸಿಎನ್ ಎನ್ ಗೆ ನೀಡಿದ ಸಂದರ್ಶನ ಕಾಲದಲ್ಲಿ ಈ ಘೋಷಣೆ ಮಾಡಿದ್ದು, ಮಲಾಲಾ ಯೂಸುಫ್ ಝೈ ಮೇಲಿನ ದಾಳಿ ಸಂಚನ್ನು ಈ ಸಂಘಟನೆ ಆಫ್ಘಾನಿಸ್ತಾನದಲ್ಲಿ ರೂಪಿಸಿದೆ ಎಂದು ಆಪಾದಿಸಿದರು.
 
ಲಂಡನ್ ವರದಿ (ಐಎಎನ್ ಎಸ್): ಈ ಮಧ್ಯೆ ಸೋಮವಾರ ಪಾಕಿಸ್ತಾನದಿಂದ ಇಲ್ಲಿಗೆ ಕರೆತರಲಾದ ಮಲಾಲಾ ಅವರನ್ನು  ಕ್ವೀನ್ ಎಲಿಜೆಬೆತ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು  ವೈದ್ಯರು ಈಕೆ ಗುಣಮುಖಳಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಲಾಲಾ ಮೇಲೆ ನಡೆಸಿದ ದಾಳಿ ಇಡಿ ಪಾಕಿಸ್ತಾನದ ಬಾಲಕಿಯರ ಮೇಲೆ ನಡೆಸಿದ ದಾಳಿ ಎಂದು ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ತಿಳಿಸಿದ್ದಾರೆ.

 


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT