ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಲಾಡಿಹಳ್ಳಿ: ಬಿ.ಇಡಿ ಕಾಲೇಜಿಗೆ ಶೇ 94.89 ಫಲಿತಾಂಶ

Last Updated 18 ಜನವರಿ 2011, 8:30 IST
ಅಕ್ಷರ ಗಾತ್ರ

ಹೊಳಲ್ಕೆರೆ: ತಾಲ್ಲೂಕಿನ ಮಲ್ಲಾಡಿಹಳ್ಳಿಯ ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಕ್ಕೆ ಬಿ. ಇಡಿಯಲ್ಲಿ ಶೇ. 94.89 ಫಲಿತಾಂಶ ಬಂದಿದೆ. ಪರೀಕ್ಷೆಗೆ ಕುಳಿತ 98 ವಿದ್ಯಾರ್ಥಿಗಳಲ್ಲಿ 92 ವಿದ್ಯಾರ್ಥಿಗಳು ಉನ್ನತ ಶ್ರೇಣಿ ಮತ್ತು ಒಬ್ಬರು ಪ್ರಥಮ ಶ್ರೇಣಿ ಪಡೆದಿದ್ದಾರೆ.857 ಅಂಕಗಳನ್ನು ಪಡೆದ ಶಾಂತಕುಮಾರ ಪ್ರಥಮ ಮತ್ತು 845 ಅಂಕಗಳನ್ನು ಪಡೆದಿರುವ ಶ್ರೀವಿದ್ಯಾ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಉತ್ತಮ ಫಲಿತಾಂಶ ಬರಲು ಕಾರಣರಾದ ವಿದ್ಯಾರ್ಥಿಗಳನ್ನು ಅನಾಥ ಸೇವಾಶ್ರಮದ ಅಧ್ಯಕ್ಷರಾದ ಡಾ.ಶಿವಮೂರ್ತಿ ಮುರುಘಾ ಶರಣರು, ಆಡಳಿತಾಧಿಕಾರಿ ರಾಘವೇಂದ್ರ ಪಾಟೀಲ, ಸಹಾಯಕ ಆಡಳಿತಾಧಿಕಾರಿಗಳಾದ ಕೆ.ಡಿ. ಬಡಿಗೇರ, ಶಿವರಾಮಯ್ಯ ಮತ್ತು ಕಾಲೇಜಿನ ಸಿಬ್ಬಂದಿ ಅಭಿನಂದಿಸಿದೆ.

ವಿವೇಕಾನಂದ ಜಯಂತಿ
ಇಲ್ಲಿನ ಎಸ್‌ಎಸ್‌ಬಿಎಸ್ ಡಿ.ಇಡಿ ಕಾಲೇಜಿನಲ್ಲಿ ಈಚೆಗೆ ವಿವೇಕಾನಂದ ಜಯಂತಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಕೃತ ಪಂಡಿತ ಜಿ.ಎಂ. ಗುರುಮೂರ್ತಿ ಮಾತನಾಡಿ, ವಿವೇಕಾನಂದರ ಆದರ್ಶಗಳು ಇಂದಿನ ಯುವಕರಿಗೆ ಸ್ಫೂರ್ತಿಯಾಗಿವೆ. ಇಂದಿನ ಯುವಕರಲ್ಲಿ ದುಶ್ಚಟಗಳು ಹೆಚ್ಚಾಗುತ್ತಿದ್ದು, ದೇಶಾಭಿಮಾನ, ಭಾಷಾಭಿಮಾನ ಕಡಿಮೆ ಆಗುತ್ತವೆ. ಗುರು-ಹಿರಿಯರಲ್ಲಿ ಗೌರವ ಭಾವನೆ ಮರೆಯಾಗುತ್ತಿದೆ. ಇವರಿಗೆ ವಿವೇಕಾನಂದರ ಜೀವನ ಮೌಲ್ಯಗಳನ್ನು ತಿಳಿಸುವುದರಿಂದ ಆರೋಗ್ಯವಂತ ಸಮಾಜವನ್ನು ನಿರ್ಮಿಸಬಹುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಬಿದರಹಳ್ಳಿ ಕೃಷ್ಣಮೂರ್ತಿ ಮಾತನಾಡಿ,  ದೇಶಭಕ್ತರ ಜೀವನದ ಬಗ್ಗೆ ಓದುವುದರಿಂದ ಮನಸ್ಸು ಪರಿವರ್ತನೆಯಾಗುತ್ತದೆ. ಎಂದರು.
ಉಪನ್ಯಾಸಕ ತಿಮ್ಮರಾಜು, ಎಂ. ರಂಗನಾಥ್, ಎಸ್. ಬಸವರಾಜ್, ಶೇಷಪ್ಪ, ಸಂತೋಷ್‌ಕುಮಾರ್, ಪರಮೇಶ್ವರಪ್ಪ, ಪಿ.ವಿ. ಬಸವರಾಜು ಮತ್ತಿತರರು ಉಪಸ್ಥಿತರಿದ್ದರು.
ಮಂಜುಳಾ ಸ್ವಾಗತಿಸಿದರು. ಮಧು ಕಾರ್ಯಕ್ರಮ ನಿರೂಪಿಸಿದರು. ಚೈತ್ರಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT