ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಮಲೆಗಳಲ್ಲಿ ಮದುಮಗಳು' ಕಾದಂಬರಿ ರಂಗಪ್ರಯೋಗ

Last Updated 9 ಏಪ್ರಿಲ್ 2013, 20:08 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರ `ಮಲೆಗಳಲ್ಲಿ ಮದುಮಗಳು' ಕಾದಂಬರಿಯ ರಂಗಪ್ರಯೋಗ ಏಪ್ರಿಲ್ 18ರಿಂದ ಮೇ 30ರವರೆಗೆ ರಾತ್ರಿ 9.30ರಿಂದ ಬೆಳಿಗ್ಗೆ 5.30ರವರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಆವರಣದ ಹಿಂಭಾಗದಲ್ಲಿರುವ ಕಲಾಗ್ರಾಮದಲ್ಲಿ ನಡೆಯಲಿದೆ' ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬಸವರಾಜು ಹೇಳಿದರು.

ಕಲಾಗ್ರಾಮದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಒಟ್ಟು 25 ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ವಾರದಲ್ಲಿ ನಾಲ್ಕು ದಿನ ಶನಿವಾರ, ಭಾನುವಾರ, ಮಂಗಳವಾರ ಮತ್ತು ಗುರುವಾರ ಪ್ರದರ್ಶನಗಳಿರಲಿವೆ.

ಏಕಕಾಲದಲ್ಲಿ ಒಂದು ಸಾವಿರ ಮಂದಿ ಪ್ರದರ್ಶನ ವೀಕ್ಷಿಸಬಹುದು. ಪ್ರವೇಶ ಶುಲ್ಕ  ರೂ 100 ಟಿಕೆಟ್‌ಗಳು ಕಲಾಗ್ರಾಮ, ವಾರ್ತಾ ಇಲಾಖೆ, ಕನ್ನಡ ಭವನದಲ್ಲಿ ಲಭ್ಯವಿರಲಿವೆ. ವಾರ್ತಾ  ಇಲಾಖೆಯ ವೆಬ್‌ಸೈಟ್‌ನಲ್ಲಿಯೂ ಟಿಕೆಟ್ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗುವುದು' ಎಂದು ಅವರು ತಿಳಿಸಿದರು.

`ರಂಗ ನಿರ್ದೇಶಕ ಸಿ.ಬಸವಲಿಂಗಯ್ಯ ಅವರ ನೇತೃತ್ವದ 70 ಮಂದಿ ಕಲಾವಿದರ ತಂಡ ನಾಟಕ ಪ್ರದರ್ಶಿಸಲಿದೆ. ಹಂಸಲೇಖ ನಾಟಕಕ್ಕೆ ಸಂಗೀತ ನೀಡಿದ್ದಾರೆ.

ಕೆರೆಯಂಗಳ, ಬಯಲೂರು, ಬಿದಿರುರಂಗ ಮತ್ತು ಹೊಂಗೆರಂಗ ಎಂಬ ನಾಲ್ಕು ವೇದಿಕೆಗಳು ಇರಲಿವೆ. ಪ್ರತಿ ವೇದಿಕೆಯಲ್ಲಿ 2.30 ಗಂಟೆ ಪ್ರದರ್ಶನ ನಡೆಯಲಿದೆ. ಒಂದು ವೇದಿಕೆಯಿಂದ ಮತ್ತೊಂದು ವೇದಿಕೆಗೆ ಪ್ರದರ್ಶನ ವರ್ಗಾವಣೆಯಾಗುವ ನಡುವೆ 15 ನಿಮಿಷ ವಿರಾಮವಿರಲಿದೆ. ಪ್ರದರ್ಶನದ ಒಟ್ಟು ಅವಧಿ ಒಂಬತ್ತು ಗಂಟೆ' ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT