ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಲಿಕಾ ವರ್ಗಾವಣೆಗೆ ವಿರೋಧ

Last Updated 12 ಅಕ್ಟೋಬರ್ 2012, 8:20 IST
ಅಕ್ಷರ ಗಾತ್ರ

ಸಂಡೂರು: ನಂದಿಹಳ್ಳಿ ವಿಶ್ವವಿದ್ಯಾ ಲಯ ಸ್ಥಾಳಾಂತರವಾಗುವುದನ್ನು ತಪ್ಪಿಸಿ, ಗ್ರಾಮೀಣ ಭಾಗದ ಸಾವಿರಾರು ಬಡವಿದ್ಯಾರ್ಥಿಗಳು ಉನ್ನತ ಶಿಕ್ಷಣ ಕಲಿಯಲು ಕಾರಣರಾಗಿ 16 ವರ್ಷ ಗಳಿಂದ ಕೇಂದ್ರದಲ್ಲಿ ಕಾರ್ಯನಿರ್ವಹಿ ಸುತ್ತಿರುವ ಡಾ.ಮಲ್ಲಿಕಾ ಘಂಟಿ ಅವರನ್ನು ಏಕಾಏಕಿ ವರ್ಗಮಾಡಿ ರುವುದು ಕುಲಪತಿಗಳ ಸರ್ವಾಧಿಕಾರಿ ಧೋರಣೆಗೆಯಾಗಿದೆ ಎಂದು ನಾಗರಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಟಿ.ಎಂ.ಶಿವಕುಮಾರ್ ತಿಳಿಸಿದರು.

ಅವರು, ನಂದಿಹಳ್ಳಿ  ಸ್ನಾತಕೋತ್ತರ ಕೇಂದ್ರದ ಉಪನ್ಯಾಕರಾದ ಡಾ.ಮಲ್ಲಿಕಾ ಘಂಟಿಯವರನ್ನು ಗುಲ್ಬರ್ಗ ವಿಶ್ವವಿದ್ಯಾ ಲಯಕ್ಕೆ ವರ್ಗಾವಣೆ ಮಾಡಿಸಿರುವ  ವಿಜಯನಗರ ಶ್ರೀಕೃಷ್ಣ ದೇವರಾಯ ವಿವಿ ಕುಲಪತಿ ಮಂಜಪ್ಪ ಡಿ.ಹೊಸಮನೆ ವಿರುದ್ಧ ಶುಕ್ರವಾರ ನಡೆದ ಪ್ರತಿಭಟನೆ ಯಲ್ಲಿ ಭಾಗವಹಿಸಿ ಮಾತನಾಡಿದರು.

ಮಲ್ಲಿಕಾ ಘಂಟಿಯವರ ವರ್ಗಾವಣೆ ಯನ್ನು ರದ್ದುಗೊಳಿಸಿ ಈ ಭಾಗದ ರನ್ನೇ ಕುಲಪತಿಗಳನ್ನಾಗಿ ನೇಮಕ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಕಸಾಪ ಅಧ್ಯಕ್ಷ ಅಯೂಬ್, ಟೇಲರ್ ಸಂಘದ ಅಧ್ಯಕ್ಷ ತಾಜುದ್ದೀನ್, ಪರಿಸರ ವೇದಿಕೆಯ ಸತೀಶ್, ಕರವೇದ ಕುಮಾರ ಸ್ವಾಮಿ, ಚೋರನೂರು ಅಡಿವೆಪ್ಪ,   ಮಾತನಾ ಡಿದರು.

ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿದಂತೆ ಕುರುಬ ಸಮಾಜದ ಮುಖಂಡರಾದ ಸತ್ಯಪ್ಪ, ಮಲ್ಲೇಶಪ್ಪ, ಸುರೇಶ್, ಶಿಕ್ಷಕ ಶಿವರಾಮ      ಮುಂತಾ ದವರು ಭಾಗವಹಿಸಿದ್ದರು. ಎಪಿಎಂಸಿ ಮಾರುಕಟ್ಟೆಯಿಂದ ರ‌್ಯಾಲಿ ಆರಂಭಿಸಿದ ವಿದ್ಯಾರ್ಥಿಗಳು ಕುಲಪತಿಗಳ ವಿರುದ್ಧ ಘೋಷಣೆ ಕೂಗಿದರು. ತಾಲ್ಲೂಕು ಕಚೇರಿಗೆ      ತೆರಳಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT