ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆನಾಡಿನಲ್ಲಿ ಕೃಷಿ ತೋಟಗಾರಿಕೆ

Last Updated 17 ಜನವರಿ 2012, 19:30 IST
ಅಕ್ಷರ ಗಾತ್ರ

ಶಿವಮೊಗ್ಗ ಜಿಲ್ಲೆಗೆ ಸರ್ಕಾರವು ಇತ್ತೀಚಿಗೆ ಕೃಷಿ ತೋಟಗಾರಿಕೆ ವಿಶ್ವವಿದ್ಯಾಲಯವನ್ನು ಮಂಜೂರು ಮಾಡಿದೆ. ಆದರೆ ಈ ವಿಶ್ವವಿದ್ಯಾಲಯ ಬರೀ ಕೃಷಿಗೆ ಸಂಬಂಧಪಟ್ಟದ್ದು ಎಂದು ಹೇಳಲಾಗುತ್ತಿದೆ. ಕೆಲವು ರಾಜಕಾರಣಿಗಳೂ ಈ ಬಗ್ಗೆಯೇ ಒಲವು ತೋರುತ್ತಿದ್ದಾರೆ.

ಈ ವಿವಿ ವ್ಯಾಪ್ತಿಗೆ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ ಹಾಗೂ ಕೊಡಗು ಜಿಲ್ಲೆಗಳು ಬರುತ್ತವೆ. ಈ ಜಿಲ್ಲೆಗಳಲ್ಲಿ ತೋಟಗಾರಿಕೆ ಬೆಳೆಗಳು ಪ್ರಧಾನವಾಗಿದ್ದು (ಶೇ 60 ಕ್ಕೂ ಹೆಚ್ಚು), ಕೃಷಿ ಕ್ಷೇತ್ರ ಕೇವಲ ಶೇ12-15 ರಷ್ಟು ಮಾತ್ರ ಇದೆ.
 
ಬಂಜರು ನೆಲ ಮತ್ತು ಅರಣ್ಯ ಬೆಳೆಗಳು ಶೇ. 25 ರಷ್ಟಿವೆ. ಹೀಗಿರುವಾಗ ಬರೀ ಕೃಷಿಗೆ ಸಂಬಂಧಪಟ್ಟಂತೆ  ವಿಶ್ವವಿದ್ಯಾಲಯ ಮಾಡ ಹೊರಟಿರುವುದು ಸೂಕ್ತವಲ್ಲ.
ಆದ್ದರಿಂದ ಶಿವಮೊಗ್ಗ ವಿಶ್ವವಿದ್ಯಾಲಯವನ್ನು ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯವೆಂದು ಮಾಡಿ, ಒಂದೇ ಜಾಗದಲ್ಲಿ ಎಲ್ಲಾ ಮಾಹಿತಿಗಳು ಲಭ್ಯವಾಗಲು ಚಿಂತನೆ ಮಾಡಲಿ.
 


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT