ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೇಷ್ಯನ್ನರಿಗೆ ಭಾರತದ ಸ್ಕಾಲರ್‌ಶಿಪ್

Last Updated 18 ಜನವರಿ 2011, 19:30 IST
ಅಕ್ಷರ ಗಾತ್ರ

ಕ್ವಾಲಾಲಂಪುರ (ಐಎಎನ್‌ಎಸ್): ಭಾರತದಲ್ಲಿ ಆಯುರ್ವೇದ, ಸಿದ್ಧ, ಹೋಮಿಯೋಪಥಿ ಮತ್ತು ಯುನಾನಿ ವಿಷಯಗಳ ಮೇಲೆ ಪದವಿ ವ್ಯಾಸಂಗ ಮಾಡಲು ಇಚ್ಛಿಸುವ ಮಲೇಷ್ಯಾದ 20 ಮಂದಿ ವಿದ್ಯಾರ್ಥಿಗಳಿಗೆ 2011-12ರ ವರ್ಷದಿಂದ ಆರಂಭವಾಗಿ ಮುಂಬರುವ ವರ್ಷಗಳಲ್ಲಿ ಪ್ರತಿ ವರ್ಷ ಸ್ಕಾಲರ್‌ಶಿಪ್ ನೀಡಲು ಭಾರತ ಸರ್ಕಾರ ಮುಂದಾಗಿದೆ.

ಕಳೆದ ಅಕ್ಟೋಬರ್‌ನಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಮಲೇಷ್ಯಾಕ್ಕೆ ಭೇಟಿ ನೀಡಿದ್ದರ ಫಲಶ್ರುತಿಯಾಗಿ ಈ ಕೊಡುಗೆ ದೊರೆತಿದೆ. ಹೈಕಮಿಷನ್ ಈ ಹಿನ್ನೆಲೆಯಲ್ಲಿ ಮಲೇಷ್ಯಾ ನಾಗರಿಕರಿಂದ ಸ್ಕಾಲರ್‌ಶಿಪ್‌ಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಬಿಎಎಂಎಸ್‌ಗೆ 11, ಬಿಎಸ್‌ಎಂಎಸ್‌ಗೆ 5, ಬಿಯುಎಂಎಸ್ ಮತ್ತು ಬಿಎಚ್‌ಎಂಎಸ್ ಪದವಿಗಳಿಗೆ ತಲಾ ಎರಡು ಸ್ಕಾಲರ್‌ಶಿಪ್‌ಗಳು ಸಿಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT