ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೇಬೆನ್ನೂರು: ಜನಮನ ಸೆಳೆದ ಬೈಕ್ ರ‌್ಯಾಲಿ

Last Updated 12 ಅಕ್ಟೋಬರ್ 2011, 4:30 IST
ಅಕ್ಷರ ಗಾತ್ರ

ಮಲೇಬೆನ್ನೂರು: ಪ್ರಸಕ್ತ ದಿನ ಸಮಾಜದಲ್ಲಿ ಶಾಂತಿ ಸಾಮರಸ್ಯದ ಸಂದೇಶ ಸಾರುವ ಕಾರ‌್ಯಕ್ರಮ ಅವಶ್ಯ ಎಂದು ಶಾಸಕ ಬಿ.ಪಿ. ಹರೀಶ್ ಅಭಿಪ್ರಾಯಪಟ್ಟರು.

ಇಲ್ಲಿನ ಈಶ್ವರೀಯ ವಿಶ್ವವಿದ್ಯಾಲಯದ ಘಟಕದವರು ತಮ್ಮ ಸಂಸ್ಥೆಯ ಅಮೃತ ಮಹೋತ್ಸವ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ `ಬೈಕ್ ರ‌್ಯಾಲಿ~ಗೆ ಇಲ್ಲಿನ ಮುಖ್ಯವೃತ್ತದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ಈಶ್ವರೀಯ ವಿವಿಯವರು ನಿಸ್ವಾರ್ಥತೆಯಿಂದ ಅಧ್ಯಾತ್ಮ, ಶಾಂತಿ ಸೌಹಾರ್ದತೆ, ಸಮಾನತೆ, ದೇಹಾರೋಗ್ಯ ಕಾಪಾಡಲು ಮಾಡುತ್ತಿರುವ ಕೆಲಸ ಶ್ಲಾಘನೀಯ ಎಂದರು.

ಹೋಬಳಿ ವ್ಯಾಪ್ತಿಯ ಕುಂಬಳೂರು, ನಿಟ್ಟೂರು, ಆದಾಪುರ. ಬೂದಿಹಾಳು, ಹರಳಹಳ್ಳಿ, ಹಿರೆಹಾಲಿವಾಣ ಹಾಗೂ ಕೊಮಾರನಹಳ್ಳಿ ಗ್ರಾಮದಲ್ಲಿ ಶ್ವೇತವಸ್ತ್ರಧಾರಿಗಳ ತಂಡದ `ಬೈಕ್ ರ‌್ಯಾಲಿ~ ಸಂಚರಿಸಿತು.
ಸಂಸ್ಥೆ ಆವರಣದಲ್ಲಿ ಹಮ್ಮಿಕೊಂಡಿದ್ದ ಮುಕ್ತಾಯ ಸಮಾರಂಭದಲ್ಲಿ ರ‌್ಯಾಲಿಯಲ್ಲಿ ಪಾಲ್ಗೊಂಡವರಿಗೆ ಪಿಎಸ್‌ಐ ರಮೇಶ್ ನೆನೆಪಿನ ಕಾಣಿಕೆ ವಿತರಿಸಿದರು.

ಕುಂಬಳೂರಿನ ಶಂಭುಲಿಂಗಪ್ಪ, ವೀರಣ್ಣ, ಬೆನಕನಕೊಂಡಿ ಪಂಚಣ್ಣ, ವರ್ತಕ ವೆಂಕಟಾಚಲಪತಿ ಶ್ರೇಷ್ಠಿ, ಮಂಜುಳಾ, ರಾಜೇಶ್ವರಿ, ಶಾಂತಕ್ಕೆ ಹಾಗೂ ವಿವಿಧೆಡೆಯಿಂದ ಆಗಮಿಸಿದ ಸಂಸ್ಥೆಯ ಸದಸ್ಯರು ಹಾಜರಿದ್ದರು.
`ಗ್ರೋಮರ್~ ಶಾಖೆಗೆ ಚಾಲನೆ

ರೈತರಿಗೆ ಕಡಿಮೆ ದರದಲ್ಲಿ ರಸಗೊಬ್ಬರ, ಕೀಟನಾಶಕ, ಬಿತ್ತನೆಬೀಜ ಕ್ರಿಮಿನಾಶಕ ಇನ್ನಿತರ ಸಲಹೆ ಸೂಚನೆ ನೀಡುವುದು ಗ್ರೋಮರ್ ಸಂಸ್ಥೆ ಉದ್ದೇಶ ಎಂದು ಕಂಪೆನಿ ರಾಜ್ಯ ವ್ಯವಸ್ಥಾಪಕ ಪ್ರಭುಸ್ವಾಮಿ ತಿಳಿಸಿದರು.
ಇಲ್ಲಿನ ನಂದಿಗುಡಿ ರಸ್ತೆಯಲ್ಲಿ ನೂತನ ಶಾಖೆ ಉದ್ಘಾಟನಾ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಈಗಾಗಲೇ ಇಂತಹ 40ಕೇಂದ್ರ ಕಾರ್ಯ ನಿರ್ವಹಿಸುತ್ತಿದ್ದು. ದೊರೆಯುವ ಸೌಲಭ್ಯ ಮಾಹಿತಿ ನೀಡಿ ಸವಲತ್ತುಗಳ ಲಾಭ ಪಡೆಯಿರಿ ಎಂದರು.

ಸ್ಥಳೀಯ ಕೇಂದ್ರದಲ್ಲಿ ರೈತರು ಸದಸ್ಯತ್ವ ಪಡೆದಲ್ಲಿ ಮಣ್ಣು ಪರೀಕ್ಷೆ, ಬೆಳೆ ಪರಿಶೀಲನೆ ಉಚಿತವಾಗಿ ಮಾಡಲಾಗುವುದು. ಸದಸ್ಯರಿಗೆ ವಿಮೆ ಸೌಲಭ್ಯ ಇರುತ್ತದೆ. ಹೊಲದಲ್ಲಿ  ಕೆಲಸ ಮಾಡುವಾಗ ರೈತ ಆಕಸ್ಮಿಕವಾಗಿ ಮರಣ ಹೊಂದಿದರೆ ್ಙ 1 ಲಕ್ಷ ವಿಮೆ ಹಣ ಸಿಗುತ್ತದೆ ಎಂದು ವ್ಯವಸ್ಥಾಪಕ ಸಂತೋಷ್ ಕುಮಾರ್ ತಿಳಿಸಿದರು.

ಸಹಾಯಕ ಕೃಷಿ ನಿರ್ದೇಶಕ ರಾಜಶೇಖರಪ್ಪ, ಹಿರಿಯ ವ್ಯವಸ್ಥಾಪಕ ಎನ್.ಡಿ. ಚಾರಿ ಹಾಗೂ ರೈತರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT